More

    ಅಮೆರಿಕದ ಇತಿಹಾಸದಲ್ಲೇ ಭಯಂಕರ ಸುಂಟರಗಾಳಿ!; 70ಕ್ಕೂ ಅಧಿಕ ಜನರ ಸಾವು, ಮೃತರ ಸಂಖ್ಯೆ 100 ದಾಟುವ ಸಾಧ್ಯತೆ!

    ಅಮೆರಿಕ: ಅಮೆರಿಕದ ಇತಿಹಾಸದಲ್ಲೇ ಭೀಕರ ಎನ್ನುವಂಥ ಸುಂಟರಗಾಳಿ ಬೀಸಿದ್ದು, ಈಗಾಗಲೇ 70ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಮಾತ್ರವಲ್ಲ, ಸತ್ತವರ ಸಂಖ್ಯೆ ನೂರನ್ನೂ ದಾಟುವ ಸಾಧ್ಯತೆಗಳು ಗೋಚರಿಸಿವೆ.

    ಸುಂಟರಗಾಳಿ, ಬಿರುಗಾಳಿಯ ತೀವ್ರತೆಗೆ ಕಟ್ಟಡಗಳು ಹಾನಿಗೀಡಾಗಿದ್ದು, ಜನರು ಪತರಗುಟ್ಟಿ ಹೋಗಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್​, ಇದು ಯುಎಸ್​ ಇತಿಹಾಸದಲ್ಲೇ ದೊಡ್ಡ ಬಿರುಗಾಳಿ ಎಂದು ಹೇಳಿದ್ದು, ಸಂತ್ರಸ್ತ ಜನರಿಗೆ ಅಗತ್ಯ ಸಹಾಯವನ್ನು ನೀಡುವ ಭರವಸೆಯನ್ನು ಕೊಟ್ಟಿದ್ದಾರೆ.

    ಶನಿವಾರ ಬೆಳಗ್ಗೆ ಗಂಟೆಗೆ ಸುಮಾರು 365 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದ್ದು, ಸಾವಿರಾರು ಮಂದಿ ತತ್ತರಿಸಿಹೋಗಿದ್ದಾರೆ. 60 ಸಾವಿರಕ್ಕೂ ಅಧಿಕ ಮಂದಿ ವಿದ್ಯುತ್ ಸಂಪರ್ಕದಿಂದ ವಂಚಿತರಾಗಿದ್ದಾರೆ. ಎಷ್ಟೋ ದೊಡ್ಡದೊಡ್ಡ ಕಟ್ಟಡಗಳ ಛಾವಣಿಯೇ ಹಾರಿಹೋಗಿದ್ದು, ಕೆಲವು ಕಟ್ಟಡಗಳು ಬಿರುಗಾಳಿ ಹೊಡೆತಕ್ಕೆ ಧ್ವಂಸಗೊಂಡಿವೆ.

    ಇಲಿನೊಯಿಸ್​ನ ಅಮೆಜಾನ್ ವೇರ್​ಹೌಸ್​ ಛಾವಣಿ ಗೋಡೆ ಸಹಿತ ಕುಸಿದು ಆರು ಮಂದಿ ಸಾವಿಗೀಡಾಗಿದ್ದಾರೆ. ನೂರಕ್ಕೂ ಅಧಿಕ ಎಮರ್ಜೆನ್ಸಿ ವಾಹನಗಳನ್ನು ತುರ್ತು ನೆರವಿಗಾಗಿ ಇಲ್ಲಿಗೆ ಕಳುಹಿಸಲಾಗಿದೆ. ನಾರ್ಥರ್ನ್​ ಅರ್ಕಾನ್ಸಾಸ್​ನಲ್ಲಿ ಮೊನೆಟ್ ಮಾನರ್ ನರ್ಸಿಂಗ್ ಹೋಮ್ ಕಟ್ಟಡ ಕುಸಿದಿದ್ದು, ಕನಿಷ್ಠ 20 ಮಂದಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

    ಅಮೆರಿಕದ ಇತಿಹಾಸದಲ್ಲೇ ಭಯಂಕರ ಸುಂಟರಗಾಳಿ!; 70ಕ್ಕೂ ಅಧಿಕ ಜನರ ಸಾವು, ಮೃತರ ಸಂಖ್ಯೆ 100 ದಾಟುವ ಸಾಧ್ಯತೆ! ಅಮೆರಿಕದ ಇತಿಹಾಸದಲ್ಲೇ ಭಯಂಕರ ಸುಂಟರಗಾಳಿ!; 70ಕ್ಕೂ ಅಧಿಕ ಜನರ ಸಾವು, ಮೃತರ ಸಂಖ್ಯೆ 100 ದಾಟುವ ಸಾಧ್ಯತೆ!

    ವಿವಾಹ ನೋಂದಣಿಯಂತೆ ಮತಾಂತರಕ್ಕೂ ನೋಂದಣಿ; ಒಮ್ಮೆ ಮತಾಂತರವಾದರೆ ಇವೆಲ್ಲ ಬದಲಾಗಲಿವೆ!?

    ‘ನನ್ನ ಗಂಡನ ಜತೆ ನಿಂಗೇನು ಕೆಲಸ?’ ಎಂದು ಗುಜರಿ ಅಂಗಡಿಗೆ ಬಂದಿದ್ದ ಮಹಿಳೆಗೆ ಬಾರಿಸಿದಳು; ಪತ್ನಿ ವಿರುದ್ಧ ಪತಿಯಿಂದಲೇ ದೂರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts