More

    ದೇಶದ 13 ಸಾವಿರ ಕ್ರೀಡಾಪಟು, ಕೋಚ್‌ಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ!

    ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ಕೇಂದ್ರ ಸರ್ಕಾರ ದೇಶದ ಕ್ರೀಡಾಪಟುಗಳು ಮತ್ತು ಕೋಚ್‌ಗಳಿಗೆ ನೀಡಲಾಗುವ ವಿಮೆಯ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದೆ. ಈ ವರ್ಷ 13 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು, ಕೋಚ್ ಮತ್ತು ಇತರ ಸಿಬ್ಬಂದಿಗೆ ವೈದ್ಯಕೀಯ ಮತ್ತು ಅಪಘಾತ ವಿಮೆ ನೀಡಲಾಗುವುದು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಗುರುವಾರ ತಿಳಿಸಿದೆ.

    ದೇಶದ ಕ್ರೀಡಾಪಟುಗಳು ಮತ್ತು ಕೋಚ್‌ಗಳ ಬಗೆಗಿನ ಕಾಳಜಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅವರು ದೇಶದ ಆಸ್ತಿ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ರಾಷ್ಟ್ರೀಯ ಕ್ರೀಡಾ ಶಿಬಿರದಲ್ಲಿರುವವರು ಮತ್ತು ಸಂಭಾವ್ಯರು, ಖೇಲೋ ಇಂಡಿಯಾ ಕ್ರೀಡಾಪಟುಗಳು, ದೇಶದೆಲ್ಲೆಡೆಯ ಸಾಯ್ ಎಕ್ಸಲೆನ್ಸ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ಜೂನಿಯರ್ ಕ್ರೀಡಾಪಟುಗಳು ಈ ಯೋಜನೆಯ ಅನ್ವಯ ತಲಾ 5 ಲಕ್ಷ ರೂ. ವಿಮೆ ಪಡೆಯಲಿದ್ದಾರೆ. ಜತೆಗೆ 25 ಲಕ್ಷ ರೂ. ಅಪಘಾತ ಮತ್ತು ಮರಣದ ವಿಮೆಯೂ ಇದರಲ್ಲಿ ಒಳಗೊಂಡಿರುತ್ತದೆ. ಈ ಮುನ್ನ ರಾಷ್ಟ್ರೀಯ ಶಿಬಿರದಲ್ಲಿರುವ ಕ್ರೀಡಾಪಟುಗಳಿಗೆ ಮಾತ್ರ ಕೇಂದ್ರ ಸರ್ಕಾರದ ವಿಮೆ ಅನ್ವಯಿಸುತ್ತಿತ್ತು. ಅಲ್ಲದೆ ರಾಷ್ಟ್ರೀಯ ಶಿಬಿರದಿಂದ ಹೊರಗಿರುವ ಸಮಯದಲ್ಲೂ ಅಂದರೆ ವರ್ಷ ಪೂರ್ತಿ ಈ ವಿಮೆ ಅನ್ವಯಿಸಲಿದೆ.

    ಇದನ್ನೂ ಓದಿ: ಟೀಮ್ ಇಂಡಿಯಾ ವೇಗದ ಬೌಲರ್​ಗೆ ಪಿತೃವಿಯೋಗ

    ವಿಮೆ ಯೋಜನೆಯಡಿ ಬರುವ ಕ್ರೀಡಾಪಟುಗಳನ್ನು ಗುರುತಿಸಿ ಪಟ್ಟಿ ನೀಡುವಂತೆ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಸಾಯ್ ಸೂಚಿಸಿದೆ. ಈ ಅಂಕಿ-ಅಂಶವನ್ನು ರಾಷ್ಟ್ರೀಯ ಕ್ರೀಡಾ ಮಾಹಿತಿ ಸಂಗ್ರಹಗಾರದಲ್ಲಿ ದಾಖಲಿಸಲಾಗುವುದು. ಈ ಮೂಲಕ ಪಾರದರ್ಶಕ ವ್ಯವಸ್ಥೆ ರೂಪಿಸಲಾಗುವುದು ಎಂದು ಸಾಯ್ ತಿಳಿಸಿದೆ.

    ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಅರ್ಜಿ ಆಹ್ವಾನ
    ಖೇಲ್‌ರತ್ನ, ಅರ್ಜುನ ಸಹಿತ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಕ್ರೀಡಾ ಸಚಿವಾಲಯ ಗುರುವಾರ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಕ್ರೀಡಾಪಟುಗಳು, ಕೋಚ್‌ಗಳು ಮತ್ತು ಸಂಸ್ಥೆಗಳು ಸ್ವಯಂ ಅರ್ಜಿ ಸಲ್ಲಿಸಬಹುದಾಗಿದೆ. ಕರೊನಾ ಹಾವಳಿಯಿಂದಾಗಿ ಈ ಸಲವೂ ಆನ್‌ಲೈನ್ ಮೂಲಕ ಜೂನ್ 21ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಕಳೆದ ವರ್ಷ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭವೂ ವರ್ಚುವಲ್ ಮೂಲಕ ನಡೆದಿತ್ತು. ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು ಕ್ರೀಡಾ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರದಾನ ಮಾಡುತ್ತಾರೆ.

    ಆ ಪಂದ್ಯದ ಬಳಿಕ ನನಗೆ ಮತ್ತು ಪತ್ನಿಗೆ ಜೀವ ಬೆದರಿಕೆ ಬಂದಿತ್ತು ಎಂದ ಫಾಫ್​ ಡು ಪ್ಲೆಸಿಸ್!

    ಮಹಿಳಾ ಕ್ರಿಕೆಟರ್ ತಾಯಿಯ ಕೋವಿಡ್ ಚಿಕಿತ್ಸೆಗೆ ನೆರವಾದ ವಿರಾಟ್ ಕೊಹ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts