More

    ಅಭಿಷೇಕ್ ಅಂಬರೀಶ್ ಬಿಡುಗಡೆ ಮಾಡಿದರು ‘ಪದವಿಪೂರ್ವ’ ಚಿತ್ರದ ಟ್ರೇಲರ್ …

    ಬೆಂಗಳೂರು: ‘ಪದವಿ ಪೂರ್ವ’ ಚಿತ್ರದ ಟೀಸರ್​, ಜಗ್ಗೇಶ್​ ಅವರಿಂದ ಬಿಡುಗಡೆಯಾಗಿತ್ತು. ಆ ನಂತರ ಚಿತ್ರದ ಎರಡು ಹಾಡುಗಳನ್ನು ಸುದೀಪ್​ ಮತ್ತು ಧ್ರುವ ಸರ್ಜಾ ಬಿಡುಗಡೆ ಮಾಡಿದ್ದರು. ಚಿತ್ರದ ಟ್ರೈಲರ್​ ಯಾರು ರಿಲೀಸ್​ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಅಭಿಷೇಕ್​ ಅಂಬರೀಷ್​ ಟ್ರೈಲರ್​ ರಿಲೀಸ್​ ಮಾಡಿದ್ದಾರೆ.

    ಇದನ್ನೂ ಓದಿ: ನಿಧನರಾಗಿ ಆರು ವರ್ಷಗಳ ನಂತರ ಉದಯ್ ಅಭಿನಯದ ಚಿತ್ರವೊಂದು ಬಿಡುಗಡೆ!

    ‘ಪದವಿ ಪೂರ್ವ’ ಚಿತ್ರದ ಟ್ರೈಲರ್​, ಅಭಿಷೇಕ್ ಅವರಿಂದ ಬಿಡುಗಡೆ ಮಾಡಿಸಬೇಕೆಂಬುದು ಚಿತ್ರತಂಡದ ಆಸೆಯಾಗಿತ್ತಂತೆ. ಅದಕ್ಕೆ ಅಭಿಷೇಕ್​ ಸಹ ಸ್ಪಂದಿಸಿ, ಟ್ರೈಲರ್​ ಹೊರ ತಂದಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಈ ಚಿತ್ರದ ನಾಯಕ ಪೃಥ್ವಿ ಶಾಮನೂರು ಅವರ ಉತ್ಸಾಹ ನೋಡಿದರೆ ಖುಷಿಯಾಗುತ್ತಿದೆ. ಟ್ರೇಲರ್ ಚೆನ್ನಾಗಿದೆ. ಅರ್ಜುನ್ ಜನ್ಯ‌ ಅವರ ಸಂಗೀತ ನಿರ್ದೇಶನ ಹಾಗೂ ‌ರೀರೆಕಾರ್ಡಿಂಗ್ ಅದ್ಭುತವಾಗಿದೆ. ನಿರ್ದೇಶಕ ಹರಿಪ್ರಸಾದ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ’ ಎಂದು ಹಾರೈಸಿದರು ಅಭಿಷೇಕ್​ ಅಂಬರೀಷ್​.

    ಚಿತ್ರತಂಡದವರು ರಾಜ್ಯದ ಬೇರೆಬೇರೆ ಊರುಗಳಿಗೆ ಹೋಗಿ ಪ್ರಮೋಷನ್​ ಮಾಡಿ ಬರುತ್ತಿದ್ದಾರೆ. ಹಾಗೆ ಹೋದ ಕಡೆಗೆಲ್ಲ, ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆಯಂತೆ. ‘ಹೋದ ಕಡೆ ಎಲ್ಲಾ ನಮ್ಮನ್ನು ಗುರುತಿಸಿ, ಚಿತ್ರದ ಹಾಡುಗಳು ಹಾಗೂ ಟೀಸರ್ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ. ಎಲ್ಲರ ಬೆಂಬಲವಿರಲಿ’ ಎಂದರು ಚಿತ್ರದ ನಾಯಕ ಪೃಥ್ವಿ ಶಾಮನೂರು.

    ಇದನ್ನೂ ಓದಿ: ವಿವಾದದ ನಡುವೆಯೂ ಬೇಡಿಕೆ ಹೆಚ್ಚಿಸಿಕೊಂಡ ಪಠಾಣ್; ಬಹುಕೋಟಿ ಮೊತ್ತಕ್ಕೆ ಸೇಲ್ ಆಯ್ತು ಒಟಿಟಿ ಹಕ್ಕು!

    ‘ಪದವಿ ಪೂರ್ವ’ ಚಿತ್ರವು ಇದೇ ಡಿಸೆಂಬರ್ 30ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಹರಿಪ್ರಸಾದ್​ ಜಯಣ್ಣ ನಿರ್ದೇಶನ ಮಾಡಿದರೆ, ಯೋಗರಾಜ್​ ಭಟ್​ ಮತ್ತು ರವಿ ಶಾಮನೂರು ಜಂಟಿಯಾಗಿ ನಿರ್ಮಿಸಿದ್ದಾರೆ. ಪೃಥ್ವಿಗೆ ನಾಯಕಿಯರಾಗಿ ಅಂಜಲಿ ಅನೀಶ್​ ಮತ್ತು ಯಶಾ ಶಿವಕುಮಾರ್​ ನಟಿಸಿದ್ದು, ಶರತ್ ಲೋಹಿತಾಶ್ವ, ರಂಗಾಯಣ ರಘು, ‘ರಾಮ ರಾಮಾ ರೇ’ ಖ್ಯಾತಿಯ ನಟರಾಜ್ ಭಟ್, ಯೋಗರಾಜ್ ಭಟ್, ಅದಿತಿ ಪ್ರಭುದೇವ, ದಿವ್ಯ ಉರುಡುಗ, ಪ್ರಭು ಮುಂಡ್ಕೂರು, ಶ್ರೀಮಹದೇವ್​ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷ ರೈ ಪಾತಾಜೆ ಛಾಯಾಗ್ರಹಣ ಮತ್ತು ಅರ್ಜುನ್​ ಜನ್ಯ ಸಂಗೀತ ಈ ಚಿತ್ರಕ್ಕಿದೆ.

    ಯಶ್​ ಹೊಸ ಚಿತ್ರದ ಘೋಷಣೆ ಯಾವಾಗ? ಅವರೇ ಹೇಳ್ತಾರೆ ಕೇಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts