More

    18 ಸಾವಿರ ಜನರಿಗೆ ಆಕ್ಸ್​ಫರ್ಡ್​ ವಿವಿ ಲಸಿಕೆ ಪ್ರಯೋಗ; ಮತ್ತೆ ಶುರುವಾಯ್ತು ಕ್ಲಿನಿಕಲ್​ ಟ್ರಯಲ್​

    ಲಂಡನ್​: ಜಗತ್ತಿನಾದ್ಯಂತ ಈವರೆಗೆ 18,000 ಜನರಿಗೆ ಬ್ರಿಟನ್​ನ ಅಸ್ಟ್ರಾಜೆನೆಕಾ ಹಾಗೂ ಆಕ್ಸ್​ಫರ್ಡ್​ ವಿವಿ ತಂಡ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕರೊನಾ ವೈರಸ್​ ವೈರಸ್​ ನಿಗ್ರಹ ಲಸಿಕೆಯನ್ನು ನೀಡಲಾಗಿದೆ.

    ಕಳೆದ ವಾರ ಲಸಿಕೆ ಪಡೆದಿದ್ದ ಬ್ರಿಟನ್​ ವ್ಯಕ್ತಿಯೊಬ್ಬರಲ್ಲಿ ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಕ್ಲಿನಿಕಲ್​ ಟ್ರಯಲ್​ಅನ್ನು ಶನಿವಾರ ಮತ್ತೆ ಆರಂಭಿಸಲಾಗಿದೆ ಎಂದು ಆಕ್ಸ್​ಫರ್ಡ್​ ವಿವಿ ಮಾಹಿತಿ ನೀಡಿದೆ. ಅಮೆರಿಕದ ಔಷಧ ಹಾಗೂ ಆರೋಗ್ಯ ನಿಯಂತ್ರಣ ಸಂಸ್ಥೆಯ ಪರವಾನಗಿ ಪಡೆದುಕೊಂಡ ಬಳಿಕ ಮತ್ತೆ ಪರೀಕ್ಷಾ ಪ್ರಕ್ರಿಯೆ ಮತ್ತೆ ಆರಂಭಿಸಲಾಗಿದೆ ಎಂದು ಹೇಳಿದೆ.

    ಇದನ್ನೂ ಓದಿ; ಎ.ಕೆ. -47 ಗುಂಡನ್ನು ತಡೆಯಬಲ್ಲುದು ಈ ಭಾಭಾ ಕವಚ….! 

    ಸದ್ಯ ಅಮೆರಿಕ, ಬ್ರಿಟನ್​, ಬ್ರೆಜಿಲ್​ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಈ ಲಸಿಕೆಯ ಅಂತಿಮ ಹಂಥದ ಪ್ರಯೋಗ ನಡೆಯುತ್ತಿದೆ. ಭಾರತದಲ್ಲೂ ಕೂಡ ಮೈಸೂರಿನ ಜೆಎಸ್​ಎಸ್​ ಆಸ್ಪತ್ರೆ ಸೇರಿ 17 ಕಡೆಗಳಲ್ಲಿ ಎರಡನೇ ಹಂತದ ಪ್ರಯೋಗ ಕೈಗೊಳ್ಳಲಾಗಿದೆ.

    ಈ ಲಸಿಕೆಯನ್ನು ಅಂದಾಜು 30 ಸಾವಿರ ಜನರ ಮೇಲೆ ಪ್ರಯೋಗಿಸುವ ಉದ್ದೇಶ ಹೊಂದಲಾಗಿದೆ. ಪ್ರತಿಯೊಬ್ಬರಲ್ಲೂ ಉಂಟಾಗುವ ಪರಿಣಾಮಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅಧ್ಯಯನ ಮಾಡಲಾಗುತ್ತದೆ ಎಂದು ವಿವಿ ಹೇಳಿದೆ. ಭಾರತದಲ್ಲಿ ಈ ಲಸಿಕೆ ಉತ್ಪಾದನೆಗೆ ಅನುಮತಿ ಪಡೆದಿರುವ ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಮುಖ್ಯಸ್ಥ ಆದಾರ್​ ಪೂನಾವಾಲಾ ಇದೊಂದು ಶುಭಸುದ್ದಿ ಎಂದು ಬಣ್ಣಿಸಿದ್ದಾರೆ.

    ಈ ಫೋಟೋದಲ್ಲಿ ಹತ್ತು ವ್ಯತ್ಯಾಸ ಗುರುತಿಸಬಲ್ಲಿರಾ? ಅಮೆರಿಕ ಗುಪ್ತಚರ ಸಂಸ್ಥೆ ಹಾಕಿದ ಸವಾಲಿದು….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts