More

    ಲಾಕ್​ಡೌನ್​ ಅವಧಿಯಲ್ಲಿ ಸೆಕ್ಸ್​ ಟಾಯ್ಸ್​ಗೆ ಅಧಿಕ ಬೇಡಿಕೆ, ಕರ್ನಾಟಕಕ್ಕೆ ಎರಡನೇ ಸ್ಥಾನ!

    ನವದೆಹಲಿ: ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಇಡೀ ರಾಷ್ಟ್ರ ಮನೆ ಸೇರಿಕೊಂಡಿದ್ದರೆ, ಒಂದು ಉದ್ಯಮ ಮಾತ್ರ ಬಿರುಸಿನ ವ್ಯಾಪಾರ ವಹಿವಾಟು ನಡೆಸಿತು. ಅದುವೇ ಸೆಕ್ಸ್​ ಟಾಯ್ಸ್​ (ಲೈಂಗಿಕ ಬೊಂಬೆಗಳು) ತಯಾರಿಸಿ, ಮಾರಾಟ ಮಾಡುವ ಉದ್ಯಮವಾಗಿತ್ತು ಎಂಬುದು ಸತ್ಯದ ಮಾತು. ನೂರಕ್ಕೆ ನೂರು ಆನ್​ಲೈನ್​ನಲ್ಲಿ ನಡೆದ ಈ ವಹಿವಾಟಿನಲ್ಲಿ ಸೆಕ್ಸ್​ ಟಾಯ್ಸ್​ ಖರೀದಿಸಿದವರಲ್ಲಿ ಕರ್ನಾಟಕದ ಜನತೆ ಎರಡನೇ ಸ್ಥಾನದಲ್ಲಿದ್ದಾರೆ ಎಂಬುದು ಮತ್ತೂ ಅಚ್ಚರಿಯ ಸಂಗತಿಯಾಗಿದೆ.

    ಸೆಕ್ಸ್​ ಟಾಯ್ಸ್​ ಖರೀದಿದಾರರಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನ ತಮಿಳುನಾಡಿನದ್ದಾಗಿದೆ. ಈ ಮೂರು ರಾಜ್ಯಗಳಲ್ಲಿ ಲೈಂಗಿಕ ವಿಷಯದಲ್ಲಿ ತುಂಬಾ ಮಡಿವಂತಿಕೆ ಮತ್ತು ಮುಚ್ಚುಮರೆ ಅನುಸರಿಸಲಾಗುತ್ತದೆ. ಇಂಥದ್ದರಲ್ಲಿ ಈ ರಾಜ್ಯಗಳಿಂದ ಸೆಕ್ಸ್​ ಟಾಯ್ಸ್​ಗೆ ಬೇಡಿಕೆ ಬರುವುದು ಎಂದರೆ ಅಚ್ಚರಿಯ ಸಂಗತಿ. ಆದರೆ ಬದಲಾಗುತ್ತಿರುವ ಟ್ರಂಡ್​ ಅನ್ನು ಗಮನಿಸಿದಾಗ ಇದು ಅಚ್ಚರಿಪಡುವ ಸಂಗತಿಯೇ ಅಲ್ಲ ಎನಿಸದಿರದು.

    ಆನ್​ಲೈನ್​ನಲ್ಲಿ ಸೆಕ್ಸ್​ ಟಾಯ್ಸ್​ ಅನ್ನು ಮಾರಾಟ ಮಾಡುವ ThatsPersonal.com ವೆಬ್​ಸೈಟ್​ನ ಪ್ರಕಾರ ಲಾಕ್​ಡೌನ್​ ಅವಧಿಯಲ್ಲಿ ಸೆಕ್ಸ್​ ಟಾಯ್ಸ್​ಗಳ ಬೇಡಿಕೆ ಶೇ.65 ಹೆಚ್ಚಳವಾಗಿದೆ.

    ಇದನ್ನೂ ಓದಿ: ಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ- ಶಾಸಕ ಅಮರೇಗೌಡ ಬಯ್ಯಪುರ ಸೂಚನೆ

    ಸೆಕ್ಸ್​ ಟಾಯ್ಸ್​ ಖರೀದಿ ವಿಷಯದಲ್ಲಿ ಹೆಚ್ಚಿನ ವಿವರಗಳನ್ನು ಒದಗಿಸಿರುವ ವೆಬ್​ಸೈಟ್​, ಅತಿಹೆಚ್ಚು ಬೇಡಿಕೆಯ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಸೆಕ್ಸ್​ ಟಾಯ್ಸ್​ ಗರಿಷ್ಠ ಪ್ರಮಾಣದಲ್ಲಿ ಖರೀದಿಯಾಗಿವೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದ ಪೈಕಿ ಅತಿಹೆಚ್ಚು ಸೆಕ್ಸ್​ ಟಾಯ್ಸ್​ ಖರೀದಿಸಿದ ಹೆಗ್ಗಳಿಗೆ ಬೆಂಗಳೂರು ನಗರದ್ದಾಗಿದೆ. ರಾಷ್ಟ್ರರಾಜಧಾನಿ ದೆಹಲಿ ನಗರಕ್ಕೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ದೊರೆತಿದೆ.

    ಭಾರತದಲ್ಲಿ ಇಂದಿಗೂ ಕೂಡ ಸೆಕ್ಸ್​ ವಿಷಯದಲ್ಲಿ ತುಂಬಾ ಮಡಿವಂತಿಕೆ ಮತ್ತು ಮುಚ್ಚುಮರೆ ಮಾಡಲಾಗುತ್ತದೆ. ಆದರೆ, ThatsPersonal.com ವೆಬ್​ಸೈಟ್​ನ ಅಂಕಿ ಅಂಶಗಳನ್ನು ಗಮನಿಸಿದಾಗ 25ರಿಂದ 34 ವರ್ಷದವರು ಗರಿಷ್ಠ ಸಂಖ್ಯೆಯಲ್ಲಿ ಸೆಕ್ಸ್​ ಟಾಯ್ಸ್​ ಅನ್ನು ಖರೀದಿಸಿದ್ದಾರೆ. ಅಂದರೆ, ಹೊಸ ತಲೆಮಾರಿನ ಯುವಜನರು ಸೆಕ್ಸ್​ ವಿಷಯದಲ್ಲಿ ಮುಕ್ತತೆ ಕಾಯ್ದುಕೊಳ್ಳಲು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸೆಕ್ಸ್​ ವಿಚಾರದಲ್ಲಿ ಇವರು ಮಡಿವಂತಿಕೆಯನ್ನಾಗಲಿ ಅಥವಾ ಮುಚ್ಚುಮರೆಯನ್ನಾಗಲಿ ಮಾಡುವುದಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ ಎನ್ನಲಾಗಿದೆ.

    ಇದಕ್ಕೂ ಮುಖ್ಯವಾಗಿ, ಕೋವಿಡ್​-19 ಪಿಡುಗು ಜನರ ಜೀವನದ ಪಾಲಿಗೆ ಮಾರಕವಾಗಿ ಪರಿಣಮಿಸಿದ್ದರೂ ಲೈಂಗಿಕ ಚಟುವಟಿಕೆ ವಿಷಯದಲ್ಲಿ ಏನೊಂದು ಅಡ್ಡಿಯನ್ನುಂಟು ಮಾಡಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

    ಮಗನೇ.. ನನ್ನನ್ನು ಕೊಂದುಬಿಡು ಎಂದು ಅಂಗಲಾಚಿದ್ದ ತಾಯಿಯನ್ನು ದೇವರು ಕಾಪಾಡಲಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts