More

    2023ರ ಆಸ್ಕರ್​ ನಾಮಿನೇಷನ್ ಪಟ್ಟಿ ಪ್ರಕಟ; ಆರ್​ಆರ್​ಆರ್​ ಸೇರಿ ಆಸ್ಕರ್​ಗೆ ಮೂರು ಭಾರತೀಯ ಸಿನಿಮಾಗಳು

    ನವದೆಹಲಿ: ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿರುವ ಆಸ್ಕರ್​ಗೆ 2023ರ ನಾಮಿನೇಷನ್ ಪಟ್ಟಿ ಬಿಡುಗಡೆ ಆಗಿದ್ದು, ‘ಆರ್​ಆರ್​ಆರ್’​ ಆರ್ಭಟ ಇಲ್ಲೂ ಮುಂದುವರಿದಿದೆ. ಅಂದರೆ, ‘ಆರ್​ಆರ್​ಆರ್’​ ಸಿನಿಮಾ ಕೂಡ ಸೇರಿದಂತೆ ಮೂರು ಭಾರತೀಯ ಸಿನಿಮಾಗಳು 2023ರ ಆಸ್ಕರ್​ ನಾಮಿನೇಷನ್​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

    ಅಮೆರಿಕದ ಕ್ಯಾಲಿಫೋರ್ನಿಯಾ ಬೇವರ್ಲಿ ಹಿಲ್ಸ್‌ನ ಸ್ಯಾಮುಯೆಲ್‌ ಗೋಲ್ಡ್‌ವಿನ್‌ ಚಿತ್ರಮಂದಿರದಲ್ಲಿ ಇಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಈ ನಾಮಿನೇಷನ್‌ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಭಾರತೀಯ ಸಿನಿಮಾಗಳಾದ ‘ಆರ್​ಆರ್​ಆರ್’​, ‘ಆಲ್​ ದ್ಯಾಟ್ ಬ್ರೀಥ್ಸ್​’ ಮತ್ತು ‘ದ ಎಲಿಫೆಂಟ್ ವಿಷ್ಪರ್ಸ್’​ ಸ್ಥಾನ ಪಡೆದಿದ್ದು, ಭಾರತಕ್ಕೆ ಆಸ್ಕರ್ ಪ್ರಶಸ್ತಿಯ ನಿರೀಕ್ಷೆ ಹುಟ್ಟಿಸಿವೆ.

    ‘ಆರ್​ಆರ್​ಆರ್’​ನ ‘ನಾಟು ನಾಟು’ ಗೀತೆಗೆ ಈ ಸಲದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿದ ಬೆನ್ನಿಗೇ ಅದು ಬೆಸ್ಟ್​ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್​ಗೆ ನಾಮಿನೇಟ್ ಆಗಿದೆ. ಹಾಗೆಯೇ ಬೆಸ್ಟ್ ಡಾಕ್ಯುಮೆಂಟರಿ ಫೀಚರ್ ಫಿಲ್ಮ್​ ಕೆಟಗರಿಯಲ್ಲಿ ‘ಆಲ್​ ದ್ಯಾಟ್ ಬ್ರೀಥ್ಸ್’ ಮತ್ತು ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್​ ಫಿಲ್ಮ್ ವಿಭಾಗದಲ್ಲಿ ‘ದ ಎಲಿಫೆಂಟ್ ವಿಷ್ಪರ್ಸ್​’ ನಾಮಿನೇಟ್ ಆಗಿದೆ. ಆಸ್ಕರ್​ಗೆ ನಾಮಿನೇಟ್ ಆಗಬಹುದಾದ ಅಂತಿಮ 300 ಸಿನಿಮಾಗಳ ಪಟ್ಟಿಯಲ್ಲಿದ್ದ ‘ಕಾಂತಾರ’, ‘ವಿಕ್ರಾಂತ್ ರೋಣ’ ನಾಮಿನೇಷನ್​ಗೆ ತಲುಪದ್ದರಿಂದ ಕನ್ನಡದ ಯಾವ ಚಿತ್ರವೂ ನಾಮಿನೇಷನ್​ನಲ್ಲಿ ಇಲ್ಲದಂತಾಗಿದೆ.

    8 ತಿಂಗಳ ಗರ್ಭಿಣಿಗೆ 1 ವಾರವೂ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದ ಗೂಗಲ್!

    ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್​ ಮಾಡಿದ್ಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts