More

    ಐಸಿಸಿ ಅಂತಾರಾಷ್ಟ್ರೀಯ ಅಂಪೈರ್‌ಗಳ ಪ್ಯಾನೆಲ್‌ಗೆ ಭಾರತದ ಅನಂತಪದ್ಮನಾಭನ್

    ನವದೆಹಲಿ: ಭಾರತದ ಕೆಎನ್ ಅನಂತಪದ್ಮನಾಭನ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಂಪೈರ್‌ಗಳ ಪ್ಯಾನೆಲ್‌ಗೆ ಸೇರ್ಪಡೆಗೊಂಡಿದ್ದಾರೆ. ಇದಕ್ಕೂ ಮೊದಲು ಭಾರತದ ಮತ್ತೋರ್ವ ಅಂಪೈರ್ ನಿತಿನ್ ಮೆನನ್ ಎಲೈಟ್ ಪ್ಯಾನಲ್ ಅಂಪೈರ್ ಆಗಿ ನೇಮಕಗೊಂಡಿದ್ದರು. ಕೇರಳದ ಮಾಜಿ ಸ್ಪಿನ್ನರ್ ಆಗಿರುವ ಅನಂತಪದ್ಮನಾಭನ್, ಇದೀಗ ಏಕದಿನ ಹಾಗೂ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೆ, ಜೂನಿಯರ್ ವಿಶ್ವಕಪ್ ಟೂರ್ನಿಗಳಿಗೂ ಕಾರ್ಯನಿರ್ವಹಿಸಬಹುದು. ಭಾರತದ ಇತರ ಅಂಪೈರ್‌ಗಳಾದ ಸಿ.ಶಂಶುದ್ದೀನ್, ಅನಿಲ್ ಚೌಧರಿ ಹಾಗೂ ವೀರೇಂದರ್ ಶರ್ಮ ಅಂತಾರಾಷ್ಟ್ರೀಯ ಅಂಪೈರ್‌ಗಳಾಗಿದ್ದಾರೆ.

    ಇದನ್ನೂ ಓದಿ: VIDEO | ಮ್ಯಾಜಿಕ್​ ಟ್ರಿಕ್​ ಮೂಲಕ ಗಮನ ಸೆಳೆದ ಕ್ರಿಕೆಟಿಗ ಶ್ರೇಯಸ್​ ಅಯ್ಯರ್​!

    50 ವರ್ಷದ ಅನಂತಪದ್ಮನಾಭನ್, ಐಪಿಎಲ್ ಸೇರಿದಂತೆ ಪ್ರಮುಖ ದೇಶೀಯ ಟೂರ್ನಿಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಬಂಗಾಳ-ಸೌರಾಷ್ಟ್ರ ನಡುವಿನ ರಣಜಿ ಫೈನಲ್ ಪಂದ್ಯಕ್ಕೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಸಹ ಅಂಪೈರ್ ಶಂಶುದ್ದೀನ್ ಗಾಯಗೊಂಡ ಪರಿಣಾಮ ಎರಡೂ ಬದಿಯಲ್ಲೂ ಕಾಯನಿರ್ವಹಿಸಿದ್ದು ವಿಶೇಷ.

    ಇದನ್ನೂ ಓದಿ: VIDEO | ಐಪಿಎಲ್​ನಲ್ಲಿ ಕಣಕ್ಕಿಳಿಯಲು ಕನ್ನಡಿಗರು ಸಜ್ಜು

    ಅನಂತಪದ್ಮನಾಭನ್, ಕೇರಳ ಪರ 105 ಪ್ರಥಮ ದರ್ಜೆ, 54 ಲಿಸ್ಟ್ ಎ ಪಂದ್ಯಗಳಿಂದ ಕ್ರಮವಾಗಿ 344 ಹಾಗೂ 87 ವಿಕೆಟ್ ಕಬಳಿಸಿದ್ದಾರೆ. ಜತೆಗೆ ಪ್ರಥಮ ದರ್ಜೆಯಲ್ಲಿ 3 ಶತಕ, 8 ಅರ್ಧಶತಕ ಸಿಡಿಸಿದ್ದಾರೆ.

    ಕೊಹ್ಲಿಗೆ ತಂಡ ಸೇರ್ಪಡೆಗೊಳ್ಳಲು ಒಂದು ಷರತ್ತು ವಿಧಿಸಿದ ರಾಜಸ್ಥಾನ ರಾಯಲ್ಸ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts