More

    ಉದ್ಯೋಗಕ್ಕಾಗಿ ಹೋರಾಟ: ತರಕಾರಿ, ಕೋಳಿಗಳೊಂದಿಗೆ ವಿಶಿಷ್ಟವಾಗಿ ಪ್ರತಿಭಟಿಸಿದ ವಿದ್ಯಾರ್ಥಿಗಳು

    ಒಡಿಶಾ: ಒಡಿಶಾ ಕೃಷಿ ತಂತ್ರಜ್ಞಾನ ವಿಶ್ವವಿದ್ಯಾನಿಲಯದ (OUAT), ಆಲ್ ಒಡಿಶಾ ಅಗ್ರೋ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಂಘ (AOAPSA) ಬುಧವಾರ ಭುವನೇಶ್ವರದ  PMG ಸ್ಕ್ವೇರ್ ಪ್ರದೇಶದಲ್ಲಿ ಉದ್ಯೋಗಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

    ಇದನ್ನೂ ಓದಿ: ಒಂದು ಸೀರೆ ತಯಾರಿಸಲು ಬೇಕಾಯ್ತು 2 ವರ್ಷ; ಇದರ ಬೆಲೆ ಬರೋಬ್ಬರಿ 21.9 ಲಕ್ಷ ರೂ.!

    ಒಯುಎಟಿಯಿಂದ ಡಿಪ್ಲೊಮಾ ಮುಗಿಸಿರುವ ವಿದ್ಯಾರ್ಥಿಗಳು ತರಕಾರಿ ಮತ್ತು ಕೋಳಿಗಳೊಂದಿಗೆ ಪ್ರತಿಭಟನೆ ನಡೆಸಿದರು. ಒಡಿಶಾ ಸರ್ಕಾರ ತಮ್ಮನ್ನು ನಿರ್ಲಕ್ಷಿಸಿದೆ ಮತ್ತು ಅವರಿಗೆ ಉದ್ಯೋಗ ನೀಡಲು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.

    ಇದನ್ನೂ ಓದಿ:  ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…

    ಕೃಷಿ, ತೋಟಗಾರಿಕೆ, ಪಶು ವಿಜ್ಞಾನ ಮತ್ತು ಮೀನುಗಾರಿಕೆಯಲ್ಲಿ ಡಿಪ್ಲೊಮಾ ಕೋರ್ಸ್ ಮುಗಿದಿದ್ದರೂ ನಮಗೆ ಯಾವುದೇ ಕೆಲಸವಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಮನುಷ್ಯರಷ್ಟೇ ಅಲ್ಲ, ಪಕ್ಷಿಗಳಿಂದಲೂ ತಮ್ಮ ಸಂಗಾತಿಗೆ ವಿಚ್ಛೇದನ: ಆಘಾತಕಾರಿ ಅಂಶ ಪತ್ತೆ

    ಆಕ್ರೋಶಗೊಂಡ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಉದ್ಯೋಗಾವಕಾಶಗಳಿಗೆ ಮೆರಿಟ್ ಆಧಾರಿತ ಆಯ್ಕೆಗೆ ಒತ್ತಾಯಿಸಿದರು.

    ಇದನ್ನೂ ಓದಿ: ಜಮೀನು ವಿವಾದ; ತೆಂಗಿನ ತೋಟದಲ್ಲಿ ಮಹಿಳೆಯ ಬಟ್ಟೆ ಹರಿದು ಥಳಿತ

    ಪ್ರತಿಭಟನಾನಿರತ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಅಶ್ವಿನಿ, “ಪ್ರತಿ ವರ್ಷ ಸುಮಾರು 200 ವಿದ್ಯಾರ್ಥಿಗಳು ಸಂಸ್ಥೆಯಿಂದ ಉತ್ತೀರ್ಣರಾಗುತ್ತಾರೆ. ಸರ್ಕಾರ ಇದೀಗ ಹೊಸಬರನ್ನು ಆಯ್ಕೆ ಮಾಡಿ 2 ವರ್ಷಗಳ ತರಬೇತಿ ನೀಡುತ್ತಿದೆ.ನಮ್ಮನ್ನು ಬದಿಗೊತ್ತಲಾಗಿದೆ. ನಾವು ನಮಗೆ ವಿವಿಧ ವಿಭಾಗಗಳಲ್ಲಿ ಮೀಸಲಾತಿಯನ್ನು ಕೋರುತ್ತೇವೆ” ಎಂದಿದ್ದಾರೆ.

    Chandrayaan 3 launch; ಯಶಸ್ವಿ ಆಗಲೆಂದು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts