More

    ಗೌಪ್ಯತೆ ಸೋರಿಕೆ ಪ್ರಕರಣ: ಇಮ್ರಾನ್​ಖಾನ್​ಗೆ 10 ವರ್ಷ ಜೈಲು ಶಿಕ್ಷೆ

    ಇಸ್ಲಾಮಾಬಾದ್​: ದೇಶದ ಗೌಪ್ಯತೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮತ್ತು ಮಾಜಿ ವಿದೇಶಾಂಗ ಸಚಿವ ಮೆಹಮೂದ್​ ಖುರೇಷಿ ಅವರಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ಮಾಧ್ಯಮ ಅವರ ಪಕ್ಷದ ವಕ್ತಾರರು ತಿಳಿಸಿದ್ದಾರೆ.

    ಇದನ್ನೂ ಓದಿ:ಬಿಜೆಪಿ ನಾಯಕನ ಹತ್ಯೆ: 15 ಪಿಎಫ್‌ಐ ಕಾರ್ಯಕರ್ತರಿಗೆ ಗಲ್ಲು ಶಿಕ್ಷೆ

    ಸೈಫರ್​ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮತ್ತು ಪಾಕಿಸ್ತಾನ ತೆಹ್ರೀಕ್​-ಇ-ಇನ್ಸಾಫ್​ (ಪಿಟಿಐ) ಉಪಾಧ್ಯಕ್ಷ ಖುರೇಷಿ ಅವರಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್​​ನಲ್ಲಿರುವ ವಿಶೇಷ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.

    ಕೆಲವು ದಿನಗಳ ಹಿಂದಷ್ಟೇ ಇಮ್ರಾನ್ ಖಾನ್ ಜೈಲಿನಿಂದ ಬಿಡುಗಡೆ ಆಗಿದ್ದರು. ಇಮ್ರಾನ್ ಖಾನ್ ಪ್ರಧಾನಿ ಆಗಿದ್ದ ವೇಳೆ ಅವರಿಗೆ ಬಂದ ದುಬಾರಿ ಮೌಲ್ಯದ ವಿದೇಶಿ ಉಡುಗೊರೆಗಳನ್ನು ಸರ್ಕಾರದ ಖಜಾನೆಗೆ ಒಪ್ಪಿಸದೇ ತಾವೇ ಮಾರಾಟ ಮಾಡಿ ಹಣ ಗಳಿಸಿದ ಪ್ರಕರಣ ಸಂಬಂಧ ಇಮ್ರಾನ್ ಖಾನ್ ಅವರನ್ನು ದೋಷಿ ಎಂದು ಪರಿಗಣಿಸಿದ್ದ ನ್ಯಾಯಾಲಯ, ಅವರನ್ನು ಜೈಲಿಗೆ ಅಟ್ಟಿತ್ತು. ಈ ಪ್ರಕರಣ ‘ತೋಷಖಾನಾ ಕೇಸ್’ ಎಂದೇ ಜನಜನಿತವಾಗಿತ್ತು.

    ಇಮ್ರಾನ್ ಖಾನ್ ಜೈಲಿನಲ್ಲಿ ಇರುವಾಗಲೇ ಮತ್ತೊಂದು ಕೇಸ್ ಅವರನ್ನು ಬಿಟ್ಟು ಬಿಡದೇ ಬೆನ್ನಿಗೆ ಬಿದ್ದ ಬೇತಾಳದಂತೆ ಕಾಡುತ್ತಿತ್ತು. ಅದು ಸೈಫೆರ್ ಪ್ರಕರಣ! ಈ ಪ್ರಕರಣವೇ ಇದೀಗ ಇಮ್ರಾನ್‌ ಖಾನ್‌ಗೆ ಮುಳುವಾಗಿದೆ. ಚುನಾವಣೆ ಹೊಸ್ತಿಲಲ್ಲೇ ಮತ್ತೊಮ್ಮೆ ಜೈಲು ಪಾಲಾಗುವಂತೆ ಮಾಡಿದೆ.

    ಸಿಎಂ ಹೇಮಂತ್ ಸೊರೇನ್​ಗೆ ಬಂಧನದ ಭೀತಿ: ಜಾರ್ಖಂಡ್ ನೂತನ ಮುಖ್ಯಮಂತ್ರಿ ಇವರೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts