More

    ಒಂದು ದೇಶ ಒಂದು ಚುನಾವಣೆಗೆ ವಿರೋಧ

    ಬಳ್ಳಾರಿ :ಒಂದು ದೇಶ ಒಂದು ಚುನಾವಣೆ ಮಾಡುವುದು ಕಷ್ಟ. ಗ್ರಾಮಪಂಚಾಯಿತಿಯಿಂದ ಲೋಕಸಭೆ ಚುನಾವಣೆ ವರೆಗೆ ಏಕಕಾಲದಲ್ಲಿ ಚುನಾವಣೆ ಮಾಡಲು ಸಾಧ್ಯ ಇದೆಯೇ? ಇದ್ದಿದ್ದರೆ ಈ ವರೆಗೆ ವಿಳಂಬ ಮಾಡಿದ್ದು ಏಕೆ ? ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದರು.

    ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದು ಇಷ್ಟು ವರ್ಷವಾದರೂ ಏಕೆ ಸುಮ್ಮನಿದ್ದರು. ಪ್ರಧಾನಿ ಮೋದಿ ಅವರ ಅವಧಿಯನ್ನು ಐರನ್‌ಲೆಗ್ ಎಂದು ಹೇಳಿದರು.

    ರಾಜ್ಯದಲ್ಲಿ 28 ಬಾರಿ ಅಲೆದರೂ ಬಿಜೆಪಿ ಪರ ಫಲಿತಾಂಶ ಸಿಗಲಿಲ್ಲ. ತಮಿಳುನಾಡು, ಪಶ್ಚಿಮ ಬಂಗಾಳದಲ್ಲೂ ಅವರಿಗೆ ಫಲಿತಾಂಶ ಬರಲಿಲ್ಲ. ಕೆಲ ಕಡೆಗಳಲ್ಲಿ ಬೇರೆ ಪಕ್ಷಗಳ ಬೆಂಬಲದ ಮೇಲೆ ಅಧಿಕಾರ ನಡೆಸುತ್ತಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿದ್ದಾರೆ ಎಂದರು.

    ಪೆಟ್ರೋಲ್, ಗ್ಯಾಸ್, ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದಿದ್ದ ಪ್ರಧಾನಿ ಮೋದಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಸ್ಕೀಂ ಜಾರಿಗೊಳಿಸಿದ್ದಕ್ಕೆ ಬಿಜೆಪಿಗರು ಹತಾಶೆ ಆಗಿದ್ದಾರೆ. ವಿಧಾನ ಸಭೆಗೆ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡುವುದಕ್ಕೂ ಕಷ್ಟದ ಸ್ಥಿತಿಗೆ ಬಿಜೆಪಿ ತಲುಪಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ರಾಹುಲ್ ಗಾಂಧಿ ಕನ್ಯಾಕುಮಾರಿ ಯಿಂದ ಕಾಶ್ಮೀರದ ವರೆಗೆ ಭಾರತ ಜೋಡೋ ಪಾದಯಾತ್ರೆಗೆ ಒಂದು ವರ್ಷ ಆಗಿದೆ. ದೇಶದ ಸಮಸ್ಯೆ ಅರ್ಥ ಮಾಡಿಕೊಳ್ಳುವುದಕ್ಕೆ ಪಾದಯಾತ್ರೆ ಮಾಡಲಾಗಿದೆ. 3500 ಕಿ.ಮೀ.ಗೂ ಹೆಚ್ಚು ಪಾದಯಾತ್ರೆ ಮಾಡಿದ್ದು ಐತಿಹಾಸಿಕವಾದದು. ಸಾಮರಸ್ಯ, ಏಕತೆ, ಸಮಗ್ರತೆಗಾಗಿ ಪಾದಯಾತ್ರೆ ಮಾಡಿದ್ದಾರೆ. ಆದರೆ ಬಿಜೆಪಿಗರು ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ವಿಪಕ್ಷಗಳ ಮೈತ್ರಿಕೂಟವಾದ ‘ಇಂಡಿಯಾ’ ಬಗ್ಗೆ ಬಿಜೆಪಿಗೆ ಹೆದರಿಕೆ ಶುರುವಾಗಿದೆ ಎಂದರು.

    ಮುಖಂಡರಾದ ಸಂಗನಕಲ್ಲು ವಿಜಯಕುಮಾರ್, ವೆಂಕಟೇಶ್ ಹೆಗಡೆ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts