More

    ಹಬ್ಬ ಮುಗಿದ ಮರುದಿನ ವಿಶೇಷ ಪ್ರಾರ್ಥನೆಗೆ ಮನವಿ ಮಾಡಿ ಎಡವಟ್ಟು ಮಾಡಿಕೊಂಡ ಪಾಕ್​ ಪ್ರಧಾನಿ, ಟ್ವಿಟರ್​ನಲ್ಲಿ ಅಪಹಾಸ್ಯ

    ನವದೆಹಲಿ: ಯಾವುದೇ ದೇಶವಾಗಿರಲಿ. ಆಯಾ ದೇಶ ಹಾಗೂ ರಾಜ್ಯಗಳ ವಿಶೇಷ ದಿನಗಳಂದು, ಹಬ್ಬಹರಿದಿನಗಳಂದು ರಾಷ್ಟ್ರ ನಾಯಕರು ಶುಭಾಶಯ ಕೋರುವುದು ಅಥವಾ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿಕೊಳ್ಳುವುದು ವಾಡಿಕೆ. ಆದರೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಮಾತ್ರ ಹಬ್ಬದ ಮರುದಿನ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಕೋರಿ, ಅಪಹಾಸ್ಯಕ್ಕೀಡಾಗಿದ್ದಾರೆ.

    ಮುಸ್ಲಿಮರು ವಿಶ್ವಾದಾದ್ಯಂತ ಬುಧವಾರ ರಾತ್ರಿ ಶಬ್​ ಎ ಬರಾತ್​ ಹಬ್ಬ ಆಚರಿಸಿದ್ದರು. ಅದು ಮುಸ್ಲಿಮರ ಪಾಲಿನ ಹಿರಿಯರ ಹಬ್ಬವಾಗಿರುತ್ತದೆ. ಅಂದು ಗತಿಸಿದ ಹಿರಿಯರೆಲ್ಲರ ಆತ್ಮಗಳಿಗೆ ಶಾಂತಿ ಕೋರಿ, ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.

    ಸ್ವತಃ ಮುಸ್ಲಿಮ್​ ಸಮುದಾಯದವರಾಗಿದ್ದರೂ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​, ಹಬ್ಬದ ಮರುದಿನ ಅಂದರೆ ಗುರುವಾರ ರಾತ್ರಿ ಶಬ್​ ಎ ಬರಾತ್​ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಕೋರಿ ಟ್ವೀಟ್​ ಮಾಡಿದ್ದರು. ಇದನ್ನು ಕಂಡ ಟ್ವೀಟಿಗರು ಇಮ್ರಾನ್​ ಖಾನ್​ ಅವರ ಸಂದೇಶವನ್ನು ಖಂಡಿಸಿದರು, ಅಪಹಾಸ್ಯ ಮಾಡಿದರು.

    ತಪ್ಪಿನ ಅರಿವಾಗುತ್ತಲೇ ಇಮ್ರಾನ್​ ಖಾನ್​ ತಮ್ಮ ಟ್ವೀಟ್​ ಅನ್ನು ಡಿಲೀಟ್​ ಮಾಡಿದರು. ಆದರೆ ಅಷ್ಟರಲ್ಲೇ ಆಗಬಹುದಾಗಿದ್ದ ಅನಾಹುತ ಎಲ್ಲವೂ ಆಗಿ ಹೋಗಿತ್ತು.

    ಹಬ್ಬ ಮುಗಿದ ಮರುದಿನ ವಿಶೇಷ ಪ್ರಾರ್ಥನೆಗೆ ಮನವಿ ಮಾಡಿ ಎಡವಟ್ಟು ಮಾಡಿಕೊಂಡ ಪಾಕ್​ ಪ್ರಧಾನಿ, ಟ್ವಿಟರ್​ನಲ್ಲಿ ಅಪಹಾಸ್ಯ

    ನಾನು ಮನೆಯಲ್ಲೇ ಇರುವೆ ಎಂಬ ಸ್ಲೇಟ್​ ಹಿಡಿಸಿ, ಸಾಮಾಜಿಕ ಜಾಲತಾಣಕ್ಕೆ ಹಾಕಿಸಿ ವಿನೂತನ ಶಿಕ್ಷೆ, ಪೊಲೀಸರ ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts