More

    ರಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ

    ಬೆಟ್ಟದಪುರ: ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ದವಸ-ಧಾನ್ಯಗಳನ್ನು ಖರೀದಿ ಮಾಡಿ, ಹಣ ನೀಡುತ್ತಿರುವುದು ರೈತರ ಅನುಕೂಲಕ್ಕಾಗಿಯೇ ಹೊರತು ವ್ಯಾಪಾರಿಗಳಿಗೆ ನೀಡುವ ಉದ್ದೇಶದಿಂದಲ್ಲ. ಅಧಿಕಾರಿಗಳು ಯಾವುದೇ ಕಾರಣಕ್ಕೂ ವ್ಯಾಪಾರಿಗಳಿಗೆ ಸಹಕಾರ ನೀಡಬಾರದು ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.

    ಬೆಟ್ಟದಪುರದ ಎಪಿಎಂಸಿ ಆವರಣದಲ್ಲಿ ಶನಿವಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.
    ಕೆಲ ರೈತರು ಸರ್ಕಾರ ನೀಡುವ ಯೋಜನೆಯ ಸದುಪಯೋಗ ಪಡೆದುಕೊಳ್ಳದೆ, ಯಾರೋ ಒಬ್ಬ ವ್ಯಾಪಾರಿಗೆ ಪಹಣಿ, ಆಧಾರ್ ಕಾರ್ಡ್ ನೀಡುವ ಮೂಲಕ ಆತ ಹಣ ಮಾಡಿಕೊಳ್ಳಲು ಅವಕಾಶ ನೀಡುತ್ತಿರುವುದು ಬೇಸರದ ಸಂಗತಿ. ಅಧಿಕಾರಿಗಳು ಯಾವುದೇ ಕಾರಣಕ್ಕೂ ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ಖರೀದಿ ಪ್ರಕ್ರಿಯೆಯಲ್ಲಿ ದೂರ ಉಳಿಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

    ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಅಥವ ಅವ್ಯವಸ್ಥೆ ಕಂಡು ಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ರೈತರು ಗುಣಮಟ್ಟದ ರಾಗಿಯನ್ನು ಮಾರುಕಟ್ಟೆಗೆ ತರುವಂತೆ ಸಲಹೆ ನೀಡಿದರು.

    ರಾಜ್ಯ ಕೃಷಿ ಮಾರಾಟ ಮಂಡಳಿ ಜಿಲ್ಲಾ ನೋಡಲ್ ಅಧಿಕಾರಿ ವಾಣಿ ಶ್ರೀ ಮಾತನಾಡಿ, ಗುಣಮಟ್ಟದ ರಾಗಿ ಉತ್ಪನ್ನವನ್ನು ಮಾರುಕಟ್ಟೆಗೆ ತರುವಂತೆ ಸಲಹೆ ನೀಡಿದರು.

    ಬೆಟ್ಟದಪುರ ಗ್ರಾ.ಪಂ. ಅಧ್ಯಕ್ಷ ಬಿ.ಎಸ್. ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ರಹಮತ್ ಜಾನ್ ಬಾಬು, ಮುಖಂಡ ಕುಂಜಪ್ಪ ಕಾರ್ನಾಡ್, ಅನಿತಾ ತೋಟಪ್ಪಶೆಟ್ಟಿ, ಸರಸ್ವ್ಪತಿ, ಪುಟ್ಟಸ್ವಾಮಿಗೌಡ, ಸಣ್ಣಸ್ವಾಮಿಗೌಡ, ಗೋವಿಂದೇಗೌಡ, ರಾಜಶೇಖರ್, ಲೋಕೇಶ್, ಚಿಕ್ಕೆಗೌಡ, ಭೀಮಣ್ಣ, ಕೃಷಿ ಮಾರಾಟ ಮಂಡಳಿ ಜಿಲ್ಲಾ ವ್ಯವಸ್ಥಾಪಕಿ ಮಮತಾ, ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ನಿರೀಕ್ಷಕ ಎಂ.ಆರ್. ಮಂಜುನಾಥ್, ಖರೀದಿ ಕೇಂದ್ರದ ಅಧಿಕಾರಿ ಅಕ್ಷಯ್, ತಾ.ಪಂ. ಇಒ ಸುನೀಲ್‌ಕುಮಾರ್, ಕೃಷಿ ಇಲಾಖೆ ನಿರ್ದೇಶಕ ಡಾ.ಪ್ರಸಾದ್, ಜಿ.ಪಂ. ಎಇಇ ಮಲ್ಲಿಕಾರ್ಜುನ್, ಪಿಡಿಒ ಮಂಜುನಾಥ್ ವಿವಿಧ ಇಲಾಖೆ ಅಧಿಕಾರಿಗಳು, ರೈತ ಸಂಘದ ಪ್ರಮುಖರು, ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts