More

    ಹೊಚ್ಚ ಹೊಸ ಕಾರಿನಲ್ಲಿ ಅಂತಿಮ ಪ್ರಯಾಣ; ಇಬ್ಬರು ಸ್ನೇಹಿತರ ಬಲಿ ಪಡೆದವನಿಗೆ ಕೊನೆಗೂ ಜೈಲು ಶಿಕ್ಷೆ

    ಬೆಂಗಳೂರು: ನೈಸ್ ರಸ್ತೆಯಲ್ಲಿ ಇನ್ನೋವಾ ಕಾರು ಅಪಘಾತದಲ್ಲಿ ಇಬ್ಬರು ಸ್ನೇಹಿತರ ಸಾವಿಗೆ ಕಾರಣನಾದ ಚಾಲಕನಿಗೆ 6 ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

    ಪರಪ್ಪನ ಅಗ್ರಹಾರ ನಿವಾಸಿ ಭಾನುಕುಮಾರ್ (24) ಶಿಕ್ಷೆಗೆ ಗುರಿಯಾದ ಅಪರಾಧಿ. 2013ರ ಮಾ. 4ರಂದು ಸಂಭವಿಸಿದ ಅಪಘಾತದಲ್ಲಿ ಪರಪ್ಪನ ಅಗ್ರಹಾರದ ವಿಶ್ವನಾಥ್ (22), ಸಂತೋಷ್ (20) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ನಿಖಿಲ್ ಕುಮಾರ್ (23) ಮತ್ತು ಮಣಿಕಂಠ (23) ಎಂಬುವರು ಗಾಯಗೊಂಡಿದ್ದರು. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಬಿ.ಕೆ. ಶೇಖರ್ ನೇತೃತ್ವದ ತಂಡ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ. ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

    ಭಾನುಕುಮಾರ್ ಅವರ ತಂದೆ ಹೊಸ ಕಾರು ಖರೀದಿ ಮಾಡಿದ್ದರು. 2013ರ ಮಾರ್ಚ್ 4ರ ರಾತ್ರಿ ಇದೇ ಖುಷಿಯಲ್ಲಿ ಜಾಲಿರೇಡ್‌ಗೆ ಭಾನುಕುಮಾರ್, ರಾತ್ರಿ ಕಾರು ತೆಗೆದುಕೊಂಡು ತನ್ನ ಸ್ನೇಹಿತರನ್ನು ಕರೆದುಕೊಂಡು ಸುತ್ತಾಡಿ ಮದ್ಯದ ಪಾರ್ಟಿ ಮಾಡಿದ್ದರು. ಸಮಯ ಮೀರಿದ ಕಾರಣ ಊಟ ಎಲ್ಲಿಯೂ ಸಿಗದೆ ತುಮಕೂರು ರಸ್ತೆಗೆ ಹೋಗಲು ನೈಸ್ ರಸ್ತೆಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ ಬನ್ನೇರುಘಟ್ಟ ರಸ್ತೆಗೆ ತೆರಳುತ್ತಿದ್ದರು. ಅತಿ ವೇಗ ಮತ್ತು ಅಜಾಗರೂಕತೆಯಿಂದ ಇನ್ನೋವಾ ಕಾರಿನಲ್ಲಿ ಯುವಕರು ಬರುತ್ತಿದ್ದರು. ವಿಟ್ಟಸಂದ್ರ ಪ್ಲೈ ಓವರ್ ಹತ್ತಿರ ಕಾರು ಪಿಲ್ಲರ್‌ಗೆ ಗುದ್ದಿ ಪಲ್ಟಿಯಾಗಿತ್ತು. ತೀವ್ರ ಗಾಯಗೊಂಡ ವಿಶ್ವನಾಥ್ ಮತ್ತು ಸಂತೋಷ್ ಸ್ಥಳದಲ್ಲೇ ಮೃತಪಟ್ಟಿದ್ದರು.

    ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಂಚಾರ ಪೊಲೀಸರು, ಕಾರು ಚಾಲಕ ಭಾನುಕುಮಾರ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಗಾಯಾಳುಗಳು ಕಾರನ್ನು ಭಾನುಕುಮಾರ್ ಚಾಲನೆ ಮಾಡುತ್ತಿದ್ದ ಎಂಬ ಹೇಳಿಕೆ ಕೊಟ್ಟಿದ್ದರು. ಮೃತರ ಪಾಲಕರು ಸಹ ತಮ್ಮ ಮಕ್ಕಳನ್ನು ಭಾನುಕುಮಾರ್, ಕರೆದುಕೊಂಡು ಹೋಗಿದ್ದಾನೆ ಎಂದು ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಭಾನುಕುಮಾರ್ ಮದ್ಯ ಸೇವನೆ ಮಾಡಿರುವುದು ದೃಢವಾಗಿತ್ತು. ಈ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಅಪರಾಧಿ ಭಾನುಕುಮಾರ್‌ಗೆ 6 ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು 1.04 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪದವಿ ಪರೀಕ್ಷೆ ಒಂದು ತಿಂಗಳು ಮುಂದೂಡಲು ವಿಶ್ವವಿದ್ಯಾಲಯಗಳಿಗೆ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts