More

    ನಟ ಸೋನು ಸೂದ್​​ಗೆ ಐಟಿ ಕಂಟಕ: 20 ಕೋಟಿ ರೂ. ತೆರಿಗೆ ವಂಚನೆ ಆರೋಪ

    ನವದೆಹಲಿ: ಕೋವಿಡ್​ ಸಮಯದಲ್ಲಿ ಸಾಕಷ್ಟು ಜನಸೇವೆ ಮಾಡಿದ್ದ ನಟ ಸೋನು ಸೂದ್​ ಅವರು ₹ 20 ಕೋಟಿಗೂ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಸತತ ಮೂರು ದಿನಗಳ ಕಾಲ ಅವರ ಮುಂಬೈ ಮನೆಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡ ನಂತರ ಐಟಿ ಅಧಿಕಾರಿಗಳು ಇಂದು ಈ ಹೇಳಿಕೆ ನೀಡಿದ್ದಾರೆ.

    ಜೊತೆಗೆ, ಸೂದ್ ಅವರ ನಾನ್​ಪ್ರಾಫಿಟ್​ ಸಂಸ್ಥೆ, ಸೂದ್​ ಚ್ಯಾರಿಟಿ ಫೌಂಡೇಶನ್​​, ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಮಾಡಿ, ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ವಿದೇಶಿ ಕೊಡುಗೆದಾರರಿಂದ ಸುಮಾರು 2.1 ಕೋಟಿ ರೂ. ಹಣವನ್ನು ಸಂಗ್ರಹಿಸಿದೆ ಎಂದೂ ಐಟಿ ಇಲಾಖೆ ಆರೋಪಿಸಿದೆ.

    ಇದನ್ನೂ ಓದಿ: 10 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಚಿಕ್ಕಜಾಲ ಠಾಣೆಯ ಇನ್ಸ್​ಪೆಕ್ಟರ್: ಹಿಂದಿನ ಇನ್ಸ್​ಪೆಕ್ಟರ್​ ಕತೆಯೂ ಇದೆ​

    “ಸೂದ್​ ಮತ್ತು ಅವರ ಸಹಚರರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ವೇಳೆ ತೆರಿಗೆ ವಂಚನೆ ಮಾಡಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಲೆಕ್ಕ ಹೊಂದಿಲ್ಲದ ಆದಾಯಗಳನ್ನು ಬೋಗಸ್​​ ಅನ್​ಸೆಕ್ಯೂರ್ಡ್​ ಲೋನ್​ಗಳಾಗಿ ತೋರಿಸುವ ವಿಧಾನವನ್ನು ಅವರು ಅನುಸರಿಸಿರುವುದು ಕಂಡುಬಂದಿದೆ. ಈ ರೀತಿಯಾಗಿ 20 ಎಂಟ್ರಿಗಳು ಕಂಡುಬಂದಿದ್ದು, ಒಟ್ಟು ವಂಚಿಸಲಾದ ತೆರಿಗೆ ಮೊತ್ತವು 20 ಕೋಟಿ ರೂ.ಗಿಂತ ಹೆಚ್ಚಾಗಿದೆ” ಎಂದು ಐಟಿ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

    ಕೋವಿಡ್​ ಸಂತ್ರಸ್ತರಿಗೆ ಭಾರೀ ಮೊತ್ತದ ದೇಣಿಗೆಗಳನ್ನು ನೀಡಿ ಹೆಸರು ಮಾಡಿರುವ ಸೋನು ಸೂದ್​, ಈ ಕೆಲಸಗಳಿಗಾಗಿ ಕಳೆದ ವರ್ಷ ಜುಲೈನಲ್ಲಿ ಆರಂಭಿಸಿದ ಸೂದ್​​ ಚಾರಿಟಿ ಫೌಂಡೇಶನ್​ ಬಗೆಗೂ ಐಟಿ ಇಲಾಖೆ ಕೆಲವು ಆಕ್ಷೇಪಗಳನ್ನು ಹೊರಹಾಕಿದೆ. ಈ ಸಂಸ್ಥೆಯು 2021 ರ ಏಪ್ರಿಲ್​ವರೆಗೆ 18 ಕೋಟಿ ರೂ.ಗಳಿಗೂ ಹೆಚ್ಚು ದೇಣಿಗೆಗಳನ್ನು ಸಂಗ್ರಹಿಸಿದೆ. ಆ ಮೊತ್ತದಲ್ಲಿ ಕೇವಲ 1.9 ಕೋಟಿ ರೂ.ಗಳನ್ನು ಪರಿಹಾರ ಕಾರ್ಯಗಳಿಗೆ ಬಳಸಲಾಗಿದ್ದು, ಉಳಿದ ಸುಮಾರು 17 ಕೋಟಿ ರೂ. ಫೌಂಡೇಶನ್ನಿನ ಬ್ಯಾಂಕ್​ ಖಾತೆಯಲ್ಲಿ ಹಾಗೇ ಇದೆ ಎಂದು ತಿಳಿಸಿದೆ.

    ಇದನ್ನೂ ಓದಿ: ಉಪನಾಯಕತ್ವದಿಂದ ರೋಹಿತ್ ಶರ್ಮ ಕೆಳಗಿಸಲು ಯತ್ನಿಸಿದ್ದರೇ ವಿರಾಟ್ ಕೊಹ್ಲಿ!

    ಸೂದ್ ಇತ್ತೀಚೆಗೆ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ದೆಹಲಿ ಸರ್ಕಾರದೊಂದಿಗೆ ಸಾಮಾಜಿಕ ಕಾರ್ಯಕ್ರಮಗಳ ಸಂಬಂಧವಾಗಿ ಒಪ್ಪಂದ ಮಾಡಿಕೊಳ್ಳುವುದಾಗಿ ಘೋಷಿಸಿದ್ದರು. ಆದ್ದರಿಂದ ಕೇಂದ್ರದ ಬಿಜೆಪಿ ಸರ್ಕಾರ ಸೂದ್​ ವಿರುದ್ಧ ರಾಜಕೀಯ ಪ್ರೇರಿತವಾದ ತನಿಖೆ ಆದೇಶಿಸಿದೆ ಎಂದು ಸೂದ್​ ಅಭಿಮಾನಿಗಳು ಮತ್ತು ರಾಜಕೀಯ ನಾಯಕರು ಆರೋಪಿಸಿದ್ದಾರೆ. (ಏಜೆನ್ಸೀಸ್)

    ರವಿ ಶಾಸ್ತ್ರಿ ನಂತರ ಹೆಡ್​ ಕೋಚ್​ ಯಾರು? ಸಂಭಾವ್ಯ ಪಟ್ಟಿಯಲ್ಲಿ ಈ ಇಬ್ಬರ ಹೆಸರು!

    ಮೋದಿ ಜನ್ಮದಿನಕ್ಕೆ ‘ರಾಷ್ಟ್ರೀಯ ನಿರುದ್ಯೋಗ ದಿನ’ದ ಪ್ರತ್ಯುತ್ತರ!

    ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತೆ ಅಂತ ತಮ್ಮನನ್ನೇ ಕೊಂದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts