More

    ಅಮೆರಿಕ ತಯಾರಿಸಿದೆ 20 ಲಕ್ಷ ಡೋಸ್​ ಕರೊನಾ ಲಸಿಕೆ; ಟ್ರಂಪ್​ ಬಹಿರಂಗ

    ನ್ಯೂಯಾರ್ಕ್​: ಕರೊನಾ ವೈರಸ್​ ನಿಗ್ರಹಿಸುವ ಲಸಿಕೆಯನ್ನು ಅಮೆರಿಕ ಈಗಾಗಲೇ ಸಿದ್ಧಪಡಿಸಿದ್ದು, 20 ಲಕ್ಷ ಡೋಸ್​ ಉತ್ಪಾದಿಸಲಾಗಿದೆ ಎಂದು ಸ್ವತಃ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಹೇಳಿದ್ದಾರೆ.

    ಸುದ್ದಿಗೋಷ್ಠಿಯೊಂದರಲ್ಲಿಯೇ ಈ ವಿಷಯ ಬಹಿರಂಗಪಡಿಸಿರುವ ಟ್ರಂಪ್​, ಲಸಿಕೆ ತಯಾರಿಸುವ ವಿಚಾರವಾಗಿ ನಿನ್ನೆಯಷ್ಟೇ ಸಭೆ ನಡೆಸಿದ್ದೇನೆ. ಈ ನಿಟ್ಟಿನಲ್ಲಿ ಭಾರಿ ಅಚ್ಚರಿ ಮೂಡಿಸುವ ಬೆಳವಣಿಗೆಗಳು ನಡೆದಿವೆ ಎಂದು ಟ್ರಂಪ್​ ಪ್ರಕಟಿಸಿದ್ದಾರೆ.

    ಅಂದಾಜು 20 ಲಕ್ಷ ಡೋಸ್​ ಲಸಿಕೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಸುರಕ್ಷತಾ ಮಾನದಂಡಗಳು ಸಮರ್ಪಕವಾಗಿವೆ ಎಂದು ಘೋಷಿಸುತ್ತಿದ್ದಂತೆ ಅವುಗಳನ್ನು ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಹೇಳಿದ್ದಾರೆ.

    ಇದನ್ನೂ ಓದಿ; ಕೋವಿಡ್​ ರೋಗಿಗಳಿಗೆ ಮಲೇರಿಯಾ ಮದ್ದು; ಪರೀಕ್ಷೆ ಮುಂದುವರಿಸಿದ ವಿಶ್ವ ಆರೋಗ್ಯ ಸಂಸ್ಥೆ 

    ಲಸಿಕೆಗಳು ಸಜ್ಜಾಗಿವೆ ಎಂದರೆ, ಅವನ್ನು ಈಗಾಗಲೇ ಉತ್ಪಾದಿಸಿ ಸಾಗಣೆಗೆ ಸಜ್ಜುಗೊಳಿಸಲಾಗಿದೆ ಎಂದರ್ಥ. ಒಮ್ಮೆ ಅವುಗಳ ಸುರಕ್ಷತಾ ಫಲಿತಾಂಶ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗಳಿಗೆ ತಲುಪಿಸಿ ರೋಗಿಗಳೀಗೆ ನೀಡಲಾಗುವುದು ಎಂದು ವಿವರಿಸಿದ್ದಾರೆ.

    ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿ ಉತ್ತಮ ಫಲಿತಾಂಶ, ಪರಿಣಾಮಗಳನ್ನು ಉಂಟು ಮಾಡುತ್ತಿವೆ. ಕೋವಿಡ್​ ರೋಗಿಗಳು ತ್ವರಿತವಾಗಿ ಗುಣಮುಖರಾಗುತ್ತಿದ್ದಾರೆ. ಅಮೆರಿಕ ಈಗಾಗಲೇ ಲಸಿಕೆ ತಯಾರಿಕೆಗಾಗಿ ಐದು ಕಂಪನಿಗಳನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.

    ಇದನ್ನೂ ಓದಿ; ಕರೊನಾ ಲಸಿಕೆಗೆ ಇನ್ನೊಂದೇ ಹೆಜ್ಜೆ…! ಜುಲೈನಲ್ಲಿ 30 ಸಾವಿರ ಜನರ ಮೇಲೆ ಅಂತಿಮ ಪರೀಕ್ಷೆ 

    ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ನಾಲ್ಕು ಕಂಪನಿಗಳು, ಬೇಕಾದರೆ ಏಳು ಕಂಪನಿಗಳು ಎನ್ನಬಹುದು; ಪ್ರಾಯೋಗಿಕ ಹಂತದಲ್ಲಿ ಒಂದೇ ರೀತಿಯ ಫಲಿತಾಂಶಗಳನ್ನು ಪಡೆದಿವೆ ಎಂದು ಟ್ರಂಪ್​ ಹೇಳಿದರು. ಆದರೆ, ಯಾವ ಕಂಪನಿ ಈಗಾಗಲೇ ಲಸಿಕೆಯನ್ನು ಉತ್ಪಾದಿಸಿದೆ ಎಂಬುದರ ಸುಳಿವನ್ನು ಬಿಟ್ಟುಕೊಡಲಿಲ್ಲ.

    ಅಮೆರಿಕದ ಮಾಡೆರ್ನಾ ಕಂಪನಿಯೊಂದಿಗೆ ಸೇರಿ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಲಸಿಕೆ ಸಂಶೋಧನಾ ಕಾರ್ಯವನ್ನು ತ್ವರಿತಗೊಳಿಸುತ್ತಿದೆ. ಮಾನವರ ಮೇಲಿನ ಮೊದಲ ಹಂತದ ಪ್ರಯೋಗದಲ್ಲಿ ಈ ಕಂಪನಿಯ ಲಸಿಕೆ ಯಶಸ್ವಿಯಾಗಿದೆ. ತುರ್ತು ಅಗತ್ಯಗಳಿಗಾಗಿ ಈ ಲಸಿಕೆಯನ್ನು ಸಿದ್ಧಪಡಿಸಲಾಗುವುದು ಎಂದು ಈ ಕಂಪನಿ ಈ ಹಿಂದೆ ತಿಳಿಸಿತ್ತು. ಹೀಗಾಗಿ ಮಾಡೆರ್ನಾ ಕಂಪನಿಯೇ ಈ ಲಸಿಕೆ ಸಿದ್ಧಪಡಿಸಿರಬಹುದು ಎಂದು ಹೇಳಲಾಗುತ್ತಿದೆ.

    ಕರೊನಾ ದೂರವಿಟ್ಟು ಬೆಂಗಳೂರಿನಿಂದ 2,000 ಕಿ.ಮೀ ಕಾಲ್ನಡಿಗೆಯಲ್ಲಿ ಮನೆ ತಲುಪಿದ, ಹೊಂಚು ಹಾಕಿದ್ದ ವಿಧಿಯನ್ನು ವಂಚಿಸಲಾಗಲಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts