More

    ರಾಷ್ಟ್ರವಿರೋಧಿ ಮತ್ತು ಧರ್ಮನಿಂದನೆಯ ಪಠ್ಯಕ್ರಮವಿರುವ ಪುಸ್ತಕಗಳನ್ನು ನಿಷೇಧಿಸಿದ ಪಾಕ್

    ಇಸ್ಲಾಮಾಬಾದ್: ಪಂಜಾಬ್‌ನ ಪಠ್ಯಕ್ರಮ ಮತ್ತು ಪಠ್ಯಪುಸ್ತಕ ಮಂಡಳಿಯು “ಪಾಕಿಸ್ತಾನ ವಿರೋಧಿ ಮತ್ತು ಧರ್ಮನಿಂದನೆಯ” ವಿಷಯವನ್ನು ಒಳಗೊಂಡಿವೆ ಎಂಬ ಕಾರಣಕ್ಕೆ ಖಾಸಗಿ ಶಾಲೆಗಳಲ್ಲಿ ಅಂದಾಜು ನೂರು ಪುಸ್ತಕಗಳ ಬೋಧನೆಯನ್ನು ನಿಷೇಧಿಸಿದೆ.
    ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ರಾಯ್ ಮಂಜೂರ್ ಹುಸೇನ್ ನಾಸಿರ್ ಲಾಹೋರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪುಸ್ತಕಗಳಲ್ಲಿ ಪಾಕಿಸ್ತಾನ ಮತ್ತು ಅದರ ಸೃಷ್ಟಿಯ ಬಗ್ಗೆ ಸತ್ಯವನ್ನು ತಿರುಚಿ ಹೇಳಲಾಗಿದೆ, ಖ್ವಾಯಿದ್-ಎ-ಅಜಮ್ ಮುಹಮ್ಮದ್ ಅಲಿ ಜಿನ್ನಾ ಮತ್ತು ಅಲ್ಲಮಾ ಮುಹಮ್ಮದ್ ಇಕ್ಬಾಲ್ ಅವರ ಮೇಲೆ ನಕಾರಾತ್ಮಕ ಬೆಳಕು ಚೆಲ್ಲಲಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ ವಿಷಯಗಳ ವಿವರಣೆಗೆ ಹಂದಿಗಳ ಚಿತ್ರಗಳನ್ನು ಬಳಸುವ ಮೂಲಕ ಧರ್ಮನಿಂದನೆ ಮಾಡಲಾದ ನಿದರ್ಶನಗಳಿವೆ ಎಂದಿದ್ದಾರೆ.

    ಇದನ್ನೂ ಓದಿ:  ಕಾಯುವವನೇ ಕಳ್ಳನಾದಾಗ ಇನ್ನಾರನ್ನು ನಂಬೋದು ಶಿವಾ…!!

    ನಿಷೇಧಿತ ಪುಸ್ತಕಗಳ ಪೈಕಿ ಹೆಚ್ಚಿನವು ಆಮದು ಮಾಡಿಕೊಂಡವು ಅಥವಾ ವಿದೇಶಿ ಪ್ರಕಾಶಕರಿಂದ ಸ್ಥಳೀಯವಾಗಿ ಮುದ್ರಿಸಲ್ಪಟ್ಟವು. ಕೆಲವು ಪುಸ್ತಕಗಳಲ್ಲಿ “ಪಾಕಿಸ್ತಾನವನ್ನು ಭಾರತಕ್ಕಿಂತ ಕೆಳಮಟ್ಟದ ದೇಶವೆಂದು ಚಿತ್ರಿಸಲಾಗಿದ್ದರೆ ಈ ಕೆಲವು ಪುಸ್ತಕಗಳಲ್ಲಿನ ನಕ್ಷೆಗಳಲ್ಲಿ ಆಜಾದ್ ಜಮ್ಮು ಮತ್ತು ಕಾಶ್ಮೀರ (ಎಜೆಕೆ) ವನ್ನು ಭಾರತದ ಭಾಗವಾಗಿ ತೋರಿಸಲಾಗಿದೆ ಎಂದು ನಾಸಿರ್ ಹೇಳಿದ್ದಾರೆ. ಇದು ಸ್ವೀಕಾರಾರ್ಹವಾದುದಲ್ಲ ಮತ್ತು ಪಾಕಿಸ್ತಾನದಲ್ಲಿ ಮಕ್ಕಳ ಮನಸ್ಸಿನಲ್ಲಿ ವಿಷದ ಬೀಜ ಬಿತ್ತುವ ಪಿತೂರಿ ಎಂದು ಅವರು ದೂರಿದ್ದಾರೆ.
    “ಖ್ವಾಯಿದ್-ಎ-ಅಜಮ್ ಮುಹಮ್ಮದ್ ಅಲಿ ಜಿನ್ನಾ ಮತ್ತು ಅಲ್ಲಮಾ ಮುಹಮ್ಮದ್ ಇಕ್ಬಾಲ್ ಅವರ ಕುರಿತು ಬರೆಯುವ ಬದಲು, ಪುಸ್ತಕಗಳಲ್ಲಿ ಮಹಾತ್ಮ ಗಾಂಧಿ ಮತ್ತು ಕೆಲವು ಅಪರಿಚಿತ ಕುರಿತು ಬರೆಯಲಾಗಿದೆ ಎಂದು ಅವರು ಹೇಳಿದರು.
    ಒಂದೆಡೆ ಗಾಂಧಿಯನ್ನು ವೈಭವೀಕರಿಸುವುದು ಮತ್ತೊಂದೆಡೆ ಪಾಕಿಸ್ತಾನದ ರಾಷ್ಟ್ರೀಯ ವೀರರನ್ನು ಕೀಳಾಗಿ ಕಾಣುವುದು ಸರಿಯಲ್ಲ ಎಂದು ಅವರು ಒತ್ತಿ ಹೇಳಿದರು.

    ಇದನ್ನೂ ಓದಿ:  ಕರೊನಾ ಸಂಕಷ್ಟ; ದೆಹಲಿ, ಅಹಮದಾಬಾದ್​, ದೆಹಲಿಯಿಂದ ಬರುತ್ತಿದೆ ಶುಭಸುದ್ದಿ; ಏನದು?

    ಗಣಿತ ಪುಸ್ತಕದಲ್ಲಿ, ಎಣಿಕೆಯ ಪರಿಕಲ್ಪನೆಗಳನ್ನು ವಿವರಿಸುವಾಗ ಹಂದಿಗಳ ಚಿತ್ರಗಳನ್ನು ತೋರಿಸಿರುವುದು, ಮತ್ತೊಂದು ನಿದರ್ಶನದಲ್ಲಿ, ದೇಶದ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಅಪರಾಧ ಮತ್ತು ಹಿಂಸಾಚಾರವನ್ನು ಉತ್ತೇಜಿಸಲು ಪ್ರಯತ್ನಿಸಿರುವುದೂ ಇದೆ ಎಂದು ಅವರು ಹೇಳಿದರು.
    ಪಠ್ಯಪುಸ್ತಕ ಮಂಡಳಿಯು ಪ್ರಾಂತ್ಯದಾದ್ಯಂತ ಖಾಸಗಿ ಶಾಲೆಗಳು ಬೋಧಿಸುತ್ತಿರುವ 10 ಸಾವಿರ ಪುಸ್ತಕಗಳ ವಿಮರ್ಶಾತ್ಮಕ ಅವಲೋಕನವನ್ನು ಪ್ರಾರಂಭಿಸಿತ್ತು ಮತ್ತು ಮೊದಲ ಹಂತದಲ್ಲಿ 31 ಪ್ರಕಾಶಕರ 100 ಪುಸ್ತಕಗಳನ್ನು ನಿಷೇಧಿಸಿತ್ತು.
    ಈ ಉದ್ದೇಶಕ್ಕಾಗಿ, ಇದು 30 ಸಮಿತಿಗಳನ್ನು ರಚಿಸಿ ನಂತರ 100 ಪುಸ್ತಕಗಳನ್ನು ತಕ್ಷಣವೇ ನಿಷೇಧಿಸಲಾಯಿತು ಮತ್ತು ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟವನ್ನು ನಿಲ್ಲಿಸುವಂತೆ ಪ್ರಕಾಶಕರಿಗೆ ನಿರ್ದೇಶನ ನೀಡಲಾಯಿತು.

    ವಿಳಾಸ ಕೊಡಿ ಪ್ಲೀಸ್‌… ಅಜ್ಜಿಯ ಹುಡುಕಾಟದಲ್ಲಿ ನಟ ಸೋನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts