More

    ಪಿಒಕೆಯ ಸ್ಕದ್ರು ವಾಯುನೆಲೆಯಲ್ಲಿ ಇಳಿದಿವೆ ಪಾಕ್‍ನ ಜೆ-17 ಫೈಟರ್ ಜೆಟ್‍ಗಳು!

    ನವದೆಹಲಿ: ಜಮ್ಮು -ಕಾಶ್ಮೀರದ ಗಡಿಭಾಗದಲ್ಲಿ ಅತಿಕ್ರಮಣ ನಡೆಸಿಕೊಂಡು ಚೀನಾ ಒಂದೆಡೆ ತಕರಾರು ಮಾಡುತ್ತಿದ್ದರೆ, ಇನ್ನೊಂದೆಡೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೇನಾ ಕವಾಯತಿನ ನೆಪದಲ್ಲಿ ಜೆ-17 ಫೈಟರ್ ಜೆಟ್ ವಿಮಾನಗಳನ್ನು ಇಳಿಸಿದೆ ಪಾಕಿಸ್ತಾನ!

    ಲಡಾಖ‍್ ಭಾಗದಲ್ಲಿ ಚೀನಾ ಅತಿಕ್ರಮಣ ನಡೆಸಿ ಕಳೆದ ಮೇ ತಿಂಗಳಿಂದ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದೆ. ಈ ನಡುವೆ, ಪಾಕಿಸ್ತಾನವನ್ನು ಭಾರತದ ಮೇಲೆ ಛೂ ಬಿಟ್ಟಿರುವ ಚೀನಾ ಆ ಮೂಲಕ ಭಾರತವನ್ನು ತನ್ನ ಹಿಡಿತದಲ್ಲಿರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಇದಕ್ಕೆ ಪೂರಕವಾಗಿಯೇ ಈಗ ಚೀನಾದ ನಿರ್ದೇಶನದ ಮೇರೆಗೆ ಪಾಕಿಸ್ತಾನ ಈ ಸಂದರ್ಭದಲ್ಲಿ ಮಿಲಿಟರಿ ಕವಾಯತಿಗೆ ಜೆ-17 ಫೈಟರ್ ವಿಮಾನಗಳನ್ನು ಪಿಒಕೆಯಲ್ಲಿ ಇಳಿಸಿದೆ.

    ಇದನ್ನೂ ಓದಿ: ಸೂಪರ್ ಸ್ಪ್ರೆಡರ್ ಆಗಲು ಇಸ್ಲಾಮಿಕ್ ಸ್ಟೇಟ್ಸ್ ಕರೆ –  ಮೌಲಾನಾ ಸಾದ್‍,  ಜಮಾತನ್ನು ಹಾಡಿ ಹೊಗಳಿದ ಐಎಸ್!

    ಜುಲೈ 24-25ರಂದು ಪಾಕಿಸ್ತಾನದ ವಾಯುಪಡೆ ಮುಖ್ಯಸ್ಥ ಮಾರ್ಷೆಲ್‍ ಮುಜಾಹಿದ್ ಅನ್ವರ್‍ ಖಾನ್ ಪಿಒಕೆಗೆ ಭೇಟಿ ನೀಡಿದ್ದು, ಅಲ್ಲಿ ಸಭೆಗಳನ್ನು ನಡೆಸಿದ್ದರು. ಲಡಾಕ್‍ನಲ್ಲಿ ಚೀನಾ ಪಡೆ ಎಲ್‍ಎಸಿಯಲ್ಲಿ ಹಿಂದೆಗೆಯಲು ಒಪ್ಪಿಗೆ ನೀಡಿರುವಾಗಲೇ ಈ ಬೆಳವಣಿಗೆ ನಡೆದಿದ್ದು ಗಮನಸೆಳೆದಿದೆ. ಕೆಲವು ಮೂಲಗಳ ಮಾಹಿತಿ ಪ್ರಕಾರ, ಪಾಕಿಸ್ತಾನ ಮತ್ತು ಚೀನಾಗಳು ಎರಡೂ ಕಡೆಗಳಿಂದ ಏಕಕಾಲದಲ್ಲಿ ದಾಳಿ ನಡೆಸುವುದಕ್ಕೆ ಸಿದ್ಧತೆ ನಡೆಸಿಕೊಂಡಿವೆ. ಮತ್ತು ಆಯಕಟ್ಟಿನ ಜಾಗಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿವೆ. (ಏಜೆನ್ಸೀಸ್‍)

    ಬಹುತೇಕ ಉಗ್ರ ಸಂಘಟನೆಗಳಿಗೆ ಪಾಕ್‍ ನಂಟು: ವಿಶ್ವಸಂಸ್ಥೆ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts