More

    ಪಡುಬಿದ್ರಿ ಬೀಚ್ ವೀಕ್ಷಣಾಗೋಪುರ, ವಿಶ್ರಾಂತಿ ಶೆಡ್ ಸಮುದ್ರ ಸೇರುವ ಭೀತಿ

    ಪಡುಬಿದ್ರಿ: ಕಳೆದೊಂದು ವಾರದಿಂದ ಪಡುಬಿದ್ರಿ ಬೀಚ್‌ನಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತ ಶನಿವಾರ ತೀವ್ರವಾಗಿದ್ದು, ಸಮುದ್ರತೀರದಲ್ಲಿ ನಿರ್ಮಿಸಿದ್ದ ವೀಕ್ಷಣಾ ಗೋಪುರ, ವಿಶ್ರಾಂತಿ ಶೆಡ್ ಕಡಲು ಸೇರುವ ಭೀತಿಯಲ್ಲಿವೆ.

    ಕಳೆದ ಬಾರಿಯೂ ಈ ಪ್ರದೇಶದಲ್ಲಿ ಕಡಲ್ಕೊರೆತ ಉಂಟಾಗಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣಗೊಂಡ ವೇದಿಕೆ, ವಿದ್ಯುತ್ ಕಂಬಗಳು, ಇಂಟರ್‌ಲಾಕ್ ವ್ಯವಸ್ಥೆ ಹಾಗೂ ತೆಂಗಿನ ಮರಗಳು ಸಮುದ್ರ ಪಾಲಾಗಿದ್ದವು. ಅಂದು ಈ ಪ್ರದೇಶಕ್ಕೆ ಭೇಟಿ ನೀಡಿದ್ದ ಕಂದಾಯ ಸಚಿವ ಆರ್. ಅಶೋಕ್, ಪ್ರವಾಸೋದ್ಯಮ ಇಲಾಖೆ ನಿರ್ಮಾಣದ ಕಾಮಗಾರಿಗಳನ್ನು ತೆರವುಗೊಳಿಸಲು ಸೂಚಿಸಿದ್ದರು. ಆದರೂ ಈ ಭಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಮೂಲಕ ಶೌಚಗೃಹ ನಿರ್ಮಿಸಲಾಗಿತ್ತು. ಈಗ ಕಡಲ್ಕೊರೆತ ಕಾಣಿಸಿಕೊಂಡಿರುವ ಅನತಿ ದೂರದಲ್ಲಿ ತಡೆಗೋಡೆ ಕಾಮಗಾರಿಯನ್ನೂ ನಡೆಸಲಾಗಿದ್ದು, ಅದರ ಕಲ್ಲುಗಳು ಸಮುದ್ರ ಪಾಲಾಗುತ್ತಿವೆ. ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿವೆ.

    ವೀಕ್ಷಣಾ ಗೋಪುರ ಉಳಿಸುವ ನಿಟ್ಟಿನಲ್ಲಿ ಬ್ಲೂ ಫ್ಲಾ್ಲೃಗ್ ಬೀಚ್ ಕಾರ್ಮಿಕರು ಗೋಪುರದ ಬುಡದಲ್ಲೇ ಇದ್ದ ಮರಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಅಲೆಯಬ್ಬರದಿಂದ ರಕ್ಷಿಸಲು ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts