More

    ಪಾಕ್​ನ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮ

    ನವದೆಹಲಿ: ಪಾಕಿಸ್ತಾನದ ಸೇನಾಪಡೆಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆ ಬಳಿಯ ಗಡಿ ನಿಯಂತ್ರಣ ರೇಖೆಯ ಸಮೀಪ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಗಡಿಭಾಗದ ಗ್ರಾಮಸ್ಥರೊಬ್ಬರಿಗೆ ಗಂಭೀರ ಗಾಯಗಳಾಗಿವೆ.

    ಭದ್ರತಾ ಪಡೆ ಅಧಿಕಾರಿಗಳು ಗುರುವಾರ ಈ ಬಗ್ಗೆ ಮಾಹಿತಿ ನೀಡಿದ್ದು, ಬುಧವಾರ ತಡರಾತ್ರಿ ಪಾಕ್​ ಯೋಧರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು. ತಾರ್​ಕುಂಡಿ ವಲಯದಲ್ಲಿ ಭಾರಿ ಶೆಲಿಂಗ್​ ದಾಳಿ ಸಂಘಟಿಸಿದ್ದರು. ಈ ದಾಳಿಯ ವೇಳೆ ಗಡಭಾಗದಲ್ಲಿ ಪಹರೆ ಕಾಯುತ್ತಿದ್ದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ವಿವರಿಸಿದ್ದಾರೆ.

    ಗಡಿ ಭಾಗದಲ್ಲಿರುವ ರಾಜಧಾನಿ ಎಂಬ ಗ್ರಾಮದ ನಿವಾಸಿ ನಯಾಮುತ್ತಲ್ಲಾ (35) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾಕ್​ ಯೋಧರು ಮಾರ್ಟರ್​ ಶೆಲ್​ ದಾಳಿ ನಡೆಸಿದ್ದು, ಅದರ ತುಂಡುಗಳು ಇವರ ದೇಹವನ್ನು ಹೊಕ್ಕಿವೆ. ಇವರ ಬಲ ಭುಜವನ್ನು ಹೊಕ್ಕಿದ್ದ ಈ ತುಂಡುಗಳನ್ನು ಲಘುಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಇದನ್ನೂ ಓದಿ: ಬಲೂಚಿಸ್ತಾನದಿಂದ ಪೇರಿ ಕಿತ್ತ ಪಾಕಿಸ್ತಾನ ಸೇನಾಪಡೆ, ಮಿಲಿಟರಿ ಕಟ್ಟಡಗಳಿಗೆ ಬೆಂಕಿ

    ಬದ್ಗಾಂನಲ್ಲಿ ಕಾರ್ಯಾಚರಣೆ: ಗುರುವಾರ ಮುಂಜಾವಿನಲ್ಲಿ ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ಭದ್ರತಾಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ. ಬದ್ಗಾಂನ ಪಠಾಣ್​ಪೋರಾ ಗ್ರಾಮದಲ್ಲಿ ಇಬ್ಬರು ಅಥವಾ ಮೂವರು ಉಗ್ರರು ಮನೆಯೊಂದರಲ್ಲಿ ಅಡಗಿಕೊಂಡಿರುವ ಸುಳಿವಿನ ಮೇರೆಗೆ ಭದ್ರತಾಪಡೆ ಸಿಬ್ಬಂದಿ ಆ ಮನೆಯನ್ನು ಸುತ್ತುವರೆದಿದ್ದರು. ಅಲ್ಲಿಂದ ತಪ್ಪಿಸಿಕೊಳ್ಳಲು ಉಗ್ರರು ಗುಂಡಿನ ದಾಳಿ ನಡೆಸಿದ್ದಾಗಿ ಹೇಳಲಾಗಿದೆ.

    ಕಳೆದ ಭಾನುವಾರದಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಭದ್ರತಾಪಡೆಯ ನಾಲ್ಕನೇ ಕಾರ್ಯಾಚರಣೆ ಇದಾಗಿದೆ. ಇದಕ್ಕೂ ಮುನ್ನ ಶೋಫಿಯಾನ್​ ಜಿಲ್ಲೆಯಲ್ಲಿ ಮೂರು ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು.

    ಚೆಂಡಿಗೆ ಎಂಜಲು ಹಚ್ಚಿದ್ರೆ 5 ರನ್ ದಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts