More

    ಚಿರು ಸರ್ಜಾ ತಿಥಿ; ಎಲ್ಲಿ, ಯಾವತ್ತು, ಹೇಗೆ ನಡೆಯಲಿದೆ?; ಕರೊನಾ ಹಿನ್ನೆಲೆ ಕುಟುಂಬಸ್ಥರಿಂದ ಕಠಿಣ ನಿರ್ಧಾರ …

    ಬೆಂಗಳೂರು: ಕಳೆದ ಭಾನುವಾರ ಸಾವನ್ನಪ್ಪಿದ ಚಿರಂಜೀವಿ ಸರ್ಜಾ ಅಗಲಿಕೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಾಗಲೇ ಅವರಿಲ್ಲದೆ ಏಳು ದಿನಗಳು ಕಳೆದವು. ದುಃಖದ ಮಡುವಿನಲ್ಲಿಯೇ ಇಡೀ ಕುಟುಂಬ ಕಣ್ಣೀರು ತೊಳೆಯುತ್ತಿದೆ. ಅಣ್ಣನನ್ನು ಕಳೆದುಕೊಂಡ ದುಃಖ ಧ್ರುವನಿಗೆ ಬಾಧಿಸಿದರೆ, ಇಷ್ಟಪಟ್ಟು, ಕಷ್ಟಪಟ್ಟು ಪಡೆದುಕೊಂಡ ಪತಿ ಇನ್ನಿಲ್ಲ ಎಂಬ ಕೊರಗಿನಲ್ಲಿ ಗರ್ಭಿಣಿ ಮೇಘನಾ ಕಣ್ಣೀರಿಡುತ್ತಿದ್ದಾರೆ.
    ಇತ್ತ ಅಭಿಮಾನಿಗಳದ್ದು ಮತ್ತೊಂದು ಥರದ ಯಾತನೆ. ಒಟ್ಟಾರೆಯಾಗಿ ಚಿರು ಸರ್ಜಾ ಸಾವು ಕೇವಲ ಕುಟುಂಬಕ್ಕಷ್ಟೇ ನೋವು ತರಿಸಿಲ್ಲ. ಇಡೀ ನಾಡು ಅವರ ಸಾವಿಗೆ ಕಂಬನಿ ಮಿಡಿದಿದೆ. ಆ ಸಾವಿನಲ್ಲೂ ಇದೀಗ ಅವರ ತಿಥಿ ಬಗ್ಗೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಂದಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸಿಕೊಂಡೇ ಮುಂದುವರಿಯುತ್ತಿದೆ.

    ಇದನ್ನೂ ಓದಿ: ‘ಅಪ್ಪ’ನಾಗುತ್ತಿರುವ ಖುಷಿಯಲ್ಲಿದ್ದರು ಚಿರು ಸರ್ಜಾ; ಮಗು ಹುಟ್ಟುವ ಮುನ್ನವೇ ಇವರು ಹೊರಟುಬಿಟ್ಟರು…

    ಹೌದು, ಸರ್ಜಾ ಕುಟುಂಬದ ಆಪ್ತ ಶಿವಾರ್ಜುನ್​ ‘ವಿಜಯವಾಣಿ’ ಜತೆಗೆ ಮಾತನಾಡಿ, ಚಿರಂಜೀವಿ ಸರ್ಜಾ ತಿಥಿ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಚಿರು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದು ಜೂ.7ರಂದು. ಅಲ್ಲಿಂದ 11 ದಿನ ಅಂದರೆ, ಜೂ. 17ರ ಬುಧವಾರ ತಿಥಿ ಕಾರ್ಯ ಮಾಡಲು ಕುಟುಂಬದವರೆಲ್ಲ ನಿರ್ಧರಿಸಿದ್ದೇವೆ. ಈಗಾಗಲೇ ಅದಕ್ಕೆ ಬೇಕಾದ ಸಕಲ ತಯಾರಿಯೂ ನಡೆಯುತ್ತಿದ್ದು, ಚಿರು ಸರ್ಜಾ ಅಂತ್ಯಸಂಸ್ಕಾರ ನೆರವೇರಿದ ಕನಕಪುರ ರಸ್ತೆಯ ನೆಲಗುಳಿಯ ಬೃಂದಾವನ ಫಾರ್ಮ್​ಹೌಸ್​ನಲ್ಲಿ ನೆರವೇರಲಿದೆ’ ಎನ್ನುವ ಶಿವಾರ್ಜುನ್, ಒಂದಷ್ಟು ಕಠಿಣ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

    ಇದನ್ನೂ ಓದಿ: ಚಿರು ಸರ್ಜಾ ಆ್ಯಂಡ್​ ಗ್ಯಾಂಗ್​; ಇವು ಬಾಲ್ಯದ ಹಸಿ ಹಸಿ ನೆನಪುಗಳು..

    ಅಂತ್ಯಸಂಸ್ಕಾರದ ವೇಳೆ, ಕರೊನಾ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಸಾವಿರಾರು ಅಭಿಮಾನಿಗಳು ಬಸವನಗುಡಿ ಕೆಆರ್​ ರಸ್ತೆಯ ಮನೆ ಬಳಿ ಆಗಮಿಸಿದ್ದರು. ಅದೇ ರೀತಿ ಮತ್ತೆ ಘಟಿಸಬಾರದು ಎಂಬ ಕಾರಣಕ್ಕೆ ಪೊಲೀಸ್​ ಇಲಾಖೆ ಸರ್ಜಾ ಕುಟುಂಬಕ್ಕೆ ಸಾಮಾಜಿಕ ಅಂತರ ಪಾಲಿಸುವಂತೆ ಆದೇಶಿಸಿದೆ. ಹಾಗಾಗಿ, ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಷ್ಟೇ ತಿಥಿ ಕಾರ್ಯ ನೆರವೇರಿಸಲು ನಿರ್ಧರಿಸಿದೆ

    PHOTOS| ಇದು ನನ್ನ ಪ್ರಪಂಚ, ಇಲ್ಲಿ ಆತನಿಗಷ್ಟೇ ಎಂಟ್ರಿ!; ಮತ್ತೆ ಮತ್ತೆ ಭಾವುಕರಾದ ಧ್ರುವ …

    ಕಡಿಮೆ ಸಮಯದಲ್ಲಿ ಮಿಂಚಿ ಮರೆಯಾದವರು …

    ಚಿರಂಜೀವಿ ಸರ್ಜಾಗಿದ್ದ ಆರೋಗ್ಯದ ಸಮಸ್ಯೆಗಳೇನು?

    ಚಿರು ಸಾವಿನ ಬೆನ್ನಲ್ಲೇ ಅರ್ಜುನ್​ ಸರ್ಜಾ ಕಟ್ಟಿಸಿದ ಆಂಜನೇಯ ದೇವಸ್ಥಾನದ ಸ್ಥಿತಿ ಹೀಗಾಗಬಾರದಿತ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts