More

    ಜಿಂಬಾಬ್ವೆ ಎದುರು ಟಿ20 ಸರಣಿ ಕ್ಲೀನ್‌ಸ್ವೀಪ್ ಮಾಡಿದ ಪಾಕಿಸ್ತಾನ

    ರಾವಲ್ಪಿಂಡಿ: ಉಸ್ಮಾನ್ ಖಾದೀರ್ (13ಕ್ಕೆ 4) ಹಾಗೂ ಇಮಾದ್ ವಾಸೀಂ (27ಕ್ಕೆ2) ಜೋಡಿಯ ಮಾರಕ ದಾಳಿಗೆ ನಲುಗಿದ ಪ್ರವಾಸಿ ಜಿಂಬಾಬ್ವೆ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡಕ್ಕೆ 8 ವಿಕೆಟ್‌ಗಳಿಂದ ಶರಣಾಯಿತು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 3-0 ಯಿಂದ ಕ್ಲೀನ್‌ಸ್ವೀಪ್ ಸಾಧಿಸಿತು.
    ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 9 ವಿಕೆಟ್‌ಗೆ 129 ರನ್ ಪೇರಿಸಿತು. ಪ್ರತಿಯಾಗಿ ಪಾಕಿಸ್ತಾನ ತಂಡ, ಅಬ್ದುಲ್ಲಾ ಶಫೀಕ್ (41*ರನ್ , 33 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಖುಷ್‌ದಿಲ್ ಷಾ (36*ರನ್, 15 ಎಸೆತ, 3 ಬೌಂಡರಿ, 3 ಸಿಕ್ಸರ್) ಜೋಡಿ ಮುರಿಯದ 3ನೇ ವಿಕೆಟ್‌ಗೆ 51 ರನ್ ಪೇರಿಸಿದ ಫಲವಾಗಿ 15.2 ಓವರ್‌ಗಳಲ್ಲಿ 2 ವಿಕೆಟ್‌ಗೆ 130 ರನ್‌ಗಳಿಸಿ ಜಯದ ನಗೆ ಬೀರಿತು.

    ಜಿಂಬಾಬ್ವೆ : 9 ವಿಕೆಟ್‌ಗೆ 129 (ಚಾಮು ಚಿಬಾಬಾ 31, ಡೊನಾಲ್ಡ್ ತಿರಿಪಾನೊ 28, ಉಸ್ಮಾನ್ ಖಾದೀರ್ 13ಕ್ಕೆ 4, ಇಮಾದ್ ವಾಸೀಂ 27ಕ್ಕೆ 2, ಹ್ಯಾರಿಸ್ ರ್ೌ 38ಕ್ಕೆ 1), ಪಾಕಿಸ್ತಾನ: 15.2 ಓವರ್‌ಗಳಲ್ಲಿ 2 ವಿಕೆಟ್‌ಗೆ 130 (ಖಾರ್ ಜಮಾನ್ 21, ಅಬ್ದುಲ್ಲಾ ಶಫಿಕ್ 41*, ಹೈದರ್ ಅಲಿ 27, ಖುಷ್‌ದಿಲ್ ಷಾ 36*, ವೆಲಿಂಗ್ಟನ್ ಮಸಕಜ 19ಕ್ಕೆ 1, ಮಿಲ್ಟೊನ್ ಶುಂಬಾ 28ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts