ನವದೆಹಲಿ: ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಕ್ರಿಕೆಟ್ ಆಡುವ ದಿನಗಳಿಂದಲೂ ಆತ್ಮೀಯರು. ಟೀಂ ಇಂಡಿಯಾ ಪರವಾಗಿ ಆಡುವ ದಿನಗಳಿಂದಲೂ ಪರಸ್ಪರ ಕಾಲೆಳೆಯುತ್ತಾ, ತಮಾಷೆಯಲ್ಲಿ ಇರುತ್ತಿದ್ದರು. ಇದು ಈಗ ಸಾಮಾಜಿಕ ಜಾಲತಾಣದಲ್ಲೂ ಮುಂದುವರಿದಿದೆ. ಹರ್ಭಜನ್ ಸಿಂಗ್ ಸ್ಕೇಟ್ ಬೋರ್ಡ್ ಹಿಡಿದಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಪಾಜಿ, ಸ್ವಲ್ಪ ಸ್ಟೇಟ್ ಬೋರ್ಡ್ ಮಾಡು ಎಂದು ಹೇಳುವ ಮೂಲಕ ಯುವರಾಜ್ ಸಿಂಗ್ ತಮ್ಮ ಗೆಳೆಯನನ್ನು ಟ್ರೋಲ್ ಮಾಡಿದ್ದಾರೆ. ನಾನು, ನೀನು ಒಟ್ಟಿಗೆ ಆಡೋಣ ಬಾ ಎಂದು ಯುವರಾಜ್ ಸಿಂಗ್ ಕಾಮೆಂಟ್‌ಗೆ ಭಜ್ಜಿ ಪ್ರತಿ ಕಾಮೆಂಟ್ ಹಾಕಿದ್ದಾರೆ.
ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಮಹಿಳೆಯರೂ 100 ಮೀ. ಓಡ್ತಾರೆ, 80 ಮೀ. ಅಲ್ಲ ಎಂದಿದ್ದೇಕೆ ಶಿಖಾ ಪಾಂಡೆ?
ಹರ್ಭಜನ್ ಸಿಂಗ್ ಸ್ಟೇಟ್ ಬೋರ್ಡ್ ಫೋಟೋಗೆ ಕೇವಲ ಯುವರಾಜ್ ಸಿಂಗ್ ಅಲ್ಲದೆ, ಮತ್ತೋರ್ವ ಆಲ್ರೌಂಡರ್ ಇರ್ಫಾನ್ ಪಠಾಣ್, ವಾ ಶಯಾರ್ ಸಾಬೇದ್ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ಯುವಿ ಮಾಡಿದ ಟ್ರೋಲ್‌ಗೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಹರ್ಭಜನ್ ಸಿಂಗ್‌ಗೆ ಯುವರಾಜ್ ಸಿಂಗ್ ಹಿಂದೆಯೂ ಹಲವು ಬಾರಿ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ತಮಾಷೆಯಲ್ಲಿ ತೊಡಗಿದ್ದರು.
ಇದನ್ನೂ ಓದಿ: ವಿಶೇಷ ವಿಮಾನದಲ್ಲಿ ಇಂಗ್ಲೆಂಡ್‌ನತ್ತ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಯಾಣ
ಇರ್ಫಾನ್ ಪಠಾಣ್ ಹಾಗೂ ಯುವರಾಜ್ ಸಿಂಗ್ ಇಬ್ಬರೂ ಈಗಾಗಲೇ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರೆ, 39 ವರ್ಷದ ಹರ್ಭಜನ್ ಸಿಂಗ್ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಆಡುತ್ತಿದ್ದಾರೆ. ಹರ್ಭಜನ್ ಸಿಂಗ್ ಸಿಎಸ್‌ಕೆ ತಂಡದ ತರಬೇತಿ ಶಿಬಿರದಲ್ಲಿದ್ದರೂ ಲಾಕ್‌ಡೌನ್ ಘೋಷಣೆಯಾದ ಬಳಿಕ ತವರಿಗೆ ವಾಪಸ್ ತೆರಳಿದ್ದರು.