More

    ಮನೆಯಂಗಳದಲ್ಲೇ ಸಾವಯವ ಗೊಬ್ಬರ ; ತಿಪಟೂರಿನ ಸರ್ಕಾರಿ ಕಚೇರಿಗಳಲ್ಲೂ ಪೈಪ್ ಕಾಂಪೋಸ್ಟಿಂಗ್

    ತಿಪಟೂರು : ಅತ್ಯಂತ ಕಡಿಮೆ ಖರ್ಚಿನಲ್ಲಿ ಮನೆಯ ಅಂಗಳದಲ್ಲೇ ಪೈಪ್ ಕಾಂಪೋಸ್ಟಿಂಗ್ ಮೂಲಕ ಸಾವಯವ ಗೊಬ್ಬರ ತಯಾರಿಸಿ ಕೈ ತೋಟಗಳಿಗೆ ಬಳಸುವ ಸರಳ ವಿಧಾನವನ್ನು ನಗರಸಭೆ ಅಳವಡಿಸಿಕೊಂಡಿದ್ದು, ಕೆಲ ನಗರಸಭಾ ಸದಸ್ಯರ ಮನೆ, ಸರ್ಕಾರಿ ಕಚೇರಿಗಳಲ್ಲೂ ಇದರ ಪ್ರಯೋಗ ನಡೆದಿದೆ.

    ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ಸುವಾರು 22 ರಿಂದ 26 ಟನ್ ತ್ಯಾಜ್ಯದ ಪೈಕಿ 8 ಟನ್ ಹಸಿ ಕಸ ಸಂಗ್ರಹವಾಗುತ್ತಿದೆ. ಇದೆಲ್ಲವನ್ನೂ ನಗರ ಸಮೀಪದ ಮಂಜುನಾಥ ನಗರದ ಬಳಿಯ ನೆಲ ಭರ್ತಿ ಕೇಂದ್ರಕ್ಕೆ ಸಾಗಿಸಲಾಗುತ್ತಿದ್ದು, ಅಲ್ಲಿ ಹಸಿ ಮತ್ತು ಒಣ ಕಸ ಬೇರ್ಪಡಿಸಿ, ಹಸಿ ಕಸವನ್ನು ಎರೆಹುಳು ಗೊಬ್ಬರವನ್ನಾಗಿ ವಾರ್ಪಡಿಸಿ ರಿಯಾಯಿತಿ ದರದಲ್ಲಿ ವಾರಾಟ ವಾಡುವ ಪ್ರಕ್ರಿಯೆ ನಗರಸಭೆಯಲ್ಲಿ ಜಾರಿಯಲ್ಲಿದೆ.

    ಆಯುಕ್ತ ಉಮಕಾಂತ್ ಪ್ರಾರಂಭಿಕವಾಗಿ ಕಚೇರಿ ಹಾಗೂ ಸಿಬ್ಬಂದಿ ಮನೆ ಅಂಗಳದಲ್ಲಿ ಪೈಪ್ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಮುಂದಾಗಿ, ಇದರಲ್ಲಿ ಯಶ ಕಂಡ ನಂತರ ನಗರಸಭಾ ಸದಸ್ಯರಿಗೆ ಇದರ ಪರಿಚಯ ವಾಡಿಕೊಟ್ಟಿದ್ದಾರೆ. ಮನೆ ಅಂಗಳದಲ್ಲಿ ಹೂವು ಬೆಳೆಯಲು ಸಾಕಷ್ಟು ಸ್ಥಳಾವಕಾಶ ಹೊಂದಿರುವವರು ಪ್ರಯೋಜನ ಪಡೆಯಬಹುದಾಗಿದೆ.

    ಬಿದಿರಿನ ತೊಟ್ಟಿ ಬಳಕೆ: ಪೈಪ್ ಕಾಂಪೋಸ್ಟ್ ಜತೆಗೆ ಸಾವಯವ ಗೊಬ್ಬರ ತಯಾರಿಕೆಗೆ ಬಿದಿರಿನ ತೊಟ್ಟಿಗಳನ್ನು ಬಳಸಿಕೊಳ್ಳುತ್ತಿದ್ದು, ಕಚೇರಿಗಳು ಮತ್ತು ಉದ್ಯಾನಗಳಲ್ಲಿರುವ ಮರ, ಗಿಡಗಳಿಂದ ನಿತ್ಯ ಉತ್ಪತ್ತಿಯಾಗುವ ಎಲೆಗಳನ್ನು ಐದು ಅಡಿ ಸುತ್ತಳತೆಯ ಬಿದಿರಿನ ತೊಟ್ಟಿಗಳಲ್ಲಿ ಭರ್ತಿ ವಾಡಿ, ನಂತರ ದೊರೆಯುವ ಸಾವಯವ ಗೊಬ್ಬರವನ್ನು ಬಳಸಿಕೊಳ್ಳುವುದು ಇದರ ಉದ್ದೇಶ. ನಗರಸಭೆ ಕಚೇರಿ ಸೇರಿ ಒಟ್ಟು ಆರು ಕಡೆ 4 ರಿಂದ 5 ಸಾವಿರ ರೂಪಾಯಿ ವೆಚ್ಚದಲ್ಲಿ ಬಿದಿರಿನ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಆಯುಕ್ತರ ಪರಿಸರ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    ಪೈಪ್ ಕಾಂಪೋಸ್ಟ್ ತಯಾರಿಕಾ ವಿಧಾನ : ಪೈಪ್ ಕಾಂಪೋಸ್ಟ್ ಗೊಬ್ಬರ ತಯಾರಿಸಲು 6 ಇಂಚು ಅಗಲ, 5 ಅಡಿ ಉದ್ದದ 2 ಪಿವಿಸಿ ಪೈಪ್ ಅವಶ್ಯಕತೆ ಇದೆ. ಪೈಪುಗಳಿಗೆ ಅಲ್ಲಲ್ಲಿ ರಂಧ್ರ ಮಾಡಿ 1ರಿಂದ 2 ಅಡಿ ಆಳಕ್ಕೆ ಹೂಳಬೇಕು. ಮೊದಲನೇ ಪೈಪ್‌ನಲ್ಲಿ ಮನೆಯಲ್ಲಿ ನಿತ್ಯ ಸಂಗ್ರಹಣೆ ಆಗುವ ಹಸಿ ಕಸವನ್ನು 50 ದಿನಗಳವರೆಗೂ ಹಾಕಿ ನಂತರ ಇದರ ಮೇಲೆ ಗಂಜಲ ಹಾಗೂ ಸಗಣಿ ಹಾಕಿ ಮುಚ್ಚಬೇಕು. ನಂತರ ಎರಡನೇ ಪಿವಿಸಿ ಪೈಪ್‌ಗೆ ಹಸಿ ಕಸ ಹಾಕಲು ಪ್ರಾರಂಭಿಸಬೇಕು. ಇದು ಭರ್ತಿ ಆಗುವಷ್ಟರಲ್ಲಿ ಮೊದಲನೇ ಟಕದಲ್ಲಿ ಸಾವಯವ ಗೊಬ್ಬರ ಸಿದ್ಧವಾಗಿರುತ್ತದೆ. ಪೈಪ್‌ಗೆ ಕಸ ಹಾಕುವ ಪ್ರಕ್ರಿಯೆ ಪುನರಾವರ್ತನೆ ಆಗುತ್ತಿರಬೇಕು.

    ಕೆಲ ನಗರಸಭಾ ಸದಸ್ಯರೂ ಈ ಪ್ರಯೋಗದಲ್ಲಿ ತೊಡಗಿ ಯಶ ಕಂಡಿದ್ದಾರೆ. ಹಸಿ ಕಸವನ್ನು ಮನೆಯಂಗಳದಲ್ಲೇ ಬೇರ್ಪಡಿಸಿ ಸಾವಯವ ಗೊಬ್ಬರ ತಯಾರಿಸುವುದರಿಂದ ಗಿಡಗಳು ಉತ್ತಮವಾಗಿ ಬೆಳೆಯುವ ಜತೆಗೆ ಹಸಿ ಕಸ ಸಾಗಿಸಲು ನಗರಸಭೆ ಸಿಬ್ಬಂದಿಯನ್ನು ಅವಲಂಬಿಸುವುದು ತಪ್ಪುತ್ತದೆ.
    ಉವಾಕಾಂತ್, ನಗರಾಯುಕ್ತರು, ತಿಪಟೂರು.

    ಪೈಪ್ ಕಾಂಪೋಸ್ಟ್ ತಯಾರಿಸುವ ಮುಂಚೆ ನೆಲಕ್ಕೆ ಹಸುವಿನ ಗೊಬ್ಬರ, ಗಂಜಲದ ಜತೆಗೆ ಸ್ವಲ್ಪ ಮಣ್ಣನ್ನು ಹಾಕಿದರೆ ಹಸಿ ಕಸ ಬೇಗ ಕೊಳೆತು ಗುಣಮಟ್ಟದ ಸಾವಯವ ಗೊಬ್ಬರ ಉತ್ಪತ್ತಿಯಾಗುತ್ತದೆ. ಗಿಡ ಬೆಳೆಸಲು ಇದೊಂದು ಅತ್ಯುತ್ತಮ ವಿಧಾನ. ನಗರಸಭೆ ಪೌರಕಾರ್ಮಿಕರಿಗೆ ಹಸಿ ಕಸ ಸಾಗಿಸುವ ಕಷ್ಟ ತುಸು ಕಡಿಮೆಯಾಗಲಿದೆ.
    ಪಿ.ಜೆ.ರಾಮಮೋಹನ್, ಅಧ್ಯಕ್ಷರು, ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts