More

    ಜೂ.1ರಿಂದ ಮತ್ತಷ್ಟು ಸಡಿಲಕೆ

    ಜೂ.1ರಿಂದ ಮತ್ತಷ್ಟು ಸಡಿಲಕೆ

    ತರೀಕೆರೆ: ಲಾಕ್​ಡೌನ್ ಜೂ.1ರಿಂದ ಮತ್ತಷ್ಟು ಸಡಿಲಿಕೆ ಆಗುವ ಮಾಹಿತಿ ಇರುವುದರಿಂದ ಮಕ್ಕಳು, ಯುವಕರು, ವಯಸ್ಸಾದವರು ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

    ತಾಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕರೊನಾ ತಡೆಗೆ ಮುಂಜಾಗ್ರತೆ ಮತ್ತು ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

    ಕರೊನಾ ಸೋಂಕು ವಿಶ್ವವನ್ನೇ ವ್ಯಾಪಿಸಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೂ ಆವರಿಸಿ ಸಾಮೂಹಿಕವಾಗಿ ಹರಡುವ ಸಾಧ್ಯತೆಯಿದೆ ಎಂದರು.

    ಜೂ.1ರಿಂದ ಹೊರ ರಾಜ್ಯಗಳಿಗೆ ಹೋಗಿ ಬರುವವರನ್ನು ಹೋಂ ಕ್ವಾರಂಟೈನ್ ಮಾಡುವ ಸುಳಿವು ಸಿಕ್ಕಿದೆ. ಹೋಂ ಕ್ವಾರಂಟೈನ್ ಆಗುವವರು ಮನೆಯಿಂದ ಹೊರಬಾರದಂತೆ ನೋಡಿಕೊಳ್ಳಬೇಕು ಎಂದು ಡಿವೈಎಸ್ಪಿ ರೇಣುಕಾಪ್ರಸಾದ್ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಸá-ದೀರ್ಘ ಸಮಯ ಲಾಕ್​ಡೌನ್ ವಿಸ್ತರಿಸಿದ್ದರಿಂದ ಸಾವಿನ ಪ್ರಮಾಣ ನಿಯಂತ್ರಣದಲ್ಲಿದೆ. ದಿನೇದಿನೆ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದ್ದು, ಇದರಿಂದ ಮುಕ್ತಿ ದೊರಕುವುದು ಯಾವಾಗ ಎಂಬುದು ಅಸ್ಪಷ್ಟವಾಗಿದೆ. ಮಹಾರಾಷ್ಟ್ರಕ್ಕೆ ಹೋಗಿ ಬರುತ್ತಿರುವವರಿಂದ ರಾಜ್ಯಕ್ಕೆ ಕಂಟಕ ಎದುರಾಗಿದ್ದು, ಮಹಾರಾಷ್ಟ್ರ ಸೇರಿ ಹೊರ ರಾಜ್ಯಗಳಿಗೆ ಹೋಗಿ ಬರುವ ವ್ಯಕ್ತಿಗಳು ಹಾಗೂ ವಾಹನಗಳನ್ನು ಸ್ಯಾನಿಟೈಸ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಜಿ.ಚಂದ್ರಶೇಖರ್ ಮಾತನಾಡಿ, ಲಾಕ್​ಡೌನ್ ಆದಾಗಿನಿಂದ ಹೊರ ರಾಜ್ಯಗಳಿಂದ ತಾಲೂಕಿಗೆ ಬಂದ 49 ಮಂದಿಯನ್ನು ಕ್ವಾರಂಟೈನ್ ಮಾಡಿ ಅವರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪೈಕಿ 34 ಮಂದಿಗೆ ನೆಗೆಟಿವ್ ಬಂದಿದ್ದು, ಅವರೆಲ್ಲರನ್ನೂ ಬಿಡುಗಡೆಗೊಳಿಸಲಾಗಿದೆ. ಇನ್ನುಳಿದವರ ವರದಿ ಸದ್ಯದಲ್ಲೇ ಕೈಸೇರುವ ನಿರೀಕ್ಷೆ ಇದೆ. ಸೋಂಕಿತ ಗರ್ಭಿಣಿ ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಮಂದಿಯನ್ನು ಕ್ವಾರಂಟೈನ್ ಮಾಡಿ 2 ಸಲ ಪ್ರಯೋಗಾಲಯಕ್ಕೆ ವರದಿ ಕಳುಹಿಸಲಾಗಿತ್ತಾದರೂ ಎರಡು ಬಾರಿಯೂ ವರದಿ ನೆಗೆಟಿವ್ ಬಂದಿದೆ.

    ಪುರಸಭೆ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಮಾತನಾಡಿ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಎಲ್ಲ ವಾರ್ಡ್​ಗಳಿಗೂ ಪ್ರತಿ ದಿನ ಮಿಲಾಥಿಯನ್ ಇಸಿ ಪುಡಿ ಸಿಂಪಡಿಸಲಾಗುತ್ತಿದೆ. ಪೌರಕಾರ್ವಿುಕರಿಗೆ ಸುರಕ್ಷಾ ಕವಚಗಳನ್ನು ವಿತರಿಸಲಾಗಿದೆ. ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಸ್ಥಗಿತಗೊಳಿಸಿರುವುದರಿಂದ ಮಾನಸಿಕೆರೆ ಮೂಲಕ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಡಿವೈಎಸ್ಪಿ ಬಿ.ವೈ.ರೇಣುಕಾಪ್ರಸಾದ್ ಮಾತನಾಡಿ, ಲಾಕ್​ಡೌನ್ ಸನ್ನಿವೇಶದಲ್ಲಿ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ 21 ಚೆಕ್​ಪೋಸ್ಟ್ ತೆರೆಯಲಾಗಿತ್ತು. ಲಾಕ್​ಡೌನ್ ಸಡಿಲಿಕೆ ಮಾಡಿದ್ದರಿಂದ ಪ್ರಸ್ತುತ 6 ಚೆಕ್​ಪೋಸ್ಟ್ ಉಳಿಸಿಕೊಳ್ಳಲಾಗಿದೆ. ಕರೊನಾ ಸೇನಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಮಾಸ್ಕ್, ಗ್ಲೌಸ್ ಮತ್ತು ಸ್ಯಾನಿಟೈಸರ್ ವಿತರಿಸಲಾಗಿದೆ. ಲಾಕ್​ಡೌನ್ ಕರ್ತವ್ಯ ನಿರ್ವಹಣೆಗೆ ವಾಹನದ ಕೊರತೆ ಎದುರಾಗಿದೆ ಎಂದು ಹೇಳಿದರು.

    ಇದಕ್ಕೆ ಸ್ಪಂದಿಸಿದ ಸಂಸದೆ ಶೋಭಾ ಕರಂದ್ಲಾಜೆ, ಹೆಚ್ಚು ಕೆಲಸವಿಲ್ಲದ ಇಲಾಖೆಗಳ ವಾಹನಗಳನ್ನು ಪೊಲೀಸ್ ಇಲಾಖೆಗೆ ನಿಯೋಜಿಸಿಕೊಡುವಂತೆ ತಹಸೀಲ್ದಾರ್ ಸಿ.ಜಿ.ಗೀತಾ ಅವರಿಗೆ ಸೂಚಿಸಿದರು.

    ಶಾಸಕ ಡಿ.ಎಸ್.ಸುರೇಶ್, ತಾಪಂ ಅಧ್ಯಕ್ಷೆ ಪದ್ಮಾವತಿ, ಸದಸ್ಯರಾದ ಎಂ.ಕರಿಯಣ್ಣ, ಡಿ.ಹಾಲಾನಾಯ್ಕ, ತಹಸೀಲ್ದಾರ್ ವಿಶ್ವೇಶ್ವರ ರೆಡ್ಡಿ, ಇಒ ಎಂ.ಎಸ್.ವಿಶಾಲಾಕ್ಷಮ್ಮ, ಟಿಎಚ್​ಒ ಡಾ. ಬಿ.ಜಿ.ಚಂದ್ರಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts