More

    success story; ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದ್ದ ವ್ಯಕ್ತಿ ಈಗ ಅಭಿಮಾನಿಗಳ ನೆಚ್ಚಿನ ನಟ

    ಬೆಂಗಳೂರು: ಪ್ರತಿಯೊಬ್ಬರ ಸಾಧನೆಯೆ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ.  ಒಂದೊಂದೆ ಮೆಟ್ಟಿಲು ಹತ್ತಿ ಸಾಧನೆಯನ್ನು ಮಾಡಬೇಕೆ ಹೊರತು ಒಮ್ಮೆಯೇ ಯಶಸ್ಸು ಎನ್ನುವುದು ಸಿಗಲು ಸಾಧ್ಯವಿಲ್ಲ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಯಾರು ಇದೀಗ ಯಶಸ್ಸಿನ ಹಾದಿಯಲ್ಲಿದ್ದಾರೋ ಅವರು ಕಷ್ಟವೇ ಕಂಡಿಲ್ಲ ಎಂದಿಲ್ಲ. ಅವರು ಕಷ್ಟಗಳನ್ನು ಮೆಟ್ಟಿ ನಿಂತೆ ಯಶಸ್ಸು ಕಂಡಿರುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಇಂದು ನಾವು ಸ್ಟಾರ್​ ನಟರೊಬ್ಬರ ಕಥೆಯನ್ನು ಮೆಲಕು ಹಾಕಲಿದ್ದೇವೆ.

    ನಟ ಸೂರ್ಯ ತಮಿಳು ಚಿತ್ರರಂಗದ ಖ್ಯಾತ ನಟ ಶಿವಕುಮಾರ್ ಅವರ ಪುತ್ರ. ಸೂರ್ಯ 1997 ರಲ್ಲಿ ಮಣಿರತ್ನಂ ಅವರ ಚಲನಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.  ತಮಿಳು ಸಿನಿಮಾಗಳಲ್ಲಿ ಅಭಿನಯಿಸುವ ಸೂರ್ಯ, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು.

    ಸೂರ್ಯ ತನ್ನ 22 ನೇ ವಯಸ್ಸಿನಲ್ಲಿ ನೆರುಕ್ಕು ನೇರ್ (1997) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಆ ನಂತರ 2001ರಲ್ಲಿ ‘ನಂದಾದಲ್ಲಿ’ ಸಿನಿಮಾದಲ್ಲಿ ಅತ್ಯುತ್ತಮ ಪಾತ್ರವನ್ನು ನಿರ್ವಹಿಸಿದರು. ನಂತರ ಹಿಟ್​​ ಸಿನಿಮಾಗಳನ್ನೇ ನೀಡುತ್ತಾ ಬಂದಿದ್ದಾರೆ.  90ರ ದಶಕದಲ್ಲಿ, ಸೂರ್ಯ ಅನೇಕ ಹಿಟ್ ಚಿತ್ರಗಳನ್ನು ನೀಡಿದ ಸೂರ್ಯ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮತ್ತು ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿಗಳ 100 ಮಂದಿಯ ಪಟ್ಟಿಯಲ್ಲಿ ಆರು ಬಾರಿ ಕಾಣಿಸಿಕೊಂಡಿದ್ದಾರೆ.

    ನಟನಾಗುವ ಮೊದಲು, ಸೂರ್ಯ ಕೆಲವು ತಿಂಗಳುಗಳ ಕಾಲ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದಾರೆ. ನಟನಾಗೋ ಮುನ್ನ ಈ ವ್ಯಕ್ತಿ ಗಾರ್ಮೆಂಟ್ಸ್‌ನಲ್ಲೂ ಕೆಲಸ ಮಾಡಿದ್ದರು.  ಆದರೆ, ಅವನು ತನ್ನ ಪ್ರಸಿದ್ಧ ತಂದೆಯ ಬಗ್ಗೆ ಯಾರಿಗೂ ತಿಳಿಸಲಿಲ್ಲ. ಸೂರ್ಯ ತನ್ನ ಗುರುತನ್ನು ರಹಸ್ಯವಾಗಿಟ್ಟುಕೊಂಡು ಕೆಲವು ತಿಂಗಳುಗಳ ಕಾಲ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ್ದಾರೆ. ಆದರೆ ಕೊನೆಗೊಂದು ದಿನ ಗಾರ್ಮೆಂಟ್‌ನ ಮಾಲೀಕರಿಗೆ ಈ ವಿಷಯ ತಿಳಿಯಿತು. ಸೂರ್ಯ ಅನಿವಾರ್ಯವಾಗಿ ಕೆಲಸ ಬಿಡಬೇಕಾಯಿತು. ನಂತರ ಸಿನಿಮಾ ಇವರ ಕೈ ಹಿಡಿಯಿತ್ತು. ಸಾಲುಸಾಲು ಹಿಟ್​ ಸಿನಿಮಾಗಳನ್ನು ನೀಡುತ್ತಾ ಅಭಿಮಾನಿಗಳ ನೆಚ್ಚಿನ ನಟ ಆದರು.

    ‘ಸಿಂಗಂ’ , ‘ಗಜಿನಿ’ ಮುಂತಾದ ಚಿತ್ರಗಳು ಸೂರ್ಯ ಅವರ ವೃತ್ತಿಜೀವನದಲ್ಲಿ ಮೈಲಿಗಲ್ಲುಗಳು. ಸೂರ್ಯ ನಟಿ ಜ್ಯೋತಿಕಾ ಅವರನ್ನು ಸೆಪ್ಟೆಂಬರ್ 11, 2006 ವಿವಾಹವಾದರು ಮತ್ತು ದಂಪತಿ ಏಳು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

    ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಪ್ರಾರಂಭ; 1 ಸೆಕೆಂಡ್‍ನಲ್ಲಿ 150 ಮೂವಿ ಡೌನ್ಲೋಡ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts