More

  ತಲೆ ಕೆಳಗಾಗಿ ನಡೆಯುತ್ತಾ ಅಯೋಧ್ಯೆಗೆ ಹೊರಟ ರಾಮಭಕ್ತ; ವಿಡಿಯೋ ನೋಡಿ

  ನವದೆಹಲಿ: ಅಯ್ಯೋಧ್ಯೆಯಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಜನವರಿ 22 ರಂದು ನಡೆಯಲಿದೆ. ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ದಿನದಂದು ರಾಮ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ರಾಮಭಕ್ತರೊಬ್ಬರು ತಮ್ಮ ಸಂಕಲ್ಪದಂತೆ ತಲೆಕೆಳಗಾಗಿ ನಡೆಯುತ್ತಾ ಪ್ರಭು ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಹೊರಟಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

  ರಾಮಭಕ್ತ ತಲೆಕೆಳಗಾಗಿ ನಡೆಯುತ್ತಾ, ಅಯೋಧ್ಯೆಗೆ ಶ್ರೀರಾಮನ ದರ್ಶನಕ್ಕೆ ಹೊರಟಿರುವಂತಹ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ವಿಡಿಯೋದಲ್ಲಿ ಏನಿದೆ?: ರಾಮಭಕ್ತರೊಬ್ಬರು ತಲೆ ಕೆಳಗಾಗಿ ತಮ್ಮ ಕೈಗಳಲ್ಲಿ ಹೆಜ್ಜೆಯಿಡುತ್ತಾ, ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ಹೊರಟಿರುವ ದೃಶ್ಯವನ್ನು ಕಾಣಬಹುದು. ಅಷ್ಟಕ್ಕೂ ಇವರು ಯಾವ ಊರಿನಿಂದ ಪಾದಯತ್ರೆ ಹೊರಟಿದ್ದಾರೆ ಎನ್ನವ ಮಾಹಿತಿ ಮಾತ್ರ ಲಭ್ಯವಾಗಿಲ್ಲ.

  ರಾಮಭಕ್ತರು ತಮ್ಮ ಊರುಗಳಿಂದ ಪಾದಯಾತ್ರೆಯ ಮೂಲಕವೇ ಪ್ರಭು ಶ್ರೀರಾಮನ ಜನ್ಮಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಸಂಕಲ್ಪ ತೆಗೆದುಕೊಂಡು ಈಗಾಗಲೇ ಅಯೋಧ್ಯೆಗೆ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ.

  ಅತಿಯಾದ ಕಫ ಇದ್ದರೆ ಸಿರಪ್ ಬದಲು ಈ ಕೆಲಸ ಮೊದಲು ಮಾಡಿ….

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts