More

    ಮೂರು ಪ್ರಕರಣಗಳಲ್ಲಿ ಪಾಕ್​​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಮಧ್ಯಂತರ ಜಾಮೀನು!

    ಪಾಕಿಸ್ತಾನ: ಭಯೋತ್ಪಾದನಾ ನಿಗ್ರಹ ವಿಶೇಷ ನ್ಯಾಯಾಲಯವು, ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ​ ಮಧ್ಯಂತರ ಜಾಮೀನು ನೀಡಿದೆ. ಮೂರು ಪ್ರಕರಣಗಳಲ್ಲಿ ಏಪ್ರಿಲ್ 13ರವರೆಗೆ ಇಮ್ರಾನ್​ ಖಾನ್​ಗೆ ಮಧ್ಯಂತರ ಜಾಮೀನು ನೀಡಲಾಗಿದೆ.

    ಭಯೋತ್ಪಾದನಾ ನಿಗ್ರಹ ವಿಶೇಷ ನ್ಯಾಯಾಲಯವು ಬೆಳಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ಬರುವಂತೆ ಸೂಚಿಸಿತ್ತು, ನಂತರ ಮಾಜಿ ಪ್ರಧಾನಿ ನ್ಯಾಯಾಲಯ ಮುಂದೆ ಹಾಜರಾಗಿದ್ದರು.

    ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಮತ್ತು ಜಮಾನ್ ಪಾರ್ಕ್ ಪ್ರದೇಶದಲ್ಲಿ ರಾಜ್ಯದ ಆಸ್ತಿಗಳನ್ನು ಸುಟ್ಟು ಹಾಕುವುದು ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ರೇಸ್ ಕೋರ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೂರು ಎಫ್‌ಐಆರ್‌ಗಳಲ್ಲಿ ಇಮ್ರಾನ್ ಖಾನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ನ್ಯಾಯಾಲಯವು ಇಮ್ರಾನ್‌ಗೆ ಏಪ್ರಿಲ್ 4 (ಇಂದು) ವರೆಗೆ ಜಾಮೀನು ನೀಡಿತ್ತು ಮತ್ತು ಅವರನ್ನು ಬಂಧಿಸದಂತೆ ಪೊಲೀಸರಿಗೆ ನಿರ್ಬಂಧ ವಿಧಿಸಿತ್ತು.

    ಇದನ್ನೂ ಓದಿ: ಮೊದಲ ಮೊಬೈಲ್ ಕರೆ ಮಾಡಿ 50 ವರ್ಷ; ಅಂದು ಮೊದಲು ಕರೆ ಮಾಡಿದ್ದು ಯಾರು!

    ಇಂದು ವಿಚಾರಣೆಯ ಸಂದರ್ಭದಲ್ಲಿ, ಜಂಟಿ ತನಿಖಾ ತಂಡ (ಜೆಐಟಿ) ಮುಖ್ಯಸ್ಥ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಇಮ್ರಾನ್ ಕಿಶೋರ್ ಅವರು ನ್ಯಾಯಾಲಯಕ್ಕೆ ಹಾಜರಾಗಿ ಇಮ್ರಾನ್ ಖಾನ್ ಅವರನ್ನು ಒಳಗೊಂಡ ಯಾವುದೇ ತನಿಖೆ ನಡೆದಿಲ್ಲ ಎಂದು ಹೇಳಿದರು. ಇಮ್ರಾನ್ ಪರ ವಕೀಲ ಬ್ಯಾರಿಸ್ಟರ್ ಸಲ್ಮಾನ್ ಸಫ್ದರ್ ಅವರು, ಅವರು ಪೊಲೀಸರಿಗೆ ಲಿಖಿತ ಹೇಳಿಕೆಯನ್ನು ಸಲ್ಲಿಸಬಹುದು ಅಥವಾ ಜೆಐಟಿ ಜಮಾನ್ ಪಾರ್ಕ್‌ನಲ್ಲಿರುವ ಇಮ್ರಾನ್ ನಿವಾಸಕ್ಕೆ ಭೇಟಿ ನೀಡಬಹುದು ಎಂದು ಹೇಳಿದರು. ವಕೀಲರು ಲಿಖಿತ ಹೇಳಿಕೆಯನ್ನು ಸಲ್ಲಿಸುವುದು ಉತ್ತಮ ಎಂದು ನ್ಯಾಯಾಧೀಶರು ತಿಳಿಸಿದರು. ಇಮ್ರಾನ್ ಅವರ ಲಿಖಿತ ಹೇಳಿಕೆಯನ್ನು ಸಲ್ಲಿಸಲು ಸಿದ್ಧ ಎಂದು ಸಫ್ದರ್ ನ್ಯಾಯಾಲಯಕ್ಕೆ ತಿಳಿಸಿದರು. ಈ ವೇಳೆ ನ್ಯಾಯಾಲಯವು ಮುಂದಿನ ವಿಚಾರಣೆಗೆ ಹಾಜರಾಗುವಂತೆ ಇಮ್ರಾನ್​ ಖಾನ್​ಗೆ ಆದೇಶ ನೀಡಿದ್ದು, ಆದಷ್ಟು ಬೇಗ ತನಿಖೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದೆ. ಮೂರು ಪ್ರಕರಣಗಳಲ್ಲಿ ಏಪ್ರಿಲ್ 13ರವರೆಗೆ ಇಮ್ರಾನ್​ ಖಾನ್​ಗೆ ಮಧ್ಯಂತರ ಜಾಮೀನು ನೀಡಲಾಗಿದೆ.

    ಅಗತ್ಯ ಔಷಧಿಗಳ ಬೆಲೆಯಲ್ಲಿ ಶೇ.6.73ರಷ್ಟು ಇಳಿಕೆ! 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts