More

    ಗೋವಾದಲ್ಲಿ ತೆರೆದುಕೊಂಡಿತು ಜಗಮಗಿಸುವ ಬಣ್ಣದಲೋಕ; ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

    ಪಣಜಿ: ಭಾರತದ 52ನೆಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾದಲ್ಲಿ ಚಾಲನೆ ಸಿಕ್ಕಿದ್ದು, ಜಗಮಗಿಸುವ ಬಣ್ಣದ ಲೋಕ ಅನಾವರಣಗೊಂಡಿದೆ. ವಿಶೇಷವೆಂದರೆ ಈ ಸಲದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜತೆಗೇ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಕೂಡ ನಡೆಯಲಿದೆ.

    ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಸಂದರ್ಭದಲ್ಲಿ ಮಾತನಾಡುತ್ತ, ಚಲನಚಿತ್ರೋತ್ಸವದ ಮೂಲಕ ಹಲವಾರು ಸಾಮಾಜಿಕ ಹಾಗೂ ಸಾಂಸ್ಕೃತಿಕ ನೈತಿಕತೆ ಅರಿಯಲು ಸಾಧ್ಯ ಎಂದು ಹೇಳಿದ ಅವರು, ಸಿನಿಮಾ ಕ್ಷೇತ್ರದಿಂದ 75 ಯುವ ಸೃಜನಶೀಲ ಪ್ರತಿಭಾವಂತರಿಗೆ ವಿಶೇಷ ಅವಕಾಶ ಕೊಡುವ ಯೋಜನೆ ಕುರಿತು ಪ್ರಸ್ತಾಪಿಸಿದರು.

    ಡ್ರೀಮ್​ ಗರ್ಲ್ ಎಂದೇ ಹೆಸರಾಗಿರುವ ಖ್ಯಾತ ನಟಿ ಹಾಗೂ ಸಂಸದೆ ಕೂಡ ಆಗಿರುವ ಹೇಮಮಾಲಿನಿ ಅವರಿಗೆ ಇಂಡಿಯನ್ ಫಿಲ್ಮ್​ ಪರ್ಸನಾಲಿಟಿ ಆಫ್ ದ ಇಯರ್-2021 ಪ್ರಶಸ್ತಿ ನೀಡಲಾಯಿತು.

    ಇದನ್ನೂ ಓದಿ: ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    ಹಲವಾರು ಮೊದಲುಗಳಿಗೂ ಈ ಸಲದ ಚಿತ್ರೋತ್ಸವ ಸಾಕ್ಷಿಯಾಗಿದೆ. ಮೊದಲ ಬಾರಿಗೆ ಈ ಸಿನಿಮೋತ್ಸವದಲ್ಲಿ ಬ್ರಿಕ್ಸ್ ಪಾಲ್ಗೊಳ್ಳುತ್ತಿದೆ. ಅಂದರೆ ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕ (BRICS) ಸಿನಿಮಾಗಳು ಈ ಸಲದ ಉತ್ಸವದಲ್ಲಿ ಇರಲಿವೆ. ಅಲ್ಲದೆ ಈ ಸಲ ಒಟಿಟಿಗೂ ಅವಕಾಶವಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ತಿಳಿಸಿದ್ದಾರೆ.

    ಕೋವಿಡ್​ ಕರಿಛಾಯೆಯ ನಡುವೆಯೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ತನ್ನ ಹೊಳಲು ಕಳೆದುಕೊಂಡಿಲ್ಲ. ಕಳೆದ ಸಲ 69 ದೇಶಗಳಿಂದ ಸಿನಿಮಾಗಳು ಬಂದಿದ್ದರೆ ಈ ಸಲ 96 ದೇಶಗಳಿಂದ 624 ಸಿನಿಮಾಗಳು ಬಂದಿವೆ. ಅದರಲ್ಲೂ ಭಾರತದ 18 ಭಾಷೆಗಳ 44 ಚಿತ್ರಗಳು ಇಂಡಿಯನ್ ಪನೋರಮಾದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.

    ನಮ್​ ಕಾರು ತೇಲ್ತಿತ್ತು, ಇಂಜಿನ್ನೇ ಆಫ್​ ಆಯ್ತು..; ತಿರುಪತಿಯಲ್ಲಿ ಭಯಂಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದನ್ನು ವಿವರಿಸಿದ ನಟಿ ತಾರಾ

    ಹಳೇ ಮುಗಿಲು, ಹೊಸ ಪೇಟೆ: ಮುಗಿಲ್ ಪೇಟೆ ಸಿನಿಮಾ ವಿಮರ್ಶೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts