More

    ಸೂರ್ಯ ನಮಸ್ಕಾರ ಆರೋಗ್ಯಕ್ಕೆ ಸಹಕಾರಿ

    ಕಂಪ್ಲಿ: ಸೂರ್ಯ ನಮಸ್ಕಾರ ಮತ್ತು ಆರಾಧನೆಯಿಂದ ಆರೋಗ್ಯವರ್ಧನೆಯೊಂದಿಗೆ ಹಲವು ಪ್ರಯೋಜನಗಳು ಲಭಿಸಲಿವೆ ಎಂದು ಪತಂಜಲಿ ಯೋಗ ಕೇಂದ್ರದ ತಾಲೂಕು ಕಾರ್ಯದರ್ಶಿ ಷಣ್ಮುಖಪ್ಪ ಚಿತ್ರಗಾರ್ ಹೇಳಿದರು.

    ರಥಸಪ್ತಮಿ ನಿಮಿತ್ತ ಇಲ್ಲಿನ ಪೇಟೆ ಬಸವೇಶ್ವರ ಸಭಾಂಗಣದಲ್ಲಿ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡಿದ್ದ ವಿಶೇಷ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ನಿತ್ಯ ಸೂರ್ಯ ನಮಸ್ಕಾರ ಯೋಗಾಭ್ಯಾಸದಿಂದ ಮಾನಸಿಕ, ಶಾರೀರಿಕ, ಬೌದ್ಧಿಕ ಆರೋಗ್ಯ ಮತ್ತು ಜ್ಞಾನ ಲಭಿಸುತ್ತದೆ. ಮಾಘ ಶುಕ್ಲ ಸಪ್ತಮಿಯಂದು ಭಗವಾನ್ ವಿಷ್ಣು ಸೂರ್ಯದೇವನಾಗಿ ಅವತರಿಸಿದ್ದರಿಂದ ರಥಸಪ್ತಮಿ ಎನ್ನಲಾಗುತ್ತದೆ. ಈ ದಿನ ದಾನ ಧರ್ಮ ಕಾರ್ಯಗಳನ್ನು ಕೈಗೊಂಡಲ್ಲಿ ಪುಣ್ಯಸಂಪಾದಿಸಬಹುದು ಎಂದರು. ಕಲ್ಗುಡಿ ನಾಗರತ್ನಮ್ಮ, ಭವಾನಿ ಅವರು ಯೋಗ ಮಹತ್ವ ಸಾರುವ ಏಕಾಂಕ ನಾಟಕ ಪ್ರದರ್ಶಿಸಿದರು.

    ಎಎಸ್‌ಐ ವೆಂಕೋಬರಾವ್, ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳಾದ ಶಾಂತನಗೌಡ, ಇಟ್ಗಿ ವಿರೂಪಾಕ್ಷಿ, ಎಲ್‌ಐಸಿ ನಾಗಪ್ಪ, ಇಲ್ಲೂರು ಶ್ರೀನಿವಾಸ, ಸತ್ಯನಾರಾಯಣ, ಕಿಶೋರ, ಕಲ್ಗುಡಿ ರತ್ನಮ್ಮ, ಕಲ್ಗುಡಿ ನಾಗರತ್ನಮ್ಮ, ಭವಾನಿ, ಸರ್ವಮಂಗಳಾ, ಉಮಾದೇವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts