More

    ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಈ ಸುಂದರಿಯನ್ನು ಮಂಚಕ್ಕೆ ಕರೆದಿದ್ದರಂತೆ…!

    ನವದೆಹಲಿ: ಸದ್ಯ ಪಾಕಿಸ್ತಾನದ ರಾಜಕೀಯದಲ್ಲಿ ಹೆಣ್ಣೊಬ್ಬಳು ಬಿರುಗಾಳಿ ಎಬ್ಬಿಸಿದ್ದಾಳೆ. ಪಾಕಿಸ್ತಾನದ ಅಂದಿನ ಪ್ರಧಾನಿ ಯುಸೂಫ್​ ರಝಾ ಗಿಲಾನಿ ಪ್ರಧಾನಿ ನಿವಾಸದಲ್ಲಿಯೇ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು. ಆಂತರಿಕ ಸಚಿವ ರೆಹ್ಮಾನ್​ ಮಲಿಕ್​ ಸರ್ಕಾರಿ ಬಂಗ್ಲೆಯಲ್ಲಿಯೇ ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಿ, ಪಾಕಿಸ್ತಾನ ಪೀಪಲ್ಸ್​ ಪಾರ್ಟಿಗೆ ತೀವ್ರ ಮುಜುಗರ ಉಂಟು ಮಾಡಿದ್ದಾಳೆ.

    ಇದೀಗ ಈಕೆಯ ಹೆಸರು ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್ ಜತೆಗೂ ತಳುಕು ಹಾಕಿಕೊಂಡಿದೆ. ಅಲ್ಲಿಗೆ ಆಡಳಿತಾರೂಢ ಪಕ್ಷಕ್ಕೂ ಅಮೆರಿಕ ಮೂಲದ ಬ್ಲಾಗರ್​ ಸಿಂಥಿಯಾ ಡಾನ್​ ರಿಚ್ಚಿ ವಿವಾದ ಸುತ್ತಿ ಹಾಕಿಕೊಂಡಂತಾಗಿದೆ.

    ಇದನ್ನೂ ಓದಿ; ಸಚಿವನಿಂದ ಸರ್ಕಾರಿ ಬಂಗ್ಲೆಯಲ್ಲಿಯೇ ಅತ್ಯಾಚಾರ, ಪಾಕ್ ಪ್ರೆಸಿಡೆಂಟ್​ ಹೌಸ್​ನಲ್ಲಿ ದೈಹಿಕ ಹಲ್ಲೆ…! 

    ಇದನ್ನು ಸ್ವತಃ ಸಿಂಥಿಯಾ ಹೇಳಿಕೊಂಡಿಲ್ಲ. ಬದಲಾಗಿ, ಸ್ತ್ರೀ ವೇಷದಲ್ಲಿ ಪಾಕ್​ ಕಿರುತೆರೆಯಲ್ಲಿ ಕಾರ್ಯಕ್ರಮ ನಡೆಸಿಕೊಡುವ ಅಲಿ ಸಲೀಂ ಅರ್ಥಾತ್​ ಬೇಗಮ್​ ನವಾಜೀಷ್​ ಅಲಿ ಬಹಿರಂಗ ಪಡಿಸಿದ್ದಾನೆ.

    ಸಿಂಥಿಯಾಳನ್ನು ನಾನು ಬಹುದಿನಗಳಿಂದ ಬಲ್ಲೆ. ಆಕೆಯೊಂದಿಗೆ ಒಂದೇ ಕೋಣೆಯಲ್ಲಿ ನಾನಿದ್ದೆ. ಇಮ್ರಾನ್ ಖಾನ್​​ ನನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಆ ಸಂದರ್ಭದಲ್ಲಿ ಸ್ವತಃ ಸಿಂಥಿಯಾ ಹೇಳಿದ್ದಾಗಿ ಅಲಿ ಸಲೀಂ ಹೇಳಿದ್ದಾನೆ.

    ಇದನ್ನೂ ಓದಿ; ಎರಡು ಲಕ್ಷ ಸೋಂಕಿತರಿದ್ದರೂ ಭಾರತ ಭಯಪಡಬೇಕಿಲ್ಲ; ವಿಶ್ವ ಆರೋಗ್ಯ ಸಂಸ್ಥೆಗೆ ಏಕಿಂಥ ವಿಶ್ವಾಸ…? 

    ರೆಹ್ಮಾನ್​ ಮಲಿಕ್​ ಅತ್ಯಾಚಾರ ನಡೆಸಿದ್ದನ್ನು ಸಿಂಥಿಯಾ ನನ್ನ ಬಳಿ ಹೇಳಿಲ್ಲ. ಹಾಗಂಥಾ ನನಗೇನೂ ರೆಹ್ಮಾನ್​ ಮಲಿಕ್​ ಬಗ್ಗೆ ಅನುಕಂಪವಿಲ್ಲ. ಬೆನಜೀರ್​ಭುಟ್ಟೋ ಹತ್ಯೆಗೀಡಾದಾಗ ಈತನೇ ಭದ್ರತಾ ಉಸ್ತುವಾರಿ ವಹಿಸಿದ್ದ. ಈತನ ಬಗ್ಗೆ ತನಿಖೆ ನಡೆಸದೇ, ಸಚಿವಗಿರಿ ನೀಡಲಾಯಿತು ಎಂದು ಅಲಿ ಸಲೀಂ ಆರೋಪಿಸಿದ್ದಾನೆ.
    ತನ್ನನ್ನು ಚಿತ್ರ ನಿರ್ಮಾಪಕಿ, ಪತ್ರಕರ್ತೆ, ಬ್ಲಾಗರ್​ ಎಂದೆಲ್ಲ ಕರೆದುಕೊಳ್ಳುವ ಸಿಂಥಿಯಾ ಪಿಪಿಪಿ ನಾಯಕರೊಂದಿಗೆ ಇರುವ ಸಭ್ಯವಲ್ಲದ ಚಿತ್ರಗಳನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾಳೆ. ಅಲಿ ಸಲೀಂ ಮೂಲಕ ಆಡಳಿತ ಪಕ್ಷಕ್ಕೂ ವಿವಾದದ ರಾಡಿ ಮೆತ್ತಿಕೊಂಡಂತಾಗಿದೆ.

    ಕರೊನಾ ಲಸಿಕೆಗೆ ಇನ್ನೊಂದೇ ಹೆಜ್ಜೆ…! ಜುಲೈನಲ್ಲಿ 30 ಸಾವಿರ ಜನರ ಮೇಲೆ ಅಂತಿಮ ಪರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts