More

    ದೆಹಲಿ ಗಲಭೆಗೆ ಕಲಾಪ ಬಲಿ; ಮೋದಿ, ಷಾ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ-ವಿರೋಧ ಚಳವಳಿ ವೇಳೆ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಸದಸ್ಯರು ಒಕ್ಕೊರಲಿನಿಂದ ಪಟ್ಟು ಹಿಡಿದಿದ್ದರಿಂದ ಕೋಲಾಹಲ ಉಂಟಾಗಿ ಸಂಸತ್ತಿನ ಉಭಯ ಸದನಗಳನ್ನು ಮಂಗಳವಾರದವರೆಗೆ ಮುಂದೂಡಲಾಯಿತು.

    ಬಜೆಟ್ ಅಧಿವೇಶನದ ಮುಂದುವರಿದ ಭಾಗ ಸೋಮವಾರ ಆರಂಭವಾಯಿತಾದರೂ ವಿರೋಧ ಪಕ್ಷಗಳ ಸಂಘಟಿತ ಪ್ರತಿಭಟನೆಯಿಂದಾಗಿ ಉಭಯ ಸದನಗಳಲ್ಲಿ ಕಲಾಪ ಸಾಧ್ಯವಾಗಲಿಲ್ಲ. ಲೋಕಸಭೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾದಾಗ ಗದ್ದಲ ಉಂಟಾದ್ದರಿಂದ ಕಲಾಪವನ್ನು ಮಧ್ಯಾಹ್ನ ಎರಡರವರೆಗೆ ಮುಂದೂಡಲಾಗಿತ್ತು. ಎರಡನೇ ಬಾರಿಗೆ ಮತ್ತೆ ಸದನ ಸಮಾವೇಶಗೊಂಡಾಗಲೂ ಬಿಸಿಬಿಸಿ ಮಾತಿನ ಚಕಮಕಿ ನಡೆಯಿತಲ್ಲದೆ ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಒಬ್ಬರನ್ನೊಬ್ಬರು ತಳ್ಳಾಡಲು ಆರಂಭಿಸಿದರು. ಗದ್ದಲ ಹೆಚ್ಚಾದ ಕಾರಣ ಸ್ಪೀಕರ್ ಓಂ ಬಿರ್ಲಾ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

    ಈ ಮಧ್ಯೆ, ಬಿಜೆಪಿ ಸಂಸದ ಜಸ್ಕೂರ್ ಮೀನಾ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಸಂಸದೆ ರಮ್ಯಾ ಹರಿದಾಸ್ ಸ್ಪೀಕರ್ ಓಂ ಬಿರ್ಲಾರಿಗೆ ದೂರು ಸಲ್ಲಿಸಿದ್ದಾರೆ.

    ಕಪ್ಪು ಬ್ಯಾನರ್: ಅಮಿತ್ ಷಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುವ ಕಪು್ಪ ಬ್ಯಾನರ್​ಗಳನ್ನು ಪ್ರತಿಪಕ್ಷ ಸದಸ್ಯರು ಪ್ರದರ್ಶಿಸಿದ್ದು ಗದ್ದಲಕ್ಕೆ ಮೂಲವಾಯಿತು.

    ಕಾಂಗ್ರೆಸ್​ನ ಕೆಲವು ಸಂಸದರು ಬಿಜೆಪಿಯ ಮಹಿಳಾ ಎಂಪಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಳೆದ 2-3 ಅಧಿವೇಶನಗಳಿಂದ ಕಾಂಗ್ರೆಸ್​ನ ‘ಗೂಂಡಾ’ ಶಕ್ತಿಗಳು ಸಂಸತ್ತಿನ ಕಲಾಪಗಳನ್ನು ಅಸ್ತವ್ಯಸ್ತಗೊಳಿಸುತ್ತಿವೆ.

    | ಸ್ಮೃತಿ ಇರಾನಿ ಕೇಂದ್ರ ಜವಳಿ ಖಾತೆ ಸಚಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts