More

    ಚೆಂಡಿಗೆ ಎಂಜಲು ಹಚ್ಚಿದ್ರೆ 5 ರನ್ ದಂಡ!

    ದುಬೈ: ಕರೊನಾ ಸೋಂಕಿನ ಭೀತಿಯಿಂದಾಗಿ ಕ್ರಿಕೆಟಿಗರು ಚೆಂಡನ್ನು ಪಾಲಿಶ್ ಮಾಡಲು ಎಂಜಲು ಹಚ್ಚಬಾರದು ಎಂಬ ನಿಯಮವನ್ನು ಜಾರಿಗೆ ತಂದಿರುವ ಐಸಿಸಿ, ಅಂಪೈರ್​ಗಳ ಎಚ್ಚರಿಕೆಯ ಹೊರತಾಗಿಯೂ ಈ ರೀತಿ ಮಾಡುವುದನ್ನು ಮುಂದುವರಿಸಿದರೆ ಆ ತಂಡಕ್ಕೆ 5 ರನ್ ದಂಡ ವಿಧಿಸುವುದಾಗಿ ತಿಳಿಸಿದೆ. ಕರೊನಾ ಲಕ್ಷಣ ಕಂಡ ಆಟಗಾರನ ಬದಲಿಗೆ ಅವನಂಥದ್ದೇ ಕೌಶಲದ

    ಆಟಗಾರನನ್ನು ನೀಡುವ ನಿಯಮದ ಜತೆಗೆ ಐಸಿಸಿ, ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಿದೆ. ಇದರ ಹೊರತಾಗಿಯೂ ಆಟಗಾರರು ಎಂಜಲು ಹಚ್ಚುವುದನ್ನು ಮುಂದುವರಿಸಿದರೆ, ಪ್ರತಿ ಇನಿಂಗ್ಸ್​ಗೆ ಮೊದಲೆರಡು ಬಾರಿ ಅಂಪೈರ್ ಆ ತಂಡಕ್ಕೆ ಎಚ್ಚರಿಕೆ ನೀಡಲಿದ್ದಾರೆ. 3ನೇ ಬಾರಿ ಬ್ಯಾಟಿಂಗ್ ತಂಡದ ಖಾತೆಗೆ 5 ರನ್ ಹೆಚ್ಚುವರಿಯಾಗಿ ಸೇರಿಸಲಿದ್ದಾರೆ. ಇದಲ್ಲದೆ ಎಂಜಲು ಹಚ್ಚಲಾಗಿರುವ ಚೆಂಡನ್ನು ಅಂಪೈರ್ ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರವೇ ಮತ್ತೆ ಆಟ ಮುಂದುವರಿಯಲಿದೆ ಎಂದು ಐಸಿಸಿ ತಿಳಿಸಿದೆ.

    ನಷ್ಟ ನೀಗಿಸಲು ಹೆಚ್ಚುವರಿ ಲಾಂಛನಕ್ಕೆ ಅವಕಾಶ: ಕರೊನಾ ಹಾವಳಿ ನಡುವೆ ಆರ್ಥಿಕ ಮುಗ್ಗಟ್ಟಿನಲ್ಲಿರುವ ಕ್ರಿಕೆಟ್ ಮಂಡಳಿಗಳಿಗೆ ವಾಣಿಜ್ಯ ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವ ಸಲುವಾಗಿ ಐಸಿಸಿ, ರಾಷ್ಟ್ರೀಯ ತಂಡಗಳ ಜೆರ್ಸಿಯಲ್ಲಿ 32 ಇಂಚಿನ ಹೆಚ್ಚುವರಿ ಲಾಂಛನವನ್ನು ಬಳಸಲು ಅನುಮತಿ ನೀಡಿದೆ. ಮುಂದಿನ 12 ತಿಂಗಳು ಈ ಅವಕಾಶ ನೀಡಲಾಗುವುದು ಎಂದು ಐಸಿಸಿ ತಿಳಿಸಿದೆ. ಅಲ್ಲದೆ ಲಾಂಛನದ ಅಳತೆ 32 ಇಂಚಿಗಿಂತ ಹೆಚ್ಚಿರಬಾರದು, ಟೆಸ್ಟ್ ಪಂದ್ಯದ ವೇಳೆ ಆಟಗಾರರ ಜೆರ್ಸಿಯ ಎದೆ ಭಾಗದಲ್ಲಿರಬೇಕು ಎಂದು ಐಸಿಸಿ ತಿಳಿಸಿದೆ. -ಪಿಟಿಐ/ಏಜೆನ್ಸೀಸ್

    ಇಶಾಂತ್ ಶರ್ಮಗೆ ಸಂಕಷ್ಟ ತಂದ 6 ವರ್ಷ ಹಿಂದಿನ ಇನ್‌ಸ್ಟಾಗ್ರಾಂ ಪೋಸ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts