More

    ಪಿಎಸಿಎಲ್​ ಕ್ಲೇಮ್​ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ, ಹೂಡಿಕೆದಾರರಿಗೆ ಹಣ ಹಿಂಪಡೆಯಲು ಮತ್ತೊಂದು ಅವಕಾಶ

    ಬೆಂಗಳೂರು: ಬಹುಕೋಟಿ ವಂಚಿಸಿದ ಪರ್ಲ್​ ಅಗ್ರೊಟೆಕ್​ ಕಾರ್ಪೋರೇಶನ್​ ಲಿಮಿಟೆಡ್​ (ಪಿಎಸಿಎಲ್​) ನಲ್ಲಿ ಹೂಡಿಕೆದಾರರು ಹಣ ಹಿಂಪಡೆಯಲು ಅರ್ಜಿ
    ಸಲ್ಲಿಸುವ ದಿನಾಂಕ ವಿಸ್ತರಿಸಲಾಗಿದೆ.

    ದೇಶ ವ್ಯಾಪಿ ಸಾವಿರಾರು ಕೋಟಿ ರೂ. ವಂಚನೆ ಮಾಡಿದ ಪಿಎಸಿಎಲ್​ ಕಂಪನಿಗೆ ಸೇರಿದ ಆಸ್ತಿಯನ್ನು ಸೆಬಿ ಜಪ್ತಿ ಮಾಡಿತ್ತು. ಹೂಡಿಕೆದಾರರಿಗೆ ಹಣ ಹಿಂತಿರುಗಿಸಲು ಕೇಂದ್ರ ಸರ್ಕಾರ ನಿವೃತ್ತ ನ್ಯಾ. ಲೋಧಾ ಸಮಿತಿ ರಚಿಸಿತ್ತು. ಈ ಸಮಿತಿ ಹೂಡಿಕೆದಾರರಿಗೆ ಹಣ ಮರುಪಾವತಿ ಮಾಡುವ ಪ್ರಕ್ರಿಯೆ ಆರಂಭಿಸಿ 2019ರ ಡಿ.3 ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿತ್ತು. ಮತ್ತೆ ಜು.31ರ ವರೆಗೆ ಮತ್ತೊಂದು ಅವಕಾಶ ನೀಡಿತ್ತು. ಈ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ ಅಕ್ಟೋಬರ್​ 30ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ.

    ಇದನ್ನೂ ಓದಿರಿ ಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!

    ಪಿಎಸಿಎಲ್​ ಲಿಮಿಟೆಡ್​ನ 5,70,706 ಅರ್ಹ ಹೂಡಿಕೆದಾರರಿಗೆ ಹಣ ಹಿಂತಿರುಗಿಸಬೇಕು. 2019ರ ಡಿಸೆಂಬರ್​ ಅಂತ್ಯಕ್ಕೆ 3,81,603 ಅರ್ಜಿಗಳನ್ನು ಸ್ವೀಕರಿಸಿದ್ದ ಸಮಿತಿ, ತಲಾ 5 ಸಾವಿರ ರೂ. ಹಿಂತಿರುಗಿಸಿತ್ತು. ಪ್ರಸ್ತುತ 5 ಮತ್ತು 7 ಸಾವಿರ ರೂ. ಅಂತೆ ಮಾಚ್​ನಿಂದ ಏಪ್ರಿಲ್​ ಅವಧಿಯಲ್ಲಿ 2,59,862 ಅರ್ಹ ಅರ್ಜಿದಾರರಿಗೆ ಮರುಪಾವತಿ ಮಾಡಲಾಗಿದೆ. ಕೆಲ ಅರ್ಜಿಗಳಲ್ಲಿ ಲೋಪ ಕಂಡು ಬಂದಿರುವ ಕಾರಣಕ್ಕೆ ತಡೆ ಹಿಡಿಯಲಾಗಿದೆ. ಲೋಪ ಸರಿಪಡಿಸಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಅಕ್ಟೋಬರ್​ 30ರ ಒಳಗಾಗಿ ಮರು ಅರ್ಜಿ ಸಲ್ಲಿಸಲ್ಲು ಅವಕಾಶ ನೀಡಲಾಗಿದೆ. ಆಗಸ್ಟ್​ 1ರಿಂದ ಸೆಬಿ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸುವ ಪೋರ್ಟಲ್​ ಕಾರ್ಯನಿರ್ವಹಿಸಲಿದೆ ಎಂದು ನಿವೃತ್ತ ನ್ಯಾ.ಲೋಧಾ ಸಮಿತಿ ಮತ್ತು ಸೆಬಿ ಪ್ರಕಟಣೆಯಲ್ಲಿ ತಿಳಿಸಿದೆ.

    ಹೂಡಿಕೆ ಹಣ ವಾಪಸ್​ ಕೊಡಿಸುವುದಾಗಿ ಯಾವುದೇ ಅಧಿಕಾರಿ ಮತ್ತು ಖಾಸಗಿ ಕಂಪನಿಗಳ ಆಮಿಷಗಳಿಗೆ ಒಳಗಾಗಬೇಡಿ. ಹೆಚ್ಚಿನ ಮಾಹಿತಿಗೆ ಸೆಬಿ ವೈಬ್​ಸೈಟ್​ನಲ್ಲಿ ನವೀಕರಿಸಿದ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ. ಆಮಿಷಕ್ಕೆ ಒಳಗಾಗಿ ಮೋಸ ಹೋಗಬೇಡಿ ಎಂದು ಸೆಬಿ ಅಧಿಕಾರಿಗಳು ಎಚ್ಚರಿಸಿದ್ದಾರೆ.

    ಗಂಡ ಸತ್ತು 2 ತಿಂಗಳಾಯ್ತು, ಕಡುಬಡತನಕ್ಕೆ ಹೆದರಿ ಹಸುಗೂಸನ್ನೇ ದತ್ತು ಕೊಡಲು ಬಯಸಿದಳು… ಕೊನೆಗೆ ಆ ದಂಧೆಗೆ ಸಿಲುಕಿದಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts