More

    ಪಾಕ್​ಗೆ ಆರಂಭವಾಗಿದೆ ಭಾರತದ ಪ್ರತೀಕಾರದ ದಾಳಿಯ ನಡುಕ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರಾದಲ್ಲಿ ಕಳೆದ ವಾರ ನಡೆದ ಉಗ್ರರ ದಾಳಿಯಲ್ಲಿ ಒಬ್ಬ ಕರ್ನಲ್​ ಸೇರಿ ಐವರು ಯೋಧರು ಹುತಾತ್ಮರಾಗಿರುವ ಹಿನ್ನೆಲೆಯಲ್ಲಿ ಭಾರತ ತನ್ನ ಮೇಲೆ ಪ್ರತ್ರೀಕಾರದ ದಾಳಿ ನಡೆಸಬಹುದು ಎಂದು ಪಾಕಿಸ್ತಾನ ಆತಂಕಗೊಂಡಿದೆ. ಈ ಹಿನ್ನೆಲೆಯಲ್ಲಿ ಅದು ತನ್ನ ವಾಯುಪಡೆಯ ವೈಮಾನಿಕ ಅಭ್ಯಾಸ ಕಾರ್ಯಕ್ರಮವನ್ನು ಮತ್ತಷ್ಟು ಚುರುಕುಗೊಳಿಸಿದೆ. ತನ್ಮೂಲಕ ವಾಯುಗಡಿಯ ಭದ್ರತೆಯನ್ನು ಹೆಚ್ಚಿಸಿದೆ.

    ಪಾಕಿಸ್ತಾನದ ವಾಯುಪಡೆ ಸಿಬ್ಬಂದಿ ಈ ಮೊದಲೇ ವೈಮಾನಿಕ ಅಭ್ಯಾಸ ಆರಂಭಿಸಿದ್ದರು. ಈ ಬಗ್ಗೆ ಭಾರತಕ್ಕೆ ಮಾಹಿತಿಯನ್ನೂ ನೀಡಿದ್ದರು. ಆದರೆ ಹಂದ್ವಾರಾ ಉಗ್ರರ ದಾಳಿಯ ಬಳಿಕ ಭಾರತದಿಂದ ಪ್ರತಿಕಾರದ ದಾಳಿ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅದು ಅಭ್ಯಾಸದ ತೀವ್ರತೆಯನ್ನು ಹೆಚ್ಚಿಸಿದೆ ಎನ್ನಲಾಗುತ್ತಿದೆ. ಈ ಕಾರ್ಯದಲ್ಲಿ ಅದು ಎಫ್​ 16 ಮತ್ತು ಜೆಎಫ್​-17 ಫೈಟರ್​ಜೆಟ್​ಗಳನ್ನು ಹೆಚ್ಚುಹೆಚ್ಚಾಗಿ ಬಳಸಲಾರಂಭಿಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಮೌಂಟ್​ ಎವರೆಸ್ಟ್​ ಬುಡಕ್ಕೂ ಬಂತು ಚೀನಾ ಗಡಿ ತಂಟೆ ವಿವಾದ

    ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ನುಸುಳುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಅಣಕು ಧ್ವಜ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಅನುಮಾನ ವ್ಯಕ್ತಪಡಿಸಿದ್ದರು.

    ಭಾರತದಲ್ಲಿ ಏನಾದರೂ ಅನಾಹುತ ಸೃಷ್ಟಿಸುವ ದುಸ್ಸಾಹಸ ತೋರಿದರೆ ಅದಕ್ಕೆ ಸರಿಯಾದ ಉತ್ತರ ನೀಡುವುದಾಗಿ ಭಾರತ ಸದಾ ಪಾಕಿಸ್ತಾನವನ್ನು ಎಚ್ಚರಿಸುತ್ತಲೇ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ವಾಯುಗಡಿಯ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದೆ ಎನ್ನಲಾಗಿದೆ.

    ಪರಸ್ಪರ ಸಮಾಧಾನಿಸಿಕೊಳ್ಳುತ್ತಿರುವ ಸಮಾನ ದುಃಖಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts