More

    ಸಚಿವನಿಂದ ಸರ್ಕಾರಿ ಬಂಗ್ಲೆಯಲ್ಲಿಯೇ ಅತ್ಯಾಚಾರ, ಪಾಕ್ ಪ್ರೆಸಿಡೆಂಟ್​ ಹೌಸ್​ನಲ್ಲಿ ದೈಹಿಕ ಹಲ್ಲೆ…!

    ಇಸ್ಲಾಮಾಬಾದ್​: ಪಾಕಿಸ್ತಾನ ಪೀಪಲ್ಸ್​ ಪಾರ್ಟಿ (ಪಿಪಿಪಿ) ಸಚಿವ ತನ್ನ ಸರ್ಕಾರಿ ಬಂಗಲೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದರೆ, ಅಂದಿನ ಪಾಕ್​ ಪ್ರಧಾನಿ ನಿವಾಸದಲ್ಲಿ ಆಕೆಯ ಮೇಲೆ ದೌರ್ಜನ್ಯ ನಡೆಸಲಾಗಿದೆ.

    ಇಂಥದ್ದೊಂದು ಆರೋಪ ಪಾಕಿಸ್ತಾನದಲ್ಲೀಗ ಭಾರಿ ಕೋಲಾಹಲ ಉಂಟುಮಾಡಿದೆ. ಅದರಲ್ಲೂ ವಿಪಕ್ಷವಾಗಿರುವ ಪಿಪಿಪಿಗೆ ತೀವ್ರ ಮುಜಗರ ಉಂಟು ಮಾಡಿದೆ. ಪಾಕಿಸ್ತಾನದಲ್ಲಿ ನೆಲೆಸಿರುವ ಅಮೆರಿಕ ಮೂಲದ ಬ್ಲಾಗರ್​ ಸಿಂಥಿಯಾ ಡಿ ರಿಚ್ಚಿ ಇಂಥದ್ದೊಂದು ಆರೋಪ ಮಾಡಿದ್ದಾಳೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ.

    2011ರಲ್ಲಿ ಆಂತರಿಕ ವ್ಯವಹಾರಗಳ ಸಚಿವ ರೆಹ್ಮಾನ್​ನಿಂದ ನನ್ನ ಮೇಲೆ ಅತ್ಯಾಚಾರ ನಡೆಯಿತು. ಹೌದು… ನಾನಿದನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ, 2011ರಲ್ಲಿ ಆಂತರಿಕ ಸಚಿವ ರೆಹ್ಮಾನ್​ ಮಲ್ಲಿಕ್​ನಿಂದ ನನ್ನ ಮೇಲೆ ಅತ್ಯಾಚಾರ ನಡೆಯಿತು ಎಂದು ಆರೋಪಿಸಿದ್ದಾಳೆ.

    ಇದನ್ನೂ ಓದಿ; ಕರೊನಾ ಸೋಂಕಿತರಿಗಿನ್ನು ಮನೆಯಲ್ಲೇ ಚಿಕಿತ್ಸೆ; ಭಾರತಕ್ಕೂ ಬಂತು ಅಮೆರಿಕದ ವ್ಯವಸ್ಥೆ 

    ಇದಷ್ಟೇ ಅಲ್ಲ, ಪಾಕಿಸ್ತಾನದ ಮಾಜಿ ಪ್ರಧಾನಿ ಯುಸೂಫ್​ ರಝಾ ಗಿಲಾನಿ ಹಾಗೂ ಮಾಜಿ ಆರೋಗ್ಯ ಸಚಿವ ಮಕ್ದೂಮ್​ ಶಹಾಬುದ್ದೀನ್​ ಇಸ್ಲಾಮಾಬಾದ್​ನ ಪ್ರೆಸಿಡೆಂಟ್​ ಹೌಸ್​ನಲ್ಲಿಯೇ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾಳೆ.

    ಮಾಜಿ ಪ್ರಧಾನಿ ಬೆನಜೀರ್​ ಭುಟ್ಟೋ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಈಕೆಯ ವಿರುದ್ಧ ಪಿಪಿಪಿ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.
    ಮಾಡೆಲ್​ ಉಜ್ಮಾ ಖಾನ್​ ತನ್ನ ಗಂಡನೊಂದಿಗೆ 13 ವರ್ಷಗಳಿಂದ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಮಾಡೆಲ್​ ಮೇಲೆ ಹಲ್ಲೆ ನಡೆಸಿದ್ದನ್ನು ಉಲ್ಲೇಖಿಸಿ ಬೆನಜೀರ್​ ಭುಟ್ಟೋ ವಿರುದ್ಧ ಸಿಂಥಿಯಾ ಹೇಳಿಕೆ ನೀಡಿದ್ದಳು.

    ತನ್ನ ಪತಿ ವಂಚಿಸಿದಾಗ ಬೇನಜೀರ್​ ಭುಟ್ಟೋ ಮಾಡಿದ್ದನ್ನೇ ಈ ಘಟನೆ ನೆನಪಿಸುತ್ತದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲು ಆಕೆ ಗಾರ್ಡ್​ಗಳನ್ನು ಹೊಂದಿದ್ದಳು. ಎಲ್ಲ ಸಂದರ್ಭದಲ್ಲೂ ಮಹಿಳೆಯೇ ಏಕೆ ಬಲಿಪಶುವಾಗಬೇಕು. ಏಕೆ ಪುರುಷ ಹೊಣೆಗಾರನಾಗುವುದಿಲ್ಲ ಎಂದು ಪ್ರಶ್ನಿಸಿದ್ದಳು.

    ಇದನ್ನೂ ಓದಿ; ಅಮೆರಿಕ ತಯಾರಿಸಿದೆ 20 ಲಕ್ಷ ಡೋಸ್​ ಕರೊನಾ ಲಸಿಕೆ; ಟ್ರಂಪ್​ ಬಹಿರಂಗ 

    ರೆಹ್ಮಾನ್​ ಮಲ್ಲಿಕ್​ ಸಚಿವನಾಗಿದ್ದಾಗ ನೆಲೆಸಿದ್ದ ಸರ್ಕಾರಿ ನಿವಾಸದಲ್ಲೇ ತನ್ನ ಮೇಲೆ ಅತ್ಯಾಚಾರ ನಡೆದಿತ್ತು. ವೀಸಾಗೆ ಸಂಬಂಧಿಸಿದಂತೆ ಅದೊಂದು ಭೇಟಿ ಎಂದು ನಾನು ತಿಳಿದಿದ್ದೆ. ಆದರೆ ಹೂಗುಚ್ಛ, ಮಾದಕ ವಸ್ತು ಬೆರೆಸಿದ್ದ ಪಾನೀಯ ನೀಡಿ ಅತ್ಯಾಚಾರ ಎಸಗಲಾಯಿತು. ಪಿಪಿಪಿ ಸರ್ಕಾರದಲ್ಲಿ ಯಾರೂ ನನ್ನ ಸಹಾಯಕ್ಕೆ ಬಾರದ ಕಾರಣ ಮೌನವಾಗಿರಬೇಕಾಯಿತು. ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿರುವ ವ್ಯಕ್ತಿಯೊಬ್ಬರಿಗೆ ಮಾಹಿತಿ ನೀಡಿದರೂ ಏನೂ ಪ್ರಯೋಜನವಾಗಲಿಲ್ಲ ಎಂದು ಸಿಂಥಿಯಾ ತಿಳಿಸಿದ್ದಾಳೆ.

    ಪ್ರಧಾನಿ ನಿವಾಸದಲ್ಲಿ ದೈಹಿಕ ಹಲ್ಲೆ ನಡೆದಾಗ ಅಲ್ಲಿ ಆಕೆ ಏನು ಮಾಡುತ್ತಿದ್ದಳು ಎಂದು ರಿಚ್ಚಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್​ ಮಾಜಿ ಪ್ರಧಾನಿ ಗಿಲಾನಿ ಪ್ರಶ್ನಿಸಿದ್ದಾರೆ. ಈವರೆಗೂ ಆಕೆ ಪಾಕಿಸ್ತಾನದಲ್ಲೇ ಏಕೆ ನೆಲೆಸಿದ್ದಾಳೆ ಎಂದು ಕೇಳಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ ಎಂದು ಟೀಕಿಸಿದ್ದಾರೆ.

    ಎರಡು ಲಕ್ಷ ಸೋಂಕಿತರಿದ್ದರೂ ಭಾರತ ಭಯಪಡಬೇಕಿಲ್ಲ; ವಿಶ್ವ ಆರೋಗ್ಯ ಸಂಸ್ಥೆಗೆ ಏಕಿಂಥ ವಿಶ್ವಾಸ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts