More

    ನೂತನ ಸಂಸತ್ ಭವನ ಉದ್ಘಾಟನೆಗೆ ವಿಪಕ್ಷಗಳಿಂದ ಬಹಿಷ್ಕಾರ: ಕಾರಣ ಹೀಗಿದೆ..

    ದೆಹಲಿ: ಇದೇ ಭಾನುವಾರ ಅಂದರೆ ಮೇ 28ರಂದು ಹೊಸ ಸಂಸತ್​ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಆದರೆ ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭವನ್ನು ದೇಶದ ಹಲವಾರು ಪಕ್ಷಗಳು ಬಾಯ್ಕಾಟ್ ಮಾಡಿವೆ.

    ನೂತನ ಸಂಸತ್​ನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕು ಎಂದು ಕೆಲ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಆದರೆ ಕೇಂದ್ರವು, ಹೊಸ ಸರ್ಕಾರಿ ಕಟ್ಟಡವನ್ನು ಪ್ರಧಾನ ಮಂತ್ರಿಯಿಂದಲೇ ಉದ್ಘಾಟಿಸಲು ಮುಂದಾಗಿರುವುದನ್ನು ವಿರೋಧಿಸಿ ಈ ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಹೇಳಿವೆ.

    ಇದನ್ನೂ ಓದಿ: ಐಪಿಎಸ್​ ಅಧಿಕಾರಿ ಜತೆ ಹಯಾತಿ ಅನುಚಿತ ವರ್ತನೆ ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಸಿಸಿಟಿವಿ ವಿಡಿಯೋ!

    ಈ ಕುರಿತು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಪ್ರತಿಪಕ್ಷಗಳು, ಭಾರತದ ಸಂಸತ್ತು ರಾಷ್ಟ್ರಪತಿ ಸೇರಿದಂತೆ ಎರಡು ಸದನಗಳನ್ನು ಒಳಗೊಂಡಿದೆ. ರಾಷ್ಟ್ರಪತಿ ಭಾರತದ ಮುಖ್ಯಸ್ಥರಾಗಿದ್ದು, ಸಂಸತ್ತಿನ ಅವಿಭಾಜ್ಯ ಅಂಗ. ಸಂಸತ್ತಿನ ಕಾಯಿದೆ ಜಾರಿಗೆ ಬರಲು ಅವರ ಒಪ್ಪಿಗೆ ಅಗತ್ಯವಾಗಿದ್ದು, ಅವರಿಲ್ಲದೇ ಸಂಸತ್ತು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆದರೆ, ಅವರಿಲ್ಲದೇ ನೂತನ ಸಂಸತ್ ಭವನವನ್ನು ಉದ್ಘಾಟಿಸಲು ಪ್ರಧಾನಿ ನಿರ್ಧರಿಸಿದ್ದಾರೆ. ಈ ಅಮಾನವೀಯ ಕೃತ್ಯವು ಅಧ್ಯಕ್ಷರ ಉನ್ನತ ಹುದ್ದೆಯನ್ನು ಅವಮಾನಿಸುವಂತಿದೆ ಎಂದು ಹೇಳಿವೆ.

    ಅಲ್ಲದೇ, ಪ್ರಜಾಪ್ರಭುತ್ವದ ಆತ್ಮವು ಸಂಸತ್ತಿನಿಂದ ಹೊರಹಾಕಲ್ಪಟ್ಟಾಗ, ಹೊಸ ಕಟ್ಟಡದಲ್ಲಿ ನಮಗೆ ಯಾವುದೇ ಮೌಲ್ಯಗಳು ಕಾಣುತ್ತಿಲ್ಲ. ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸುವ ನಮ್ಮ ಸಾಮೂಹಿಕ ನಿರ್ಧಾರವನ್ನು ಪ್ರಕಟಿಸುತ್ತೇವೆ. ನಿರಂಕುಶ ಪ್ರಧಾನ ಮಂತ್ರಿ ಮತ್ತು ಸರ್ಕಾರದ ವಿರುದ್ಧ ನಾವು ಹೋರಾಡುವುದನ್ನು ಮುಂದುವರಿಸುತ್ತೇವೆ ಎಂದಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts