More

    ಭತ್ತ ಖರೀದಿ ಕೇಂದ್ರ ಆರಂಭಿಸಿ: ಅಕ್ಕಿಗಿರಣಿ ಮಾಲೀಕರ ಸಂಘದ ಉಪಾಧ್ಯಕ್ಷ ಹೇಮಯ್ಯಸ್ವಾಮಿ ಆಗ್ರಹ

    ಕಂಪ್ಲಿ: ಮುಂಗಾರು ಹಂಗಾಮಿನ ಭತ್ತ ಕಟಾವಿಗೆ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಇಲ್ಲವಾಗಿದ್ದು, ಭತ್ತ ಖರೀದಿ ಕೇಂದ್ರ ಆರಂಭಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಅಕ್ಕಿಗಿರಣಿ ಮಾಲೀಕರ ಸಂಘದ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಒತ್ತಾಯಿಸಿದರು.

    ಇಲ್ಲಿನ ಶಿವಶಕ್ತಿ ಅಕ್ಕಿಗಿರಣಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಅಕ್ಕಿಗಿರಣಿ ಮಾಲೀಕರ ಸಂಘದ ಸಭೆಯಲ್ಲಿ ಮಾತನಾಡಿದರು. ಪ್ರತಿ ಬಾರಿ ತಡವಾಗಿ ಖರೀದಿ ಕೇಂದ್ರ ತೆರೆಯುವುದರಿಂದ ಸಣ್ಣ, ಮಧ್ಯಮ ವರ್ಗಗಳ ರೈತರು ಭತ್ತ ಮಾರಿ ನಷ್ಟಕ್ಕೀಡಾಗುತ್ತಾರೆ. ಅಕ್ಕಿ ಗಿರಣಿ ಮಾಲೀಕರು ಭತ್ತ ಖರೀದಿ ಕೇಂದ್ರ ಮೂಲಕ ಭತ್ತ ಖರೀದಿಸಲು ಸಿದ್ಧರಿದ್ದು, ಸಭೆ ನಡೆಸಿ ಸೂಚನೆ ನೀಡಿದರೆ ದಾಸ್ತಾನಿಗಾಗಿ ಸ್ಥಳಾವಕಾಶ ಮಾಡಿಕೊಳ್ಳಲು ಹಾಗೂ ಭತ್ತ ಖರೀದಿ ಪ್ರಕ್ರಿಯೆ ಪೂರೈಸಲು ಅನುಕೂಲವಾಗಲಿದೆ ಎಂದರು.

    ಕಳೆದ ಬಾರಿ ನಮ್ಮ ಹಾಗೂ ರೈತರ ಮಧ್ಯೆ ಅಧಿಕಾರಿಗಳು ವಿನಾಕಾರಣ ಗೊಂದಲ ಸೃಷ್ಟಿಸಿದ್ದರು. ಇದರಿಂದ ರೈತರು ಅಕ್ಕಿಗಿರಣಿ ಮಾಲೀಕರ ಬಗ್ಗೆ ತಪ್ಪು ಅಭಿಪ್ರಾಯ ಹೊಂದುವಂತಾಯಿತು. ಈ ಬಾರಿ ಇದಕ್ಕೆ ಆಸ್ಪದ ನೀಡಬಾರದು. ಜಿಲ್ಲಾಧಿಕಾರಿಗಳು ಈ ಕುರಿತು ಗಮನಹರಿಸಬೇಕು ಎಂದು ಒತ್ತಾಯಿಸಿದರು.

    ಸ್ಥಳೀಯ ಅಕ್ಕಿಗಿರಣಿ ಮಾಲೀಕರ ಸಂಘದ ಉಪಾಧ್ಯಕ್ಷ ಎಂ.ಬಾಲವೆಂಕಟೇಶ್ವರಲು, ಸದಸ್ಯರಾದ ಟಿ.ಕೊಟ್ರೇಶ್, ಟಿ.ನರಸಿಂಹಲು, ಜಿ.ಮಹೇಶ್, ಜಿ.ಕೇಶವ, ಕಾಕುಮನಿ ರಾಜೇಂದ್ರ, ಡಿ.ತಿಪ್ಪೇಸ್ವಾಮಿ, ತುಳಸಿರಾಮ್ ಉಬಾಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts