More

    ವೈದ್ಯರಿಗೆ ಸಂಗೀತ ನಮನ ಸಲ್ಲಿಸಿದ ಸ್ಟೀಫನ್​ ಪ್ರಯೋಗ್​

    ಲಾಕ್​ಡೌನ್​ ಸಂದರ್ಭದಲ್ಲಿ ಕರೊನಾ ವಾರಿಯರ್ಸ್​ಗೆ ನಮನ ಸಲ್ಲಿಸಿ, ಅದೆಷ್ಟೋ ಜನ ಹಾಡು ಮತ್ತು ವಿಡಿಯೋಗಳನ್ನು ಮಾಡಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ, ಸ್ಟೀಫನ್​ ಪ್ರಯೋಗ್​ ಅವರ ‘ವೈದ್ಯನಾರಾಯಣ’.

    ನಾಗತಿಹಳ್ಳಿ ಚಂದ್ರಶೇಖರ್​ ನಿರ್ದೇಶನದ ‘ಪ್ಯಾರಿಸ್​ ಪ್ರಣಯ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಬಂದ ಸ್ಟೀಫನ್​, ಆ ನಂತರ ‘ಸಂತೋಷ’ ಸೇರಿದಂತೆ ಇನ್ನೂ ಕೆಲವು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗ ಲಾಕ್​ಡೌನ್​ ಸಂದರ್ಭದಲ್ಲಿ ವೈದ್ಯರು ಸಲ್ಲಿಸಿದ ಸೇವೆಗೆ ಧನ್ಯವಾದಗಳನ್ನು ತಿಳಿಸುವ ನಿಟ್ಟಿನಲ್ಲಿ, ಅವರು ‘ವೈದ್ಯನಾರಾಯಣ’ ಎಂಬ ಹಾಡನ್ನು ಮಾಡಿದ್ದಾರೆ.

    ಇದನ್ನೂ ಓದಿ: VIDEO: ಸುಶಾಂತ್​ ಸಿಂಗ್ ಕ್ಯಾಮರಾ ಎದುರಿಸಿದ ಮೊದಲ ದೃಶ್ಯ ವೈರಲ್!​

    ಈ ಹಾಡು ರೂಪುಗೊಳ್ಳುವುದಕ್ಕೆ ಕಾರಣವೇನು? ವೈದ್ಯರು ತೋರಿಸಿದ ಕಾಳಜಿ ಮತ್ತು ಅವರ ಸೇವೆ ಎನ್ನುತ್ತಾರೆ ಸ್ಟೀಫನ್​ ಪ್ರಯೋಗ್​. ‘ಇಂತಹ ಸಂದರ್ಭದಲ್ಲಿ ವೈದ್ಯರು ಇಲ್ಲದಿದ್ದರೆ ಏನಾಗುತಿತ್ತು ಎಂಬುದನ್ನೂ ಊಹಿಸುವುದೂ ಸಾಧ್ಯವಿಲ್ಲ. ಅವರು ತೋರಿದ ಕಾಳಜಿ, ಪ್ರೀತಿ ಸರಿಗಟ್ಟುವುದಕ್ಕೆ ಸಾಧ್ಯವಿಲ್ಲ. ಅವರ ಮೇಲೆ ಬಹಳ ಗುರುತರವಾದ ಜವಾಬ್ದಾರಿ ಇತ್ತು. ಒಂದು ಕಡೆ, ಕೋವಿಡ್​ಗೆ ವ್ಯಾಕ್ಸಿನ್​ ಇಲ್ಲ. ಇನ್ನೊಂದು ಕಡೆ ಅದರಿಂದ ಜೀವಕ್ಕೇ ಅಪಾಯ. ಆದರೂ ದೊಡ್ಡ ರಿಸ್ಕ್​ ತೆಗೆದುಕೊಂಡು ಮನೆಯವರನ್ನೆಲ್ಲಾ ದೂರು ಇಟ್ಟು, ಜನರ ಸೇವೆ ಮಾಡಿದ್ದಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ’ ಎನ್ನುತ್ತಾರೆ ಅವರು.

    ‘ಬರೀ ವೈದ್ಯರು ಮತ್ತು ನರ್ಸ್​ಗಳಷ್ಟೇ ಅಲ್ಲ. ವಾರ್ಡ್​ ಬಾಯ್​ಗಳು, ಲ್ಯಾಬ್​ಟೆಕ್ನೀಶಿಯನ್​ಗಳು, ಪೊಲೀಸ್​ … ಇವರೆಲ್ಲಾ ಒಟ್ಟಿಗೆ ಕೆಲಸ ಮಾಡಿ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿದರು. ಆದರೆ, ಎಷ್ಟು ಮಾಡಿದರೂ ಅವರು ಲೈಮ್​ಲೈಟ್​ಗೆ ಬರುವುದಿಲ್ಲ. ಆದರೂ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುವುದಕ್ಕೆ ಮುಂದಾದ ಕರೊನಾ ವಾರಿಯರ್ಸ್​​ಗೆ ಈ ಹಾಡಿನ ಮೂಲಕ ನಮ್ಮದೊಂದು ಸಲಾಂ’ ಎನ್ನುತ್ತಾರೆ ಅವರು.

    ಇದನ್ನೂ ಓದಿ: ‘ಕೋಟಿಗೊಬ್ಬ 3’ ಚಿತ್ರದ ಹೊಸ ಪೋಸ್ಟರ್​ ರಿಲೀಸ್​

    ಈ ಹಾಡಿನ ವೈಶಿಷ್ಟ್ಯವೆಂದರೆ, ಇಲ್ಲಿ ಸ್ಟೀಫನ್​ ಒಬ್ಬರೇ ನಮನ ಸಲ್ಲಿಸುತ್ತಿಲ್ಲ. ಸಂಗೀತಗಾರರೆಲ್ಲಾ ಒಟ್ಟಾಗಿ, ಕರೊನಾ ವಾರಿಯರ್ಸ್​ಗೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ. ‘ಇದಕ್ಕೂ ಮುನ್ನ ಸಿನಿಮಾ ಕಲಾವಿದರು ಹಾಡಿನ ಮೂಲಕ ನಮನ ಸಲ್ಲಿಸಿದ್ದಾರೆ. ಆದರೆ, ಈ ವಿಡಿಯೋದಲ್ಲಿ ಸಂಗೀತ ಕ್ಷೇತ್ರದವರು ಸೇರಿ ಗೌರವ ಸಲ್ಲಿಸಿರುವುದು ವಿಶೇಷ. ಗಾಯಕರು, ಸಂಗೀತಗಾರರು ಎಲ್ಲಾ ಒಟ್ಟಾಗಿ ಈ ವಿಡಿಯೋ ಮೂಲಕ ಥ್ಯಾಂಕ್ಸ್​ ಹೇಳಿದ್ದೇವೆ’ ಎನ್ನುತ್ತಾರೆ ಅವರು.

    ಈ ಹಾಡಿಗೆ ಅವರು ಸಂಗೀತ ಸಂಯೋಜಿಸಿದರೆ, ವಿ. ಮನೋಹರ್​ ಸಾಹಿತ್ಯ ಬರೆದಿದ್ದಾರೆ. ಇನ್ನು ರಾಜೇಶ್​ ಕೃಷ್ಣನ್​ , ಅನುರಾಧಾ ಭಟ್​, ಚೈತ್ರಾ, ಮಾನಸ ಹೊಳ್ಳ, ಶ್ರೀರಕ್ಷಾ, ಕುಶಾಲ, ದಾಕ್ಷಾಯಿಣಿ, ರೆಮೋ ಮುಂತಾದವರು ಧ್ವನಿಯಾಗಿದ್ದಾರೆ. ಇನ್ನು ಪಂಡಿತ್​ ಪರಮೇಶ್ವರ ಹೆಗಡೆ, ಡಾ. ಜಯಶ್ರೀ ಅರವಿಂದ್​, ಹೇಮಂತ್​, ಅನುರಾಧಾ ಭಟ್​, ವಾಣಿ ಹರಿಕೃಷ್ಣ, ಪ್ರವೀಣ್​ ಡಿ ರಾವ್​, ನಾಗಚಂದ್ರಿಕಾ ಭಟ್​, ಚೈತ್ರಾ ಮುಂತಾದವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

    ಬಾಲಿವುಡ್​ ಕಾಮಕಾಂಡದಲ್ಲಿ ಘಟಾನುಘಟಿಗಳು!; ಕೆಜಿಎಫ್​ ನಟಿ ಮೌನಿ ರಾಯ್​, ಊರ್ವಶಿ ರೌಟೇಲಾ ಭಾಗಿ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts