More

    ಅನುದಾನ ಕೊಡದಿದ್ದರೆ ಸಿಎಂ ಮನೆ ಮುಂದೆ ಉಪವಾಸ ಸತ್ಯಾಗ್ರಹ …

    ಕರೊನಾ ಮತ್ತು ಲಾಕ್​ಡೌನ್​ನಿಂದ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಜಾಗತಿಕ ಚಿತ್ರರಂಗವೇ ಗರಬಡಿದಂತಾಗಿದೆ. ಇಲ್ಲಿನ ಕಲಾವಿದರು ಮತ್ತು ತಂತ್ರಜ್ಱರು ಕೆಲಸ ಮತ್ತು ಸಂಬಳ ಇಲ್ಲದೆ ಸಾಕಷ್ಟು ಸಂಕಟ ಪಡುತ್ತಿದ್ದಾರೆ. ಚಿತ್ರರಂಗವನ್ನೇ ನಂಬಿಕೊಂಡಿರುವ ವಾದ್ಯಗೋಷ್ಠಿಯವರು ಸಹ ಕಳೆದ ಮೂರು ತಿಂಗಳುಗಳಲ್ಲಿ ಸಂಪಾದನೆಯೂ ಇಲ್ಲದೆ, ಈ ಕಡೆ ಸರ್ಕಾರದ ಸಹಾಯವೂ ಇಲ್ಲದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

    ಇದನ್ನೂ ಓದಿ: 71 ವರ್ಷದ ನಿರ್ಮಾಪಕನೊಂದಿಗೆ ರಿಯಾಗಿತ್ತು ಅಫೇರ್​!; ಬರಹಗಾರ್ತಿ ಶೆಫಾಲಿ ಹೊಸ ಬಾಂಬ್​!

    ಗಣಪತಿ ಹಬ್ಬ ಬಂತೆಂದರೆ, ಆರ್ಕೆಸ್ಟ್ರಾದವರಿಗೆ ಸುಗ್ಗಿ. ಏಕೆಂದರೆ, ರಸ್ತೆರಸ್ತೆಯಲ್ಲಿ ಗಣಪತಿ ಕೂರಿಸುವುದರಿಂದ, ಆರ್ಕೆಸ್ಟ್ರಾದವರಿಗೆ ಪ್ರತಿ ರಾತ್ರಿ ಒಂದಲ್ಲಾ ಒಂದು ಕಡೆ ಕಾರ್ಯಕ್ರಮ ಇದ್ದೇ ಇರುತ್ತದೆ. ಇದು ನಾಲ್ಕು ತಿಂಗಳುಗಳ ಕಾಲ ಮುಂದುವರೆಯುತ್ತದೆ. ಆದರೆ, ಈ ಬಾರಿ ಕರೊನಾದಿಂದ ಸಾರ್ವಜನಿಕವಾಗಿ ಗಣಪತಿ ಕೂರಿಸುವಂತಿಲ್ಲ.

    ಇದಕ್ಕೂ ಮುನ್ನ ರಾಮನವಮಿ ಸಂದರ್ಭದಲ್ಲೂ ರಸ್ತೆಗಳಲ್ಲಿ ಆರ್ಕೆಸ್ಟ್ರಾಗಳನ್ನು ಆಯೋಜಿಸಲಾಗುತ್ತದೆ. ಈ ಬಾರಿ ಕರೊನಾದಿಂದ ಆ ಅವಕಾಶವೂ ತಪ್ಪಿ ಹೋಯಿತು. ಇನ್ನು ಮುಂದಿನ ಮೂರು ತಿಂಗಳುಗಳ ಕಾಲ ಕಾರ್ಯಕ್ರಮ ಆಯೋಜಿಸುವುದಕ್ಕೆ ಅನುಮತಿ ಸಿಗುವುದು ಕಷ್ಟವೇ. ಹೀಗಿರುವಾಗ, ವಾದ್ಯಗೋಷ್ಠಿ ಕಲಾವಿದರಿಗೆ ಸರ್ಕಾರ ಸಹಾಯ ಮಾಡಬೇಕು ಎಂದು ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘ ಆಗ್ರಹಿಸಿದೆ.

    ಈ ಕುರಿತು ಸಂಘವು ಪತ್ರಿಕಾಗೋಷ್ಠಿ ನಡೆಸಿ, ವಾದ್ಯಗೋಷ್ಠಿ ಕಲಾವಿದರಿಗೆ ಸರ್ಕಾರ ಸಹಾಯ ಮಾಡಬೇಕು ಎಂದು ಮನವಿ ಮಾಡಿದೆ. ಈ ಸಂದರ್ಭದಲ್ಲಿ, ಸೌಂಡ್​ ಆಫ್​ ಮ್ಯೂಸಿಕ್​ನ ಗುರುರಾಜ್​, ಮದನ್​ ಪಟೇಲ್​, ಆರ್​. ಶಂಕರ್​ ಮುಂತಾದವರು ಹಾಜರಿದ್ದರು.

    ಇದನ್ನೂ ಓದಿ: ವೈದ್ಯರಿಗೆ ಸಂಗೀತ ನಮನ ಸಲ್ಲಿಸಿದ ಸ್ಟೀಫನ್​ ಪ್ರಯೋಗ್​

    ಈಗಾಗಲೇ ಸಂಘದ ಪರವಾಗಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ, ಸಚಿವ ಸಿ.ಟಿ. ರವಿ, ಸಂಸದ ತೇಜಸ್ವಿ ಸೂರ್ಯ ಮುಂತಾದವರಿಗೆ ಮನವಿ ಪತ್ರವನ್ನು ಕೊಡಲಾಗಿದೆ. ಅಷ್ಟೇ ಅಲ್ಲ, ಆಗಸ್ಟ್​ 11ರ ಮಂಗಳವಾರದಂದು, ಎಲ್ಲಾ ಜಿಲ್ಲೆಗಳಲ್ಲಿ ಮತ್ತೊಮ್ಮೆ ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತದಂತೆ. ಈ ಮನವಿ ಸರ್ಕಾರ ಸ್ಪಂದಿಸದೇ ಇದ್ದರೆ, ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ವಾದ್ಯಗೋಷ್ಠಿ ಕಲಾವಿದರು ಮುಖ್ಯಮಂತ್ರಿಗಳ ನಿವಾಸದ ಎದುರು ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.

    ಮತ್ತೆ ಜತೆಯಾಗಿ ನಟಿಸ್ತಾರಂತೆ ಶಾರೂಖ್​, ದೀಪಿಕಾ … ಯಾವ ಚಿತ್ರ? ಏನು ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts