More

    ಆರಕ್ಕೇರಿದ ಹಾಕಿ ಆಟಗಾರ ಕರೊನಾ ಪಾಸಿಟಿವ್ ಸಂಖ್ಯೆ

    ನವದೆಹಲಿ: ಭಾರತ ಹಾಕಿ ತಂಡದ ಮುನ್ಪಡೆ ಆಟಗಾರ ಮಂದೀಪ್ ಸಿಂಗ್ ಕೋವಿಡ್-19ರ ವರದಿಯಲ್ಲಿ ಪಾಸಿಟಿವ್ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಆವರಣದಲ್ಲಿರುವ ಕರೊನಾ ಪಾಸಿಟಿವ್ ಹೊಂದಿರುವ ಆಟಗಾರರ ಸಂಖ್ಯೆ ಆರಕ್ಕೇರಿದಂತಾಗಿದೆ. ಇದರಿಂದ ರಾಷ್ಟ್ರೀಯ ತರಬೇತಿ ಶಿಬಿರ ಆರಂಭಗೊಳ್ಳುವುದು ವಿಳಂಬವಾಗುವ ಸಾಧ್ಯತೆಗಳಿವೆ. ಪೂರ್ವ ನಿಗದಿಯಂತೆ ಆ.20 ರಿಂದ ತರಬೇತಿ ಶಿಬಿರ ಆರಂಭಗೊಳ್ಳಬೇಕಿತ್ತು. 25 ವರ್ಷದ ಪಂಜಾಬ್ ಆಟಗಾರನಿಗೆ ಇತರ ಐವರು ಆಟಗಾರರೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಇದನ್ನೂ ಓದಿ: VIDEO | ಮ್ಯಾಜಿಕ್​ ಟ್ರಿಕ್​ ಮೂಲಕ ಗಮನ ಸೆಳೆದ ಕ್ರಿಕೆಟಿಗ ಶ್ರೇಯಸ್​ ಅಯ್ಯರ್​!

    ‘ಸಾಯ್ ಕೇಂದ್ರದಲ್ಲಿ ನಡೆಸಲಾದ ಕೋವಿಡ್-19ರ ಪರೀಕ್ಷೆ ವೇಳೆ ರಾಷ್ಟ್ರೀಯ ತಂಡದ ಸದಸ್ಯ ಮಂದೀಪ್ ಸಿಂಗ್ ಅವರ ವರದಿ ಪಾಸಿಟಿವ್ ಬಂದಿದೆ’ ಎಂದು ಸಾಯ್ ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ನಾಯಕ ಮನ್‌ಪ್ರೀತ್ ಸಿಂಗ್, ಡಿಫೆಂಡರ್ ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್, ಡ್ರ್ಯಾಗ್ ಫ್ಲಿಕರ್ ವರುಣ್ ಕುಮಾರ್, ಗೋಲ್‌ಕೀಪರ್ ಕೃಷ್ಣನ್ ಬಹದೂರ್ ಪಾಠಕ್ ಅವರಿಗೆ ಕರೊನಾ ಕಾಣಿಸಿಕೊಂಡಿತ್ತು.

    ಇದನ್ನೂ ಓದಿ: VIDEO | ಐಪಿಎಲ್​ನಲ್ಲಿ ಕಣಕ್ಕಿಳಿಯಲು ಕನ್ನಡಿಗರು ಸಜ್ಜು

    ಟೋಕಿಯೊ ಒಲಿಂಪಿಕ್ಸ್ ಸಿದ್ಧತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ಕೋವಿಡ್-19ರ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ 2 ತಿಂಗಳ ಕಾಲ ಭಾರತ ಪುರುಷರ ಹಾಗೂ ಮಹಿಳಾ ತಂಡಗಳು ಸಾಯ್ ಕೇಂದ್ರದಲ್ಲೇ ಲಾಕ್ ಆಗಿದ್ದವು. ಬಳಿಕ 2 ತಂಗಳಿಗೂ ಒಂದು ತಿಂಗಳ ಕಾಲ ರಜೆ ನೀಡಲಾಗಿತ್ತು.

    ಐಸಿಸಿ ಅಂತಾರಾಷ್ಟ್ರೀಯ ಅಂಪೈರ್‌ಗಳ ಪ್ಯಾನೆಲ್‌ಗೆ ಭಾರತದ ಅನಂತಪದ್ಮನಾಭನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts