More

    ಇಂದು ವಿವಿಧ ಸಂಘಟನೆಗಳಿಂದ ಬಹಿರಂಗ ಸಭೆ

    ಚನ್ನರಾಯಪಟ್ಟಣ: ಸೌಜನ್ಯಾಳ ಹತ್ಯೆ ಹಿಂದೆ ಕಾಣದ ಕೈಗಳಿವೆ. ಆಕೆಯ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. ಈಕೆಯ ಸಾವಿಗೆ ಯಾವ ನ್ಯಾಯಾಲಯದಿಂದಲೂ ನ್ಯಾಯ ದೊರಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನತಾ ನ್ಯಾಯಾಲಯ ಆರಂಭವಾಗಬೇಕು ಎಂಬ ಹೋರಾಟಕ್ಕೆ ಮುನ್ನುಡಿಯಾಗಿ ಶನಿವಾರ ಪಟ್ಟಣದಲ್ಲಿ ಬಹಿರಂಗ ಸಭೆ ನಡೆಸುತ್ತಿರುವುದಾಗಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಿಳಿಸಿದರು.

    ರೈತಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ ಮಾತನಾಡಿ, ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸಿದ ಸಿಐಡಿ ಬಂಧಿಸಿದ್ದ ಅಪರಾಧಿಯನ್ನು ನ್ಯಾಯಾಲಯ ನಿರಪರಾಧಿ ಎಂದು ಘೋಷಿಸಿದೆ. ಹಾಗಾಗಿ, ಮರು ತನಿಖೆಗೆ ಆಗ್ರಹಿಸಿ ಹಲವು ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ಆಕೆಯ ಕುಟುಂಬಸ್ಥರಿಗೆ ಯಾವ ನ್ಯಾಯಾಲಯವು ನ್ಯಾಯ ಕೊಡದ ಹಿನ್ನೆಲೆಯಲ್ಲಿ ಇದೀಗ ರಾಜ್ಯದಲ್ಲಿ ಜನತಾ ನ್ಯಾಯಾಲಯ ಆರಂಭದ ಕೂಗು ಎದಿದ್ದೆ. ಇದಕ್ಕೆ ಚನ್ನರಾಯಪಟ್ಟಣವೇ ವೇದಿಕೆಯಾಗಲಿದೆ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಅ.28 ರಂದು ಪಟ್ಟಣದ ಕಾರ್ ಸ್ಟ್ಯಾಂಡ್ ನಿಲ್ದಾಣದ ಬಳಿ ರಾಜ್ಯದ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ವೇದಿಕೆ ಕಾರ್ಯಕ್ರಮ ಹಾಗೂ ಬಹಿರಂಗ ಸಭೆ ಏರ್ಪಡಿಸಲಾಗಿದೆ. ಮಹೇಶ್‌ಶೆಟ್ಟಿ ತಿಮ್ಮರೊಡಿ, ಸೌಜನ್ಯಾಳ ತಾಯಿ ಸೇರಿ ಅವರ ಕುಟುಂಬದವರು ಭಾಗವಹಿಸಲಿದ್ದಾರೆ. ನ್ಯಾಯಕ್ಕಾಗಿ ಮುಖ್ಯಮಂತ್ರಿಯನ್ನು ಈ ಮೂಲಕ ಒತ್ತಾಯಿಸುವುದು ಮತ್ತು ಪ್ರಧಾನ ಮಂತ್ರಿ ಈ ಪ್ರಕರಣಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಜನತಾ ನ್ಯಾಯಾಲಯ ಆರಂಭಿಸಲಾಗುವುದು ಎಂದರು.

    ಸುದ್ದಿಗೋಷ್ಠಿಯಲ್ಲಿ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಸಿ.ಎನ್.ಮಂಜುನಾಥ್, ವಿವಿಧ ಸಂಘಟನೆಗಳ ಮುಖಂಡರಾದ ನಾಗರತ್ನ, ಸಿ.ಜಿ.ರವಿ, ಮೀಸೆ ಮಂಜಣ್ಣ, ಮಹೇಶ್, ಡಾ.ಮಂಜುನಾಥ್, ಜಿ.ಆರ್.ಶರತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts