More

    ಭಾರತಕ್ಕೆ ಬುದ್ಧಿ ಕಲಿಸ್ತೇನಂತ ಹೋದ ಪಾಕ್​ಗೆ ಹೀಗೆ ಮುಖಭಂಗ ಆಗೋದಾ…!

    ಇಸ್ಲಾಮಾಬಾದ್: ಕರೊನಾ ಸೋಂಕಿನ ಆತಂಕದ ನಡುವೆಯೂ ಪಾಕಿಸ್ತಾನಕ್ಕೆ ಸದಾ ಭಾರತವನ್ನು ನಾಶ ಮಾಡುವ ಚಿಂತೆಯೇ. ಆದರೆ ಅದಕ್ಕೆ ಪ್ರತ್ಯುತ್ತರ ನೀಡುವಲ್ಲಿ ಭಾರತವೇನೂ ಹಿಂದೆ ಬಿದ್ದಿಲ್ಲ. ಪ್ರತ್ಯುತ್ತರ ನೀಡುವ ಭಾರತಕ್ಕೆ ಬುದ್ಧಿ ಕಲಿಸಲು ಹೋಗಿ ಪಾಕಿಸ್ತಾನ ಕೈಸುಟ್ಟುಕೊಂಡಿರುವ ಘಟನೆಗಳು ಹಿಂದೆಯೂ ಆಗಿವೆ.

    ಇದೀಗ ಹವಾಮಾನ ವರದಿಯ ಸರದಿ! ಕೆಲ ದಿನಗಳ ಹಿಂದೆ ಭಾರತವು ತನ್ನ ಹವಾಮಾನ ವರದಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರದೇಶಗಳನ್ನೂ ಸೇರಿಸಿತ್ತು. ಅಲ್ಲಿಯ ಹವಾಮಾನ ವರದಿಯನ್ನೂ ಪ್ರಕಟಿಸಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್, ಲಡಾಕ್‌ನ ಉತ್ತರದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ಟಾನ್ ಪ್ರದೇಶಗಳ ವರದಿ ಬಿತ್ತರಗೊಂಡಿತ್ತು.

    ಇದನ್ನೂ ಓದಿ: ಮುಂಬೈನಿಂದ ವಿಜಯಪುರಕ್ಕೆ ಸದ್ದಿಲ್ಲದೇ ಕಾಲಿಟ್ಟರು ತಬ್ಲಿಘಿಗಳು- ಜಿಲ್ಲಾಡಳಿತ ಮಾಡಿದ್ದೇನು?

    ಈ ಕುರಿತು ಮಾಹಿತಿ ನೀಡಿದ್ದ ಜಮ್ಮು ಮತ್ತು ಕಾಶ್ಮೀರ ಹವಾಮಾನ ಉಪವಿಭಾಗದ ಮುಖ್ಯಸ್ಥ ಕುಲದೀಪ್ ಶ್ರೀವಾತ್ಸವ್, ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗಗಳನ್ನು ಭಾರತದ ಭೂಭಾಗಕ್ಕೆ ಸೇರಿಸಿ ಹವಾಮಾನ ವರದಿ ನೀಡಲಾಗುವುದು ಎನ್ನುವ ಮೂಲಕ ಈ ಹೆಜ್ಜೆ ಇಡಲಾಗಿದೆ.

    ಇದರಿಂದ ಮುಖಭಂಗ ಅನುಭವಿಸಿದ ಪಾಕಿಸ್ತಾನ ಭಾರತಕ್ಕೆ ಸರಿಯಾದ ಬುದ್ಧಿ ಕಲಿಸುತ್ತೇನೆ ಎಂದುಕೊಂಡಿತ್ತು. ಭಾರತದ ಭಾಗವನ್ನೇ ತಾವು ಆಕ್ರಮಿಸಿಕೊಂಡಿರುವ ಸತ್ಯವನ್ನು ಮರೆತು ಭಾರತಕ್ಕೆ ಬುದ್ಧಿ ಕಲಿಸುವ ತಂತ್ರಗಾರಿಕೆ ರೂಪಿಸಿತ್ತು.

    ಇದನ್ನೂ ಓದಿ: ವಿಶ್ವವೇ ಕೊಂಡಾಡಿದ ಪೋಖ್ರಾನ್​ ಅಣ್ವಸ್ತ್ರ ಪರೀಕ್ಷೆಗೆ 22: ವಾಜಪೇಯಿ ನೆನೆದ ಪ್ರಧಾನಿ ಮೋದಿ

    ಭಾರತ ಮಾಡಿದಂತೆಯೇ ತಾನೂ ಮಾಡಬೇಕು ಎಂದುಕೊಂಡ ಪಾಕಿಸ್ತಾನ, ಲಡಾಖ್​ ತನಗೇ ಸೇರಿದ್ದು ಎಂದು ಹೇಳುವ ಭರದಲ್ಲಿ ಈಗ ಎಡವಟ್ಟು ಮಾಡಿಕೊಂಡುಬಿಟ್ಟಿದೆ. ಹವಾಮಾನ ವರದಿಯಲ್ಲಿ ತಪ್ಪು ಅಂಕಿ ಅಂಶ ನೀಡಿರುವುದು ನೆಟ್ಟಿಗರಿಗೆ ಪಾಕಿಸ್ತಾನವನ್ನು ಟ್ರೋಲ್ ಮಾಡಲು ಅವಕಾಶ ಒದಗಿಸಿದೆ.

    ಅದೇನೆಂದರೆ ಲಡಾಖ್‌ ಹವಾಮಾನ ವರದಿ ಪ್ರಕಟಿಸಿದ ಪಾಕಿಸ್ತಾನ, ಲಡಾಕ್‌ನಲ್ಲಿ ಅತೀ ಹೆಚ್ಚು (Maximum) ಮೈನಸ್​ 4 ಡಿಗ್ರಿ ಸೆಲ್ಸಿಯಸ್ ಹಾಗೂ ಅತೀ ಕಡಿಮೆ (Minimum) ಮೈನಸ್​ 1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ತಪ್ಪಾಗಿ ಮಾಹಿತಿ ನೀಡಿದ್ದಾನೆ. ಅಸಲಿಗೆ ಇದು ಉಲ್ಟಾ ಆಗಬೇಕಿತ್ತು. ಮೈನಸ್​ 1 ಅತಿ ಹೆಚ್ಚು ತಾಪಮಾನವಾಗಿದ್ದು, ಮೈನಸ್​ 4 ಕಡಿಮೆ ಎಂದಾಗಬೇಕಿತ್ತು.

    ಇದನ್ನೂ ಓದಿ: ಹೀಗೂ ಉಂಟು! ಚಂದ್ರನಲ್ಲೂ ಬೇಕು ಮಾನವ ಮೂತ್ರ, ಏಕೆ ಅಂತೀರಾ?

    ಹವಾಮಾನ ವರದಿಗಾರ ಈ ಎಡವಟ್ಟು ಮಾಡಿದ್ದಲ್ಲದೇ ಅದನ್ನು ಪಾಕಿಸ್ತಾನ ತನ್ನ ಟ್ವಿಟರ್​ ಅಕೌಂಟ್​ನಲ್ಲಿಯೂ ಶೇರ್​ ಮಾಡಿದೆ. ತಾನು ಈ ರೀತಿ ಭಾರತಕ್ಕೆ ಬುದ್ಧಿ ಕಲಿಸಿರುವುದು ತಿಳಿಯಲಿ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅತಿಹೆಚ್ಚು ಶೇರ್​ ಮಾಡಲಾಗಿದೆ.

    ಆದರೆ ದುರದೃಷ್ಟ ಎಂದರೆ ಈ ತಪ್ಪನ್ನು ಯಾರೂ ಗಮನಿಸಿರಲಿಲ್ಲ. ಆದರೆ ನೆಟ್ಟಿಗರು ಬಹಳ ಜಾಣರು. ಇದೀಗ ತಪ್ಪು ಮಾಹಿತಿ ಎಂದು ತಿಳಿದ ಕಾರಣ, ಭಾರಿ ಟ್ರೋಲ್​ ಆಗುತ್ತಿದೆ. ಇದು ಚಿಕ್ಕ ಸಂಗತಿ ಎನಿಸಿದರೂ ಭಾರತಕ್ಕೆ ಬುದ್ಧಿ ಕಲಿಸುವ ಸಲುವಾಗಿ ಈ ರೀತಿ ಮಾಡಲು ಹೋಗಿದ್ದ ಕಾರಣ, ಇನ್ನೂ ಹೆಚ್ಚಿನ ಟ್ರೋಲ್​ ಅನುಭವಿಸಬೇಕಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts