More

    ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

    ನವದೆಹಲಿ: ಕರೊನಾ ಲಸಿಕೆ ಸಂಶೋಧನೆ ವಿಚಾರದಲ್ಲಿ ಅತ್ಯಂತ ಆಸಕ್ತಿದಾಯಕ ಅಂಶವೊಂದು ಹೊರ ಬಿದ್ದಿದೆ. ಔಷಧ ಕಂಡು ಹಿಡಿಯುವಲ್ಲಿ ತೊಡಗಿರುವ ಎಲ್ಲ ಕಂಪನಿಗಳು ಚುಚ್ಚುಮದ್ದು ಅಥವಾ ಲಸಿಕೆ ರೂಪದಲ್ಲಿ ನೀಡುವ ಕುರಿತಾಗಿಯೇ ಯೋಚನೆ ನಡೆಸಿವೆ. ಆದರೆ, ಲಂಡನ್​ನ ಇಂಪೀರಿಯಲ್​ ಕಾಲೇಜು ಹಾಗೂ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರು ಬೇರೆಯದೇ ಚಿಂತನೆಯನ್ನು ಮುಂದಿಟ್ಟಿದ್ದಾರೆ.

    ಸದ್ಯ ಪ್ರಯೋಗ ಹಂತದಲ್ಲಿರುವ ಔಷಧವನ್ನು ಚುಚ್ಚುಮದ್ದಿನ ಮೂಲಕವೇ ಮಾನವರಿಗೆ ನಿಡಲಾಗುತ್ತಿದೆ. ಆದರೆ, ಇದಕ್ಕಿಂತ ಔಷಧವನ್ನು ಮೂಗಿನ ಮೂಲಕ ನೀಡುವುದು ಅಥವಾ ಇನ್​ಹೇಲರ್​ ವಿಧಾನದ ಮೂಲಕ ಒದಗಿಸುವುದು ಹೆಚ್ಚು ಪರಿಣಾಮಕಾರಿ ಎನಿಸಲಿದೆ ಎಂಬುದು ಅವರ ವಾದ.

    ಇದನ್ನೂ ಓದಿ; ಯಾವ ದೇಶ ಮೊದಲಿಗೆ ಪಡೆಯುತ್ತೆ ಕರೊನಾ ಲಸಿಕೆ? ಭಾರತಕ್ಕೂ ಖುಲಾಯಿಸುತ್ತೆ ಅದೃಷ್ಟ

    ಕರೊನಾ ಶ್ವಾಸಕೋಶಕ್ಕೆ ಹಾನಿಯನ್ನುಂಟು ಮಾಡಿ ಉಸಿರಾಟಕ್ಕೆ ತೊಂದರೆ ಕೊಡುತ್ತದೆ. ಹೀಗಾಗಿ ಔಷಧವನ್ನು ನೇರವಾಗಿ ಶ್ವಾಸಕೋಶಕ್ಕೆ ತಲುಪುವಂತೆ ನೀಡುವುದರಿಂದ ಹೆಚ್ಚು ಅನುಕೂಲವಾಗಲಿದೆ. ರೋಗಿಗಳನ್ನು ಕಾಪಾಡುವ ಉತ್ತಮ ವಿಧಾನವೂ ಇದಾಗಿದೆ ಎಂದು ತಜ್ಞರು ಹೇಳಿದ್ದಾರೆ.

    ಬಾಯಿ ಅಥವಾ ಮೂಗಿನ ಮೂಲಕ ಔಷಧ ನೀಡುವುದರಿಂದ ಹೆಚ್ಚಿನ ಶ್ಲೇಷ್ಮಿಕ ಪರಿಣಾಮ ಉಂಟು ಮಾಡಲಿದೆ. ಅಲ್ಲದೇ, ಶ್ವಾಸಕೋಶಕ್ಕೆ ಔಷಧ ರವಾನಿಸುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದೇವೆ. ಅಂದರೆ, ಮೂಗಿನ ಔಷಧವಾಗಿ ಅಥವಾ ಇನ್​ಹೇಲರ್​ ಸ್ವರೂಪದಲ್ಲಿ ( ಗಾಳಿಯ ಕಣಗಳು) ಆಕ್ಸ್​ಫರ್ಡ್​ ವಿವಿಯ ಪ್ರಾಧ್ಯಾಪಕಿ, ಲಸಿಕೆ ಸಂಶೋಧನೆಯ ಮುಖ್ಯಸ್ಥೆಯಾಘಿರುವ ಸಾರಾ ಗಿಲ್ಬರ್ಟ್​ ಹೇಳಿದ್ದಾರೆ.

    ಇದನ್ನೂ ಓದಿ; ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ

    ಶ್ವಾಸಕೋಶದ ಹೊರಪದರಕ್ಕೆ ಔಷಧ ನೀಡುವುದರಿಂದ ಉಸಿರಾಟದ ಅಂಗವನ್ನು ನೇರವಾಗಿ ರಕ್ಷಿಸಬಹುದು. ಇದು ಹಿರಿಯ ನಾಗರಿಕರಿಗೆ ಹೆಚ್ಚು ರಕ್ಷಣೆ ನೀಡುತ್ತದೆ. ಇದರಿಂದ ವೈರಸ್​ ಕಣಗಳು ದೇಹವನ್ನು ಪ್ರವೇಶಿಸುವ ಮೂಗು ಬಾಯಿಗೂ ಕೂಡ ರಕ್ಷಣಾ ಪದರ ನೀಡಿದಂತಾಗಲಿದೆ. ಜತೆಗೆ, ಪ್ರವೇಶ ದ್ವಾರದಲ್ಲೇ ಕಾಯಿಲೆಯನ್ನು ತಡೆದಂತಾಗುತ್ತದೆ ಎಂಬುದು ಸಂಶೋಧಕರ ವಿಶ್ಲೇಷಣೆ.

    ಕರೊನಾದಷ್ಟೇ ಮಾರಕವಾಗಿದ್ದ ಈ ಕಾಯಿಲೆ ಕೊನೆಗೂ ತೊಲಗಿದೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts