More

    ಹೀಗೂ ಉಂಟು! ಚಂದ್ರನಲ್ಲೂ ಬೇಕು ಮಾನವ ಮೂತ್ರ, ಏಕೆ ಅಂತೀರಾ?

    ಬರ್ಲಿನ್: ಬಾಹ್ಯಾಕಾಶದ ಕುರಿತು ನಡೆಸುತ್ತಿರುವ ಸಂಶೋಧನೆಗಳು ಒಂದಕ್ಕಿಂತ ಒಂದು ಅಚ್ಚರಿ ಎನಿಸುವಂಥ ಫಲಿತಾಂಶವನ್ನು ತರುತ್ತದೆ. ಹಿಂದೆದೂ ಕೇಳರಿಯದ ಅದ್ಭುತ ಸಂಶೋಧನೆಗಳು ನಡೆಯುತ್ತಲೇ ಇವೆ.

    ಅದರದ್ದೇ ಮುಂದುವರಿದ ಭಾಗವಾಗಿದೆ ಮನುಷ್ಯನ ಮೂತ್ರ. ಚಂದ್ರಲೋಕದ ಮೇಲೆ ಈಗಾಗಲೇ ವಿಶಿಷ್ಟ, ವಿಶೇಷ ರೀತಿಯ ಸಂಶೋಧನೆಗಳು ನಡೆದಿವೆ. ಅಲ್ಲಿ ನೆಲೆಸಲು ಸಾಧ್ಯವೇ ಎಂಬ ಬಗೆಗಿನ ಸಾಧ್ಯಾಸಾಧ್ಯತೆಗಳ ಬಗ್ಗೂ ಅಧ್ಯಯನ ನಡೆಯುತ್ತಿದೆ. ಇದೀಗ ಮಾನವನ ಮೂತ್ರಕ್ಕೂ ಚಂದ್ರನಿಗೂ ಸಂಬಂಧ ಇರುವ ಬಗ್ಗೆ ಸಂಶೋಧನೆ ನಡೆದಿದೆ.

    ಅದೇನೆಂದರೆ, ಮಾನವನ ಮೂತ್ರ ಚಂದ್ರಗ್ರಹದಲ್ಲಿ ಕಾಂಕ್ರೀಟ್ ತಯಾರಿಕೆಗೆ ಸಹಕಾರಿಯಾಗಲಿದೆ ಎಂದು ಯುರೋಪ್​ನ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

    ಇದನ್ನೂ ಓದಿ: ಹೊಸ ಊರುಗಳಿಗೂ ಒಕ್ಕರಿಸಿತಲ್ಲ ಕೊರನಾ! ನಿಮ್ಮೂರಿನ ವಿವರ ಇಲ್ಲಿದೆ ನೋಡಿ…

    ಮನುಷ್ಯನ ಮೂತ್ರದಲ್ಲಿ ಇರುವ ಮುಖ್ಯ ಸಾವಯವ ಸಂಯುಕ್ತ ವಸ್ತು ಯೂರಿಯಾ ಚಂದ್ರನ ಮೇಲೆ ಕಟ್ಟಡ ನಿರ್ಮಿಸುವಾಗ ಕಾಂಕ್ರೀಟ್ ತಯಾರಿಗೆ ಮಿಶ್ರಣ ಮಾಡಲು ಬಳಕೆಯಾಗಬಹುದು ಎಂದಿದ್ದಾರೆ. ಚಂದ್ರನ ಮೇಲ್ಮೈ ಮೇಲೆ ದೊರಕುವ ಪೌಡರ್​ನಂಥ ಮಣ್ಣನ್ನು ಕಾಂಕ್ರೀಟ್ ತಯಾರಿಕೆಗೆ ಬಳಸಲಾಗುತ್ತದೆ.

    ಕಾಂಕ್ರೀಟ್ ತಯಾರಿಕೆಯಲ್ಲಿ ಮನುಷ್ಯನ ಮೂತ್ರದಲ್ಲಿರುವ ಯೂರಿಯಾ ಹದ ಮಿಶ್ರಣಕ್ಕೆ ಸಹಾಯ ಮಾಡುತ್ತದೆ ಎಂಬುದು ಸಂಶೋಧಕರ ವಾದ.

    ಇದನ್ನೂ ಓದಿ: ಸ್ಪಿರುಲಿನಾ ಕರೊನಾಕ್ಕೆ ರಾಮಬಾಣವೆ? ಸಂಶೋಧನಾಲಯ ಏನು ಹೇಳಿದೆ?

    ಸದ್ಯ ಚಂದ್ರನ ಮೇಲ್ಮೈ ಮೇಲೆ ಲಭ್ಯವಾಗುವ ವಸ್ತುಗಳನ್ನು ಮಾತ್ರ ಬಳಕೆ ಮಾಡುವ ಸಾಧ್ಯತೆಯಿರುವುದರಿಂದ ಅಲ್ಲಿ ನಿರ್ಮಾಣಕ್ಕೆ ಭೂಮಿಯಿಂದ ವಸ್ತುಗಳನ್ನು ಪೂರೈಸುವ ಅವಶ್ಯಕತೆ ಇದರಿಂದ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

    ಆದ್ದರಿಂದ ಒಬ್ಬ ವ್ಯಕ್ತಿಯು ಪ್ರತಿದಿನ ಉತ್ಪಾದಿಸುವ 1.5 ಲೀಟರ್ (3.2 ಪಿಂಟ್) ಮೂತ್ರ ತ್ಯಾಜ್ಯವು ಬಾಹ್ಯಾಕಾಶ ಪರಿಶೋಧನೆಗೆ ಭರವಸೆಯ ಉಪ ಉತ್ಪನ್ನವಾಗಬಹುದು ಎಂದು ಅವರ ಅಂಬೋಣ.
    (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts