More

    ರಾಹುಲ್ ಗಾಂಧಿಗೆ ಬಾಕ್ಸಿಂಗ್ ಕಲಿಸಿದ್ದ ಕೋಚ್ ಇನ್ನಿಲ್ಲ

    ನವದೆಹಲಿ: ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿಗಳನ್ನು ಹೊಂದಿರುವ ಕಾಂಗ್ರೆಸ್ ನಾಯಕ ರಾಹುಲ್ ವಿವಿಧ ಮಾರ್ಷಲ್ ಕಲೆಗಳನ್ನು ಬಲ್ಲರು. 2008ರಲ್ಲಿ ಅವರು ಬಾಕ್ಸಿಂಗ್ ಕ್ರೀಡೆಯ ಬಗ್ಗೆಯೂ ಆಸಕ್ತಿ ವಹಿಸಿದ್ದರು. ಆಗ ಅವರಿಗೆ ಬಾಕ್ಸಿಂಗ್ ಕೌಶಲಗಳನ್ನು ಕಲಿಸಿಕೊಟ್ಟಿದ್ದವರು ಒ.ಪಿ. ಭಾರಧ್ವಾಜ್. ಬಾಕ್ಸಿಂಗ್ ಕ್ರೀಡೆಯಲ್ಲಿ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾದ ದೇಶದ ಮೊದಲ ಬಾಕ್ಸಿಂಗ್ ಕೋಚ್ ಎಂಬ ಹೆಗ್ಗಳಿಕೆಯ ಒ.ಪಿ. ಭಾರಧ್ವಾಜ್ ಅವರು ದೀರ್ಘಕಾಲದ ಅನಾರೋಗ್ಯ ಮತ್ತು ವಯೋಸಹಜ ಸಮಸ್ಯೆಗಳಿಂದ ಶುಕ್ರವಾರ ನಿಧನ ಹೊಂದಿದರು.

    82 ವರ್ಷದ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಸಂತೋಷ್ ಅವರನ್ನು 10 ದಿನಗಳ ಹಿಂದಷ್ಟೇ ಕಳೆದುಕೊಂಡಿದ್ದರು. 1985ರಲ್ಲಿ ಮೊದಲ ಬಾರಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲು ಆರಂಭಿಸಿದಾಗ ಒ.ಪಿ. ಭಾರಧ್ವಾಜ್, ಬಾಲಚಂದ್ರ ಭಾಸ್ಕರ್ ಭಾಗ್ವಾತ್ (ಕುಸ್ತಿ) ಮತ್ತು ಒ.ಎಂ. ನಂಬಿಯಾರ್ (ಅಥ್ಲೆಟಿಕ್ಸ್) ಜತೆಗೂಡಿ ಈ ಗೌರವ ಪಡೆದಿದ್ದರು.

    ಇದನ್ನೂ ಓದಿ: ಆರ್‌ಸಿಬಿ ಆಟಗಾರ ಟೀಮ್ ಇಂಡಿಯಾಗೆ ಮೀಸಲು ವಿಕೆಟ್ ಕೀಪರ್ ಆಗಿ ಆಯ್ಕೆ

    ಭಾರಧ್ವಾಜ್ 1968ರಿಂದ 1989ರವರೆಗೆ ಭಾರತ ಬಾಕ್ಸಿಂಗ್ ತಂಡದ ಕೋಚ್ ಆಗಿದ್ದರು. ಜತೆಗೆ ಬಾಕ್ಸಿಂಗ್ ತಂಡದ ಆಯ್ಕೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರ ಗರಡಿಯಲ್ಲಿ ಭಾರತೀಯ ಬಾಕ್ಸರ್‌ಗಳು ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ದಕ್ಷಿಣ ಏಷ್ಯಾ ಗೇಮ್ಸ್‌ಗಳಲ್ಲಿ ಹಲವಾರು ಪದಕಗಳನ್ನು ಜಯಿಸಿದ್ದರು.

    ಪಟಿಯಾಲದ ರಾಷ್ಟ್ರೀಯ ಕ್ರೀಡಾ ಇನ್‌ಸ್ಟಿಟ್ಯೂಟ್‌ನಲ್ಲಿ (ಎನ್‌ಐಎಸ್) ಅವರು ಬಾಕ್ಸಿಂಗ್ ಕೋಚಿಂಗ್ ಡಿಪ್ಲೋಮಾ ಕೋರ್ಸ್‌ಗೆ ಅವರು ಮೊದಲ ಮುಖ್ಯ ಬೋಧಕ ಆಗಿದ್ದರು. ಬಾಕ್ಸಿಂಗ್ ಪಂದ್ಯಗಳ ವೀಕ್ಷಕವಿವರಣೆಯನ್ನೂ ನೀಡುತ್ತಿದ್ದ ಅವರು, ದೆಹಲಿಯಲ್ಲಿ ಸ್ವಂತ ಜಿಮ್ ಕೂಡ ಹೊಂದಿದ್ದರು. ಎನ್‌ಐಎಸ್‌ನಲ್ಲಿ ಭಾರಧ್ವಾಜ್ ಅವರಿಂದ ತರಬೇತಿ ಪಡೆದಿದ್ದ ಗುರ್ಬಕ್ಷ್ ಸಿಂಗ್ ಸಂಧು ಸಹಿತ ಅನೇಕ ಶಿಷ್ಯರು ನಂತರದಲ್ಲಿ ರಾಷ್ಟ್ರೀಯ ಬಾಕ್ಸಿಂಗ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

    ದೇಶದ 13 ಸಾವಿರ ಕ್ರೀಡಾಪಟು, ಕೋಚ್‌ಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts