More

    ವೇಡ್-ಸ್ಟೋಯಿನಿಸ್ ಸಾಹಸ; ಪಾಕ್‌ಗೆ ಶಾಕ್ ಕೊಟ್ಟು ಫೈನಲ್‌ಗೇರಿದ ಆಸೀಸ್

    ದುಬೈ: ಮಧ್ಯಮ ಕ್ರಮಾಂಕ ಬ್ಯಾಟರ್‌ಗಳಾದ ಮಾರ್ಕಸ್ ಸ್ಟೋಯಿನಿಸ್ (40 ರನ್, 31 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಮ್ಯಾಥ್ಯೂ ವೇಡ್ (41*ರನ್, 17 ಎಸೆತ, 2 ಬೌಂಡರಿ, 4 ಸಿಕ್ಸರ್) ಜೋಡಿದ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ೈನಲ್‌ಗೇರಿದ ಸಾಧನೆ ಮಾಡಿದೆ. ಆರನ್ ಫಿಂಚ್ ಪಡೆ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೇರಿತು. ಆಸೀಸ್ ಪಾಲಿಗೆ ಆಪತ್ಬಾಂಧವರಂತೆ ಕಾರ್ಯನಿರ್ವಹಿಸಿದ ಸ್ಟೋಯಿನಿಸ್-ವೇಡ್ ಜೋಡಿ ಮುರಿಯದ 6ನೇ ವಿಕೆಟ್‌ಗೆ 81 ರನ್ ಪೇರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಶಹೀದ್ ಷಾ ಅಫ್ರಿದಿ ದಾಳಿಗಿಳಿದ 19ನೇ ಓವರ್‌ನಲ್ಲಿ ಜೀವದಾನ ಪಡೆದ ಮ್ಯಾಥ್ಯೂವೇಡ್, ಬಳಿಕ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಇನ್ನು ಒಂದು ಓವರ್ ಬಾಕಿ ಇರುವಂತೆಯೇ ತಂಡಕ್ಕೆ ಜಯ ತಂದುಕೊಟ್ಟರು. ಲೀಗ್ ಹಂತದಲ್ಲಿ ಸತತ 5 ಗೆಲುವಿನೊಂದಿಗೆ ಅಜೇಯ ಸಾಧನೆ ಮಾಡಿದ್ದ ಪಾಕ್ ತಂಡ ಶಾಕ್ ಗೆ ಒಳಗಾಯಿತು. 

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ, ಆರಂಭಿಕ ಮೊಹಮದ್ ರಿಜ್ವಾನ್ (67ರನ್, 52 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ಫಖರ್ ಜಮಾನ್ (55*ರನ್, 32 ಎಸೆತ, 3 ಬೌಂಡರಿ, 4 ಸಿಕ್ಸರ್) ಜೋಡಿಯ ಅಬ್ಬರದ ಫಲವಾಗಿ 4 ವಿಕೆಟ್‌ಗೆ 176 ರನ್ ಗಳಿಸಿತು. ಪ್ರತಿಯಾಗಿ ಆಸೀಸ್ ತಂಡ 19 ಓವರ್‌ಗಳಲ್ಲಿ 5 ವಿಕೆಟ್‌ಗೆ 177 ರನ್‌ಗಳಿಸಿ ಜಯದ ನಗೆ ಬೀರಿತು.

    ಪಾಕಿಸ್ತಾನ: 4 ವಿಕೆಟ್‌ಗೆ 176 (ಮೊಹಮದ್ ರಿಜ್ವಾನ್ 67, ಬಾಬರ್ ಅಜಮ್ 39, ಖರ್ ಜಮಾನ್ 55*, ಮಿಚೆಲ್ ಸ್ಟಾರ್ಕ್ 38ಕ್ಕೆ 2, ಪ್ಯಾಟ್ ಕಮ್ಮಿನ್ಸ್ 30ಕ್ಕೆ 1, ಆಡಂ ಜಂಪಾ 22ಕ್ಕೆ 1), ಆಸ್ಟ್ರೇಲಿಯಾ: 19 ಓವರ್‌ಗಳಲ್ಲಿ 5 ವಿಕೆಟ್‌ಗೆ 177 (ಡೇವಿಡ್ ವಾರ್ನರ್ 49, ಮಿಚೆಲ್ ಮಾರ್ಷ್ 28, ಮಾರ್ಕಸ್ ಸ್ಟೋಯಿನಿಸ್ 40*, ಮ್ಯಾಥ್ಯೂ ವೇಡ್ 41*, ಶಾದಾಬ್ ಖಾನ್ 26ಕ್ಕೆ 4).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts