More

    ಸಿಎಎ ಮುಗಿದಿಲ್ಲ ಕರೊನಾ ಅಂತ್ಯವಾದ ಬಳಿಕ ಅನುಷ್ಠಾನಕ್ಕೆ ತರ್ತೀವಿ: ಅಮಿತ್​ ಷಾ

    ಕೋಲ್ಕತ: ಕರೊನಾ ಸಾಂಕ್ರಮಿಕ ಅಂತ್ಯವಾದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಹೇಳಿದರು.

    ಮೂರು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಅಮಿತ್​ ಷಾ, ಸಿಎಎ ಅನುಷ್ಠಾನಕ್ಕೆ ಬರುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್​ (ಟಿಎಂಸಿ) ವದಂತಿಯನ್ನು ಹರಡುತ್ತಿದೆ. ಆದರೆ, ಕರೊನಾ ಅಂತ್ಯವಾದ ಬೆನ್ನಲ್ಲೇ ಸಿಎಎ ಅನುಷ್ಠಾನಕ್ಕೆ ಬರಲಿದೆ ಎಂದು ನಾನು ಹೇಳುತ್ತಿದ್ದೇನೆ ಎಂದರು.

    ಸಿಎಎ ಎಂಬುದು ವಾಸ್ತವವಾಗಿತ್ತು, ಈಗಲು ವಾಸ್ತವವಾಗಿದೆ ಮತ್ತು ಮುಂದೆಯು ವಾಸ್ತವವಾಗಿಯೇ ಉಳಿಯಲಿದೆ. ಯಾವುದೂ ಬದಲಾವಣೆ ಆಗುವುದಿಲ್ಲ ಎಂದು ಅಮಿತ್​ ಷಾ ಹೇಳಿದರು.

    ಸಿಎಎ 2019ರ ಡಿಸೆಂಬರ್​ನಲ್ಲಿ ಅಂಗೀಕೃತವಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿನ ಮುಸ್ಲಿಮೇತರ ಅಲ್ಪಸಂಖ್ಯಾತರು ಅಂದರೆ, ಹಿಂದು, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ನರು ಭಾರತೀಯ ಪೌರತ್ವವನ್ನು ಪಡೆಯಲು ಈ ಕಾಯ್ದೆ ಅನುಮತಿಸುತ್ತದೆ. ಕಾಯ್ದೆ ಅಡಿಯಲ್ಲಿ, 2014ರ ಡಿಸೆಂಬರ್ 31 ರ ಮೊದಲು ಭಾರತಕ್ಕೆ ಬಂದ ಈ ಸಮುದಾಯಗಳ ಜನರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುವುದಿಲ್ಲ ಆದರೆ, ಭಾರತೀಯ ಪೌರತ್ವವನ್ನು ಅವರಿಗೆ ನೀಡಲಾಗುತ್ತದೆ.

    ಆದರೆ, ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳವೂ ಒಂದಾಗಿದೆ. (ಏಜೆನ್ಸೀಸ್​)

    ಪಿಯು ವಿದ್ಯಾರ್ಥಿನಿಯ ಬದುಕಲ್ಲಿ ಎಂಟ್ರಿ ಕೊಟ್ಟ ನೆರೆಮನೆಯ ಪೊಲೀಸ್​ ಪೇದೆ: ಮುಂದಾಗಿದ್ದು ದುರಂತ ಅಂತ್ಯ

    ಬಾಹ್ಯಾಕಾಶಕ್ಕೆ ಮಾನವನ ಬೆತ್ತಲೆ ಚಿತ್ರ ಕಳುಹಿಸಲಿದೆ NASA: ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರುವುದು ಖಂಡಿತ!

    ಪ್ರಸಿದ್ಧ GIFನ ನಗುವ ಹುಡುಗಿ, ಖ್ಯಾತ ರಿಯಾಲಿಟಿ ಸ್ಟಾರ್ ಕೈಲಿಯಾ ಪೋಸಿ 16ನೇ ವಯಸ್ಸಿಗೆ ಆತ್ಮಹತ್ಯೆ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts