More

    ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಏಕಾಏಕಿ ಶೇ 40 ರಷ್ಟು ಏರಿಕೆ; ಕಾರಣವೇನು ಗೊತ್ತಾ?

    ಬೆಂಗಳೂರು: ಟೊಮ್ಯಾಟೋ, ಬೆಳ್ಳುಳ್ಳಿ, ಈರುಳ್ಳಿ ಬೆಲೆ ಏರಿಳಿತವಾಗುತ್ತಲೆ ಇರುತ್ತದೆ. ಕಳೆದ ಎರಡು ತಿಂಗಳಿನಿಂದ ೧೦೦ ರೂಪಾಯಿಗೆ ೫ ಕೆಜಿ ಮಾರಾಟವಾಗುತ್ತಿದ್ದ ಈರುಳ್ಳಿ ಇದೀಗ ದಿಢೀರನೆ ಬೆಲೆ ಏರಿಕೆಯಾಗಿದೆ.

    ದೇಶದ ಮಾರುಕಟ್ಟೆಗಳಲ್ಲಿ ಈರುಳ್ಳಿ ದರ ಮತ್ತೆ ಏರಿಕೆಯಾಗಿದೆ. ಪ್ರಮುಖ ನಗರಗಳ ಮಾರುಕಟ್ಟೆಯಲ್ಲಿ ಶೇ. 40 ರಷ್ಟು ದರ ಹೆಚ್ಚಿದೆ. ಇದಕ್ಕೆ ಮಾರುಕಟ್ಟೆ ಮೇಲೆ ರಫ್ತು ನಿಷೇಧ ನೀತಿ ಪ್ರಭಾವ ಬೀರಿರುವುದು ಕಾರಣ ಎನ್ನಲಾಗಿದೆ.

    ಬೆಲೆ ಏರಿಕೆಗೆ ಕಾರಣ: ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳುಳ್ಳಿ ದರ ಕೆ.ಜಿಗೆ 500 ರೂ. ದಾಟಿದೆ. ಈ ಮಧ್ಯೆ, ಈರುಳ್ಳಿ ದರ ಏರಿಕೆಯಾಗಿದೆ. ಮುಂದಿನ ಎರಡು ಮೂರು ತಿಂಗಳುಗಳಲ್ಲಿಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಮಾರ್ಚ್ 31ರ ನಂತರವೂ ನಿಷೇಧ ಮುಂದುವರಿಯುವ ಸಾಧ್ಯತೆ ಇದೆ.

    ರಾಬಿ ಋುತುವಿನಲ್ಲಿ(ಚಳಿಗಾಲ) ಈರುಳ್ಳಿ ಉತ್ಪಾದನೆ ಕುಸಿತ ಕಾಣುವ ಸಾಧ್ಯತೆ ಇದೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಬಿತ್ತನೆ ಕಡಿಮೆಯಾಗಿರುವುದರಿಂದ ಉತ್ಪಾದನೆ ದೊಡ್ಡ ಮಟ್ಟಕ್ಕೆ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಬೆಲೆ ಏರಿಕೆಯಾಗಿದೆ.

    ಈರುಳ್ಳಿ ರಫ್ತಿನ ಮೇಲಿನ ನಿಷೇಧ ಆರ್ಥಿಕ ವರ್ಷದ ಅಂತ್ಯ ಅಂದರೆ ಮಾ.31ರ ತನಕ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. ”ಕೇಂದ್ರ ಸರ್ಕಾರವು ದೇಶೀಯ ಮಟ್ಟದಲ್ಲಿಈರುಳ್ಳಿಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡಲು ಬಯಸುತ್ತಿದೆ. ಈ ಕಾರಣದಿಂದ ರಫ್ತು ನಿಷೇಧ ಮುಂದುವರಿಯಲಿದೆ,” ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್‌ ಕುಮಾರ್‌ಸಿಂಗ್‌ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿಎಷ್ಟಿದೆ ದರ?: ರಾಜಧಾನಿ ಬೆಂಗಳೂರು ನಗರದಲ್ಲಿಕಡಿಮೆ ದರ್ಜೆಯ ಈರುಳ್ಳಿಗೆ ಕೆ.ಜಿಗೆ 14 ರೂ. ಆಸುಪಾಸಿನಲ್ಲಿದರವಿದೆ. ಉತ್ತಮ ಗುಣಮಟ್ಟದ ಈರುಳ್ಳಿಗೆ ಕೆ.ಜಿಗೆ 20 ರೂ. ಸುಪಾಸಿನಲ್ಲಿದರವಿದೆ. ಆನ್‌ಲೈನ್‌ ತಾಣಗಳಲ್ಲಿಕೆ.ಜಿಗೆ 25-30 ರೂ. ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts