More

  ಜೆಎನ್​ಯುನಲ್ಲಿ ದೀಪಿಕಾ ಪಡುಕೋಣೆ| ಮೆಚ್ಚುಗೆ ಸೂಚಿಸಿ ಪಾಕ್ ಸೇನಾ ವಕ್ತಾರ ಟ್ವೀಟ್ ಮಾಡಿದ. ಮುಂದೇನಾಯಿತು…

  ಇಸ್ಲಮಾಬಾದ್: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್​ಯುಗೆ ಭೇಟಿ ನೀಡಿದ್ದು ವಿವಾದಕ್ಕೀಡಾದ ಬೆನ್ನಲ್ಲೇ, ಆಕೆಯ ನಡೆಯ ಬಗ್ಗೆ ಮೆಚ್ಚುಗೆ ಸೂಚಿಸಿ ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್​ ಆಸಿಫ್ ಗಫೂರ್ ಬುಧವಾರ ಟ್ವೀಟ್ ಮಾಡಿದ್ದರು.

  ಜೆಎನ್​ಯು ಪ್ರತಿಭಟನಾಕಾರರ ಪರ ನಿಂತ ದೀಪಿಕಾ ಪಡುಕೋಣೆ ಬ್ರೇವ್ ಪರ್ಸನ್​ ಎಂಬ ಪ್ರಶಂಸೆಯನ್ನು ಗಫೂರ್ ತಮ್ಮ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದರು. ಈ ಟ್ವೀಟನ್ನು ಅವರು ತಮ್ಮ ವೈಯಕ್ತಿಕ ಖಾತೆಯಿಂದ ಮಾಡಿದ್ದರು. ಆದರೆ, ಕೆಲವೇ ನಿಮಿಷಗಳಲ್ಲಿ ಈ ಟ್ವೀಟನ್ನು ಅವರು ಅಳಿಸಿ ಹಾಕಿದರು. ಕಾರಣ ಏನು ಎಂಬುದು ಬಹಿರಂಗವಾಗಿಲ್ಲ.

  ಅವರು ಮಾಡಿದ ಟ್ವೀಟ್ ಹೀಗಿತ್ತು – “Kudos @deepikapadukone for standing both with youth and the truth. You have proved to be a brave person in a difficult environment earning respect. Humanity is above everything,” (ಏಜೆನ್ಸೀಸ್)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts