More

    ಸಾಧಕರಿಗೆ ಪದ್ಮಪುರಸ್ಕಾರ ಪ್ರದಾನ

    ನವದೆಹಲಿ: ಪದ್ಮ ಪುರಸ್ಕಾರಗಳಿಗೆ ಭಾಜನರಾದವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪ್ರಶಸ್ತಿಗಳನ್ನು ಸೋಮವಾರ ಪ್ರದಾನ ಮಾಡಿದರು. ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಜನರಲ್ ಬಿಪಿನ್ ರಾವತ್, ಗೀತಾ ಪ್ರೆಸ್​ನ ಪ್ರಕಾಶಕರಾದ ದಿವಂಗತ ರಾಧೇ ಶ್ಯಾಮ್ ಖೇಮಾ, ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಸಹಿತ ಹಲವು ಗಣ್ಯರಿಗೆ 2022ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಲಾಯಿತು.

    ಜಾಬಿ ಜಾನಪದ ಗಾಯಕ ಗುರ್ವಿುತ್ ಬಾವಾ (ಮರಣೋತ್ತರ), ಟಾಟಾ ಸನ್ಸ್ ಚೇರ್ಮನ್ ಎನ್. ಚಂದ್ರಶೇಖರನ್, ಮಾಜಿ ಸಿಎಜಿ ರಾಜೀವ್ ಮೆಹ್ರಿಷಿ, ಕೋವಿಶೀಲ್ಡ್ ಕರೊನಾ ಲಸಿಕೆ ತಯಾರಿಕೆ ಸಂಸ್ಥೆ ಸೆರಂನ ಸಿಇಒ ಸೈರಸ್ ಪೂನಾವಾಲಾ ಮೊದಲಾದವರು ಪದ್ಮಭೂಷಣ ಪಡೆದ ಪ್ರಮುಖರಲ್ಲಿ ಸೇರಿದ್ದಾರೆ. ಪದ್ಮಶ್ರೀಗೆ ಭಾಜನರಾದ 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ ಪ್ರಶಸ್ತಿ ಸ್ವೀಕರಿಸಿದವರಲ್ಲಿ ಅತ್ಯಂತ ಹಿರಿಯರು.

    ಸಾಧಕರಿಗೆ ಪದ್ಮಪುರಸ್ಕಾರ ಪ್ರದಾನ
    ಕವಿ ಸಿದ್ದಲಿಂಗಯ್ಯನವರ ಕುಟುಂಬದ ಸದಸ್ಯೆಯಿಂದ ಪ್ರಶಸ್ತಿ ಸ್ವೀಕಾರ.

    2022ನೇ ಸಾಲಿನಲ್ಲಿ ನಾಲ್ಕು ಪದ್ಮವಿಭೂಷಣ, 17 ಪದ್ಮಭೂಷಣ, 107 ಪದ್ಮಶ್ರೀ ಸೇರಿ 128 ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಇದರಲ್ಲಿ 34 ಮಹಿಳೆಯರಿದ್ದು, 10 ಮಂದಿ ವಿದೇಶಿಯರಿದ್ದಾರೆ. 13 ಜನರಿಗೆ ಮರಣೋತ್ತರವಾಗಿ ಪ್ರಶಸ್ತಿ ಸಿಕ್ಕಿದೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ 54 ಗಣ್ಯರಿಗೆ ಪ್ರಶಸ್ತಿ ನೀಡಲಾಯಿತು. ಉಳಿದವರಿಗೆ ಎರಡನೇ ಹಂತದಲ್ಲಿ ಮಾರ್ಚ್ 28ರಂದು ಪ್ರದಾನ ಆಗಲಿದೆ.

    ಮಧ್ಯರಾತ್ರಿಯಲ್ಲಿ ಓಡೋ ಹುಡುಗ.. ಪರೀಕ್ಷೆಗೂ ಮೊದಲೇ ಸೇನಾಧಿಕಾರಿಯ ಮನಗೆದ್ದ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts